ಹಾಸನ: ಜಿಲ್ಕೆಯ ವಾಟ್ಸಾಪ್ ನಲ್ಲೆಲ್ಲಾ ಈ ಅಕ್ರಮದಲ್ಲಿ ಶಿವಲಿಂಗೇಗೌಡರದ್ದು ಇನ್ವಾಲ್ಮೆಂಟ್ ಇದೆ ಎಂಬ ಸುದ್ದಿ ಓಡಾಡುತ್ತಿದ್ದು, ಶಿವಲಿಂಗೇಗೌಡರು ಅದನ್ನು ಖಂಡಿಸಿದ್ದಾರೆ. ಈ ಸಂಬಂಧ ಮಾಧ್ಯಮದವರ ಮುಂದೆಯೂ ಮಾತನಾಡಿದ್ದಾರೆ.
ಇದು ನಿಜ, ಅಕ್ರಮ ನಡೆದಿದೆ. ಇದಕ್ಕೆ ಸಂಬಂಧಪಟ್ಟವರು ಯಾರು. ಅವರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು. ಸರ್ಕಾರದ ಗಮನಕ್ಕೆ, ಜಿಲ್ಲಾಡಳಿತದ ಗಮನಕ್ಕೆ ತರ್ತೀನಿ ಅಂತ ಹೇಳಿ ಹೋಗಿದ್ದೆ ನಾನು. ಮತ್ತೆ ಶಿವಲಿಂಗೇಗೌಡರಿಂದ ಆಗ್ಬಿಟ್ಟಿದೆ ಅಂತ ಹೇಳಿದ್ದಾರೆ. ಅವರಿಗೆ ಇನ್ಯಾವುದು ಕೆಲಸ ಇಲ್ಲ. ನಮ್ಮಲ್ಲಿ 94 ಅಂತ ಬರ್ತಾ ಇದೆ. ಸಕಲೇಶಪುರದಲ್ಲಿ 200-300 ಮಾಡಿದ್ದಾರೆ. ನಾನು ವಿರೋಧ ಪಕ್ಷ ಅಂತ ಹೇಳಿ ಸಕಲೇಶಪುರದವರ ಇನ್ವಾಲ್ಮೆಂಟ್ ಅಂತ ಹೇಳೋಣ್ವಾ. ಆಗಲ್ಲ.
ಯಾರು ಅಧಿಕಾರದಲ್ಲಿ ಇರ್ತಾರೆ ಆ ಪದ್ಧತಿನೇ ಆಗಿದೆ. ಲಾಗಿನ್ ಮುಟ್ಟೋರು ಯಾರು, ಲಾಗಿನ್ ಮಾಡೋದು ಯಾರು..? ಯಾರಿಗೂ ಗೊತ್ತಿಲ್ಲ. ಅದು ಬಹಳ ದಿವಸದಿಂದ ಆಗಿದೆ. ಕೊನೆಗೆ ಯಾವ್ದೋ ಮುಖಾಂತರ ಅಂಕಪುರದವರು ಹಿಡಿದು ದುಡ್ಡು ಹೇಗೆ ಇಷ್ಟೊಂದು ಬಂತು ಅಂತ ಗಲಾಟೆ ಮಾಡಿದಾಗ ಇವರು ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಇದಕ್ಕೆ ಯಾರೆಲ್ಲಾ ಇನ್ವಾಲ್ಮೆಂಟ್ ಇದಾರೆ ಅವರ ಮೇಲೆ ಎಫ್ಐಆರ್ ಹಾಕಿ ಸಸ್ಒಎಂಡ್ ಮಾಡಿದ್ದಾರೆ. ಇದರಲ್ಲಿ ಏನು ತಿಳಿದುಕೊಂಡಿದ್ದರು, ಯಾರೋ ರಾಜೇಶ್ ಎಂಬುವವನೊಬ್ಬ, ಇಲ್ಲಿ ಆಗಿರುವಂತ ತಪ್ಪು, ಅವನು ಹಂಗಾಮಿ ನೌಕರ, ಪರ್ಮನೆಂಟ್ ಎಂಪ್ಲಾಯ್ ಅಲ್ಲ. ಇಡೀ ಜಿಲ್ಲೆಗೆ, ಅರಸೀಕೆರೆ ಬಾಣವಾರ ಪಿಡಿಒಗೂ ಮಾಡಬೇಕಾದರೆ, ಅವನ ಕಾಂಟ್ಯಾಕ್ಟ್, 35 ಪಂಚಾಯ್ತಿ ಅವರು ಏನು ಮಾಡಿಲ್ಲ. ಇವನೊಬ್ಬ ಮಾಡಿದ್ದಾನೆ. ನಾನೆಲ್ಲ ತನಿಖೆ ಮಾಡಿಸಿದ್ದೀನಿ.
ನಾನೇ ಮೊದಲು ಮಾಧ್ಯಮದವರ ಮುಂದೆ ಬಂದು ಹೇಳಿದ್ದೀನಿ. ಇದರಲ್ಲಿ ಯಾರಿದ್ದಾರೆ ಅವನನ್ನ ಬಲಿ ಹಾಕಬೇಕು ಅಂತ ಹೇಳಿದ್ದೆ. ನಾನೇ ಇನ್ವಾಲ್ಮೆಂಟ್ ಇದ್ರೆ ನಾನೇ ಬಲಿ ಹಾಕ್ಬೇಕು ಅಂತ ಹೇಳ್ತೀನಾ ಎಂದು ಪ್ರಶ್ನೆ ಮಾಡಿದ್ದಾರೆ. ಅದರಲ್ಲಿ ನನ್ನ ಇನ್ವಾಲ್ಮೆಂಟ್ ಒಂದೇ ಒಂದು ಪೈಸೆದು ಇದೆ ಅಂದ್ರೆ ರಾಜಕೀಯ ನಿವೃತ್ತಿ ಅಂತ ಹೇಳಿದ್ದೀನಿ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












