Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅನರ್ಘ್ಯ ರತ್ನ ‘ ರಾಜ್ಯ ಪ್ರಶಸ್ತಿಗೆ ಕವಿ, ಹಿರಿಯ ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಆಯ್ಕೆ

---Advertisement---

 

ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 02 :ಬಾಗಲಕೋಟೆ ಜಿಲ್ಲೆಯ ವಿಶ್ವ ಬಂಜಾರ ಕಲಾ ಸಾಹಿತ್ಯ ಸಂಘ ಸಾಹಿತ್ಯ ಸೇವಾ ಕಾರ್ಯಕ್ಕೆ ಕೊಡಮಾಡುವ ವಾರ್ಷಿಕ ‘ ಅನರ್ಘ್ಯ ರತ್ನ ‘ ರಾಜ್ಯ ಪ್ರಶಸ್ತಿಗೆ ಚಳ್ಳಕೆರೆ ತಾಲೂಕಿನ ಕವಿ, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಭಾಜನರಾಗಿದ್ದಾರೆ ಎಂದು‌ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಚ್. ವಾಯ್ ರಾಠೋಡ ತಿಳಿಸಿದ್ದಾರೆ.

ಆಂಧ್ರ ಗಡಿ ಗ್ರಾಮದಲ್ಲಿ ಕನ್ನಡ ಸೇವಾ ಕಾರ್ಯಕ್ಕೆ ಕನ್ನಡ ಮನೆ ನಿರ್ಮಾಣ ಮಾಡಿರುವ ತಿಪ್ಪೇಸ್ವಾಮಿ, ಮೂರು ದಶಕಗಳಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡವರು.‌ ಚಿತ್ರದುರ್ಗ ಜಿಲ್ಲಾ ರಂಗಮಂದಿರಕ್ಕೆ ತರಾಸು ನಾಮಕರಣ ಮಾಡಬೇಕೆಂದು ಸ್ವಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿ ತನಕ 72 ಕಿಮೀ ಪಾದಯಾತ್ರೆ ಮಾಡಿ ಯಶಸ್ವಿ ಕಂಡವರು. ಬಯಲು ಸೀಮೆಯ ಜನ ಸಂಸ್ಕೃತಿಯ ಅನುಭವದಲ್ಲಿ ‘ ಜೇನಹನಿ’, ಮನದಾಳದ ಬಯಕೆ’, ಎದೆಯ ಕದವ ತೆರೆದು’, ಭಾವರೂಪ’, ಬರಹದ ಒಳನೋಟ ಸಂಕಲನಗಳನ್ನು ಸಾಹಿತ್ಯ ವಲಯಕ್ಕೆ ಕೊಡುಗೆ ನೀಡಿರುವ ಸೇವೆ ಗುರುತಿಸಿ,ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ.6 ರಂದು ಚಿತ್ರದುರ್ಗ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಜರುಗಲಿರುವ ಸಾಹಿತ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now