Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತ-ಪಾಕ್ ಚಿನ್ನದ ದರ ವ್ಯತ್ಯಾಸ ನೋಡಿ ಜನ ಶಾಕ್!

---Advertisement---

ಭಾರತದಲ್ಲಿ ಚಿನ್ನದ ದರ ಏರಿಕೆಯಾಗುತ್ತಿರುವ ನಡುವೆಯೇ, ಪಾಕಿಸ್ತಾನದಲ್ಲೂ ಚಿನ್ನದ ಬೆಲೆಗಳು ಹೊಸ ಗರಿಷ್ಠ ಮಟ್ಟ ತಲುಪಿದ್ದು ಸಾಮಾನ್ಯ ಜನರಿಗೆ ಚಿನ್ನ ಖರೀದಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆರ್ಥಿಕ ಸಂಕಷ್ಟ, ಪಾಕಿಸ್ತಾನಿ ರೂಪಾಯಿ ಮೌಲ್ಯ ಕುಸಿತ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಪರಿಣಾಮದಿಂದ ಅಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ.

ಇತ್ತೀಚಿನ ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ 2 ತೊಲೆ ಚಿನ್ನದ ಹಾರ ಖರೀದಿಸಲು ಸುಮಾರು 9 ಲಕ್ಷದಿಂದ 9.5 ಲಕ್ಷ ಪಾಕಿಸ್ತಾನಿ ರೂಪಾಯಿ ವೆಚ್ಚವಾಗುತ್ತಿದೆ ಎಂದು ಹೇಳಲಾಗಿದೆ.ಪ್ರಸ್ತುತ ಪಾಕಿಸ್ತಾನದಲ್ಲಿ 24 ಕ್ಯಾರೆಟ್ ಚಿನ್ನದ ದರ ಪ್ರತಿ ತೊಲೆಗೆ ಸುಮಾರು 4,65,500 ಪಾಕಿಸ್ತಾನಿ ರೂಪಾಯಿಗಳಷ್ಟಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ತೊಲೆಗೆ ಸುಮಾರು 4,26,800 ಪಾಕಿಸ್ತಾನಿ ರೂಪಾಯಿಗಳ ಮಟ್ಟದಲ್ಲಿದೆ. ಈ ಲೆಕ್ಕದಲ್ಲಿ 2 ತೊಲೆ 22 ಕ್ಯಾರೆಟ್ ಚಿನ್ನದ ಹಾರದ ಮೂಲ ಬೆಲೆ ಸುಮಾರು 8.5 ಲಕ್ಷ ಪಾಕಿಸ್ತಾನಿ ರೂಪಾಯಿಗೂ ಅಧಿಕವಾಗುತ್ತದೆ. ತಯಾರಿಕಾ ಶುಲ್ಕ, ವಿನ್ಯಾಸ ವೆಚ್ಚ ಮತ್ತು ತೆರಿಗೆ ಸೇರಿಸಿದರೆ ಒಟ್ಟು ಬೆಲೆ ಇನ್ನಷ್ಟು ಏರಿಕೆಯಾಗುತ್ತದೆ.

ಇನ್ನೊಂದೆಡೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ 10 ಗ್ರಾಂ ದರ ಸುಮಾರು ₹1.24 ಲಕ್ಷದಷ್ಟಿದ್ದು, ಒಂದು ತೊಲೆ ಚಿನ್ನದ ಬೆಲೆ ₹1.45 ಲಕ್ಷದ ಮಟ್ಟದಲ್ಲಿದೆ. ಅದರಂತೆ 2 ತೊಲೆ ಚಿನ್ನದ ಹಾರದ ಬೆಲೆ ಸುಮಾರು ₹3 ಲಕ್ಷದ ಒಳಗೆ ಲಭ್ಯವಾಗುತ್ತಿದೆ. ತಯಾರಿಕಾ ವೆಚ್ಚ ಸೇರಿಸಿದರೂ ₹3.2 ಲಕ್ಷದಿಂದ ₹3.5 ಲಕ್ಷದೊಳಗೆ ಖರೀದಿ ಸಾಧ್ಯವಾಗುತ್ತಿದೆ.ಈ ಲೆಕ್ಕಾಚಾರದಿಂದ ಭಾರತಕ್ಕಿಂತ ಪಾಕಿಸ್ತಾನದಲ್ಲಿ ಚಿನ್ನದ ದರ ಬಹಳ ದುಬಾರಿಯಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಪಾಕಿಸ್ತಾನದ ದುರ್ಬಲ ಆರ್ಥಿಕ ಪರಿಸ್ಥಿತಿ, ದರ ಏರಿಕೆ, ಆಮದು ವೆಚ್ಚ ಹಾಗೂ ಸ್ಥಳೀಯ ಮಾರುಕಟ್ಟೆಯ ಅಸ್ಥಿರತೆ ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.

ತಜ್ಞರ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿರುವುದು ಹಾಗೂ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ ಮಾಡುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ರೂಪಾಯಿ ಮೌಲ್ಯ ಕುಸಿತ ಹೆಚ್ಚುವರಿ ಒತ್ತಡ ತಂದಿದ್ದು, ಮಧ್ಯಮ ವರ್ಗದ ಜನರಿಗೆ ಚಿನ್ನ ಖರೀದಿ ಬಹುತೇಕ ಕನಸಾಗಿಯೇ ಉಳಿದಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now