Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಧಾನಿ ಮೋದಿ ಜನ್ಮದಿನ: ಸೆ. 17 ರಿಂದ ಸೇವಾ ಪಾಕ್ಷಿಕ ಅಭಿಯಾನ : ಚಿತ್ರದುರ್ಗದಲ್ಲಿ ರಕ್ತದಾನ ಶಿಬಿರ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಸೆ.17 : ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನವಾದ ಸೆಪ್ಟೆಂಬರ್ 17 ರಿಂದ ಅ. 02 ರವರೆಗೆ ನಡೆಯುವ ಸೇವಾ ಪಾಕ್ಷಕಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ಇಂದು ನಗರದ ಬಂಜಾರ ಸಮುದಾಯ ಭವನದಲ್ಲಿ ಬಿಜೆಪಿ ನಗರ ಮಂಡಲದಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಕೇಂದ್ರಗಳಲ್ಲಿ ಹಂತ1ರಲ್ಲಿ ಸೆ. 17 ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಇದರಲ್ಲಿ ಸುಮಾರು 25 ಯೂನಿಟ್‍ಗಳಷ್ಟು ರಕ್ತವನ್ನು ಪಡೆಯಲಾಯಿತು. ಇದರಲ್ಲಿ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷರಾದ ಎಂ.ಸತೀಶ್‍ಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‍ಕುಮಾರ್ ತಿಮ್ಮಯ್ಯ, ಪ್ರದೀಪ್ ಬಸವರಾಜು, ಸಿದ್ದೇಶ್, ರಮೇಶ್ ಸೇರಿದಂತೆ ಸುಮಾರು 25 ಜನ ತಮ್ಮ ರಕ್ತವನ್ನು ದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ಬಾಮಿ, ಮಾನವನಿಗೆ ರಕ್ತ ಬಹಳಷ್ಟು ಅಗತ್ಯವಾಗಿದೆ. ರಕ್ತವನ್ನು ಕೃತಕವಾಗಿ ನಿರ್ಮಾಣ ಮಾಡಲು ಆಗುವುದಿಲ್ಲ, ಅಲ್ಲದೆ ಯಾವುದೇ ಪ್ರಾಣಿಗಳಿಂದಲೂ ಸಹಾ ಪಡಯಲು ಸಾಧ್ಯವಿಲ್ಲ ಮಾನವನ ರಕ್ತವನ್ನು ಮಾತ್ರ ಮಾನವನಿಗೆ ನೀಡಲು ಸಾಧ್ಯವಿದೆ ಈ ಹಿನ್ನಲೆಯಲ್ಲಿ ನಾವುಗಳು ನಮ್ಮ ಮನೆಯಲ್ಲಿ ವಿಶೇಷ ದಿನಗಳಂದು ರಕ್ತವನ್ನು ದಾನ ಮಾಡು ವುದರ ಮೂಲಕ ಬೇರೆಯವರ ಪ್ರಾಣಕ್ಕೆ ಸಹಾಯವಾಗಬೇಕಿದೆ ಮಾನವನಿಗೆ ಕೆಲವೊಂದು ಸಮಯದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಈ ಹಿನ್ನಲೆಯಲ್ಲಿ ಅಗತ್ಯ ಬಿದ್ಧಾಗ ಮಾತ್ರ ರಕ್ತವನ್ನು ದಾನ ಮಾಡದೇ ನಿಮಗೆ ಅನುಗುಣವಾಗಿ ರಕ್ತವನ್ನು ದಾನ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಸಿದ್ಧಾಪುರ ಸುರೇಶ್, ಮಾಜಿ ಅಧ್ಯಕ್ಷ ಎ.ಮುರಳಿ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತೆರ ಅಧ್ಯಕ್ಷ ನಾಗರಾಜ್, ವಕ್ತಾರ ನಾಗರಾಜ್ ಬೇದ್ರೇ, ಮಾಜಿ ನಗರಾಧ್ಯಕ್ಷ ಚಾಲುಕ್ಯ ನವೀನ್, ನಗರ ಪ್ರಧಾನ ಕಾರ್ಯದರ್ಶಿ ಬಸವೇಶ್, ಲೀಮಾವತಿ ಶಶಿಧರ್, ಎಸ್.ಸಿ. ಮೋರ್ಚಾ ಅಧ್ಯಕ್ಷ ತಿಪ್ಪೇಸ್ವಾಮಿ, ರಜನಿ, ಕವನ, ಬಸಮ್ಮ, ಶಾಂತಮ್ಮ, ಮಂಜುಳಮ್ಮ, ಚಂದ್ರಿಕಾ ಕಾಂಚನ ಕವಿತಾ ವೀಣಾ, ವಿಜಯಲಕ್ಷ್ಮೀ ಯೋಗೇಶ್ ಸಹ್ಯಾದ್ರಿ, ಶಂಭು ಬಸವರಾಜು, ನಗರಸಭೆಯ ಮಾಜಿ ಸದಸ್ಯರಾದ ಗರಡಿ ಪ್ರಕಾಶ್, ಲಿಂಗರಾಜು, ನಾಗರಾಜು ಆರ್ ಸೇರಿದಂತೆ ಬಿಜೆಪಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...