Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಂಚಭೂತಗಳು ಮನುಷ್ಯನಿಗೆ ಅವಶ್ಯಕತೆ : ದಿನೇಶ್ ಪೂಜಾರಿ

---Advertisement---

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 05 : ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಾದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ರಾಜ್ಯದಲ್ಲಿ ಸುಮಾರು 33,000 ಹೆಚ್ಚಿನಗಿಂತಲೂ ಕೆರೆಗಳು ಇದ್ದು ಕೆಲವೇ ಕೆಲವು ಕೆರೆ ಕಟ್ಟೆಗಳು ಅಸ್ತಿತ್ವದಲ್ಲಿ ಇರುತ್ತವೆ. ಮನುಷ್ಯನಿಗೆ ಅತಿ ಮುಖ್ಯವಾಗಿ ನೀರಿನ ಅವಶ್ಯಕತೆ ದಿನಂಪ್ರತಿ ಕಡ್ಡಾಯವಾಗಿ ಬೇಕಾಗಿದೆ. ಪ್ರಪಂಚದ ಪಂಚಭೂತಗಳಾದ ನೀರು, ಗಾಳಿ, ಭೂಮಿ, ಆಕಾಶ, ಅಗ್ನಿಇವುಗಳನ್ನು ದೈನಂದಿನ ದಿನದಲ್ಲಿ ಅವಲಂಬಿಸಿದ್ದೇವೆ. ಹೂಳು ತೆಗೆದ ಕೆರೆಗಳಲ್ಲಿ ಮಳೆಯಿಂದ ರಾಜಕಾಲುವೆ ಯಿಂದ ನೀರು ಹರಿದು ಬಂದು ತುಂಬಿಕೊಂಡರೆ, ಸುತ್ತಮುತ್ತಲಿನ ನೀರಿನ ಅಂತರ್ಜಲ ಮಟ್ಟ ಹೆಚ್ಚಿಸುತ್ತದೆ, ಸುತ್ತಮುತ್ತಲಿನ ಕೃಷಿ ಜಮೀನುಗಳಿಗೆ ರೈತರಿಗೆ ಇದರಿಂದ ಅನುಕೂಲವಾಗುತ್ತದೆ,ಆದಷ್ಟು ನೀರನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಹಿಸುವುದು ನಮ್ಮ ಕರ್ತವ್ಯ ವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ ಹೇಳಿದರು.

ಭೀಮಸಮುದ್ರ ಸಮೀಪದ ಕೊಡಗವಳ್ಳಿ ಗೋಕಟ್ಟೆಕೆರೆ ಕಾಮಗಾರಿ ಉದ್ಘಾಟನಾ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.

ಸಿರಿಗೆರೆ ವಲಯದ ಯೋಜನಾಧಿಕಾರಿ ರವಿಚಂದ್ರ ಮಾತನಾಡಿ ಗುಡಿ ಗೋಪುರಗಳ ಜೀರ್ಣ ದಾರಕ್ಕೆ ಅನುದಾನ, ಶಾಲೆ ಗಳಿಗೆ ಡೆಸ್ಕ್ ಬೆಂಚು ವಿತರಣೆ, ಜ್ಞಾನದೀಪ ಕಾರ್ಯಕ್ರಮ ಅಡಿಯಲ್ಲಿ ಜ್ಞಾನದೀಪ ಶಿಕ್ಷಕರ ಓದಗಡೆ, ವೃತ್ತಿ ಪರ ಕೋರ್ಸ್ ಗಳಿಗೆ ಸುಜ್ಞಾನ ನಿಧಿ ಸ್ಕಾಲರ್ ಶಿಪ್ಓದಗಡೆ,ನಿರ್ಗತಿಕರಿಗೆ ಮಾಶಾಸನ ಅಸಾಯಕರಿಗೆ ವಾಸ್ತಲ್ಯ ಮನೆ ನಿರ್ಮಾಣ ಗಳ ಬಗ್ಗೆ ಸ್ವ ಸಂಘ ಸಂಘದ ಸದಸ್ಯರಿಗೆ ವಾರ್ಷಿಕವಾಗಿ 14% ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ನಿಂದ ಸಾಲ ಸೌಲಭ್ಯ ಒದಗಿಸುವ ಆಗುವುದಿಲ್ಲ ಎಂದು ತಿಳಿಸಿದರು.

ಈ ಕಾರ್ಯಕ್ರಮಅಧ್ಯಕ್ಷತೆಯನ್ನು ಹಿರೇಗುಂಟನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹನ್ ಮೂರ್ತಿ ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಪಾಪಮ್ಮಗ್ರಾಮ ಪಂಚಾಯತ್ ಸದಸ್ಯರು ಮಹಾಲಕ್ಷ್ಮಿ ಚಂದ್ರಶೇಖರಪ್ಪ ನಿಂಗರಾಜ್ ಹಾಗೂ ಕೆರೆ ಸಮಿತಿ ಅಧ್ಯಕ್ಷರು ಮಹೇಶ್ವರಪ್ಪ ಕೆರೆ ಸಮಿತಿ ಸದಸ್ಯರುಗಳು ರೈತ ಮಹಿಳೆ ಶರಣಮ್ಮ ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ರೈತರು ಯುವಕರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...