ಚಿತ್ರದುರ್ಗ | ಮಾರ್ಚ್ 23 ರಿಂದ 28 ರವರೆಗೆ ವಿದ್ಯುತ್ ವ್ಯತ್ಯಯ

0 Min Read

 

ಚಿತ್ರದುರ್ಗ,(ಮಾರ್ಚ್.22) : ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಕ್ಕ-ಪಕ್ಕದಲ್ಲಿರುವ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಿರೇಗುಂಟನೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-13 ಮಳಲಿ 11 ಕೆ.ವಿ. ಮಾರ್ಗದಲ್ಲಿ  ಮಾರ್ಚ್ 23 ರಿಂದ 28ರವರೆಗೆ  ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಮಾರ್ಗಗಳಿಗೆ ಒಳಪಡುವ ಗ್ರಾಮಗಳಾದ ಭೀಮಸಮುದ್ರ, ವಡ್ಡರಪಾಳ್ಯ, ಎನ್.ಬಳ್ಳೆಕಟ್ಟೆ, ನಲ್ಲಿಕಟ್ಟೆ ಹಾಗೂ ಮಳಲಿ ಈ ಎಲ್ಲಾ ಗ್ರಾಮಗಳ ಸುತ್ತಮುತ್ತಲಿನ ಎಲ್ಲಾ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *