ದಾವಣಗೆರೆ: ಪಂಚಮಸಾಲಿ ಪೀಠದಲ್ಲಿ ಕಳೆದ ಕೆಲವು ದಿನಗಳಿಂದ ಏನೆಲ್ಲಾ ಆಯ್ತು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಲೆಕ್ಕ ಕೊಡಿ ಅಭಿಯಾನ, ಸ್ವಾಮೀಜಿಗಳ ತಲೆದಂಡದ ತನಕ ಬಂದು ನಿಂತಿದೆ. ಮಠದಿಂದ ಟ್ರಸ್ಟಿಗಳು ಉಚ್ಛಾಟನೆ ಮಾಡಿದ್ರು ಕೂಡ ಸ್ವಾಮೀಜಿ ಮಠವನ್ನು ಖಾಲಿ ಮಾಡಿಲ್ಲ. ಇದೀಗ ಪೊಲೀಸರು ವಚನಾನಂದ ಸ್ವಾಮೀಜಿ ಹಾಗೂ ಬೆಂಬಲಿಗರಿಗೆ ನೋಟೀಸ್ ನೀಡಿದ್ದಾರೆ.
ಪೊಲೀಸರು ಮಠಕ್ಕೆ ಬಂದಾಗ ಸ್ವಾಮೀಜಿ ಬೆಂಬಲಿಗರು ಜೋರು ಮಾಡಿದ್ದಾರೆ. ಆಗ ಪೊಲೀಸ್ ಅಧಿಕಾರಿ ಮಂಜುಳಾ ಅವರು ಕೋರ್ಟ್ ಆದೇಶ ಇದೆ ಎಂಬ ಮಾತನ್ನ ಹೇಳಿದ್ದಾರೆ. ನೋಟೀಸ್ ಕೂಡ ತೋರಿಸುವುದಕ್ಕೆ ಮುಂದಾಗಿದ್ದಾರೆ. ಬಳಿಕ ಬೆಂಬಲಿಗರು ಆ ನೋಟೀಸ್ ನೋಡ್ಬೇಕು ಕೊಡಿ ಎಂದು ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಾರ್ಯಾಲಯ ದಾವಣಗೆರೆ. ದಿನಾಂಕ 4-5-2026, ವಿಷಯ, ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶ್ರೀ ಪಂಚಮಸಾಲಿ ಮಠದ ಆವರಣದಲ್ಲಿ. ಸಭೆ, ಸಭಾರಂಭ ದಿನಾಂಕ 27.4.2026 ರವರೆಗೆ ನಡೆಸಿದ ಸಭೆಗಳನ್ನು ಅವಲೋಕಿಸಿದಾಗ ಮಠದಲ್ಲಿ ಉದ್ರೇಕ ಭಾಷಣಗಳನ್ನು ಮಾಡಿರುವುದು ತಿಳಿದು ಬಂದಿದೆ ಎಂಬುದಾಗಿ ನೋಟೀಸ್ ನಲ್ಲಿ ತಿಳಿಸಲಾಗಿದೆ.
ಈ ನೋಟೀಸ್ ಅನ್ನು ವಚನಾನಂದ ಸ್ವಾಮೀಜಿಗಳೇ ಓದಿದ್ದಾರೆ. ಸದ್ಯ ಪಂಚಮಸಾಲಿ ಮಠದಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಬೇರೆ ಯಾವುದೇ ಕಾರ್ಯಕ್ರಮಗಳು ಮಠದ ಆವರಣದಲ್ಲಿ ನಡೆಯುವಂತಿಲ್ಲ. ಮಠಕ್ಕೆ ಭಕ್ತಾಧಿಗಳು ಬಂದು ದರ್ಶನ ಮಾಡಿಕೊಂಡು ಹೋಗಬಹುದು ಅಷ್ಟೆ. ಈ ಸಂಬಂಧ ಖುದ್ದಾಗಿ ಪೊಲೀಸರೇ ಹೋಗಿ ನೋಟೀಸ್ ಕೊಟ್ಟಿದ್ದು, ಮಠದ ಗೇಟ್ ಬಳಿ ಇದಕ್ಕೆ ಸಂಬಂಧಿಸಿದಂತೆ ಬ್ಯಾನರ್ ಕೂಡ ಹಾಕಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











