Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೆಪಿಎಂಇ ನಿಯಮ ಉಲ್ಲಂಘಿಸಿದ ಖಾಸಗಿ ಸಂಸ್ಥೆಗಳ ವಿರುದ್ಧ ದಂಡ 

---Advertisement---

ಬೆಂಗಳೂರು.ಆಗಸ್ಟ್.20:  ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯಿದೆ (ಕೆಪಿಎಂಇ) ನಿಯಮಗಳು ಉಲ್ಲಂಘಿಸಿದ ಖಾಸಗಿ ವೈದ್ಯಕೀಯ ಸಂಸ್ಥೆ, ಆಸ್ಪತ್ರೆಗಳು, ಕ್ಲಿನಿಕ್ ಗಳು ಹಾಗೂ ಪುನರ್ವಸತಿ ಕೇಂದ್ರಗಳ ವಿಚಾರಣೆ ನಡೆಸಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕಾಂತರಾಜು ಪಿ.ಎಸ್ ಅವರು ದಂಡ ವಿಧಿಸಿ ಎಚ್ಚರಿಕೆ ನೀಡಿದರು..

ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕೆಪಿಎಂಇ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೆಪಿಎಂಇ ಕಾಯ್ದೆ ಅನ್ವಯ ನಿಯಮವನ್ನು ಉಲ್ಲಂಘನೆ ಮಾಡಿರುವ  ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್ ಗಳು ಹಾಗೂ ಪುನರ್ವಸತಿ ಕೇಂದ್ರದವರಿಗೆ ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಮುಂದಿನ ದಿನಗಳಲ್ಲಿ ಯಾವುದೇ ನ್ಯೂತೆಗಳನ್ನು ಮಾಡದಂತೆ ಮುಚ್ಚಳಿಕೆ ಪತ್ರವನ್ನು ನೀಡುವಂತೆ ಸೂಚಿಸಿದರು.

ಅದರಂತೆ ಎಚ್‌ಎಎಲ್ ರಸ್ತೆಯಲ್ಲಿರುವ ಕ್ಲೌಡ್‌ನೈನ್ ಆಸ್ಪತ್ರೆ – ರೂ. 50,000. ಇಕ್ಷಾ ಕ್ಲಿನಿಕ್, ಮುನೇಶ್ವರ ಲೇಔಟ್, ರೂ. 10,000. ಎನ್‌ಯು ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್, ರಾಜಾಜಿನಗರ, ಬೆಂಗಳೂರು ರೂ. 10,000. ಆರ್.ವಿ. ಕ್ಲಿನಿಕ್, ಕೊಪ್ಪ ಮುಖ್ಯ ರಸ್ತೆ, ಹುಲ್ಲಹಳ್ಳಿ ಗ್ರಾಮ, ಜಿಗಣಿ ಹೋಬಳಿ, ಆನೇಕಲ್ ತಾಲ್ಲೂಕು ರೂ. 1,00,000 ದಂಡ ವಿಧಿಸಿದರು.

 ಉಳಿದಂತೆ ಟಿ.ದಾಸರಹಳ್ಳಿಯ, ಪ್ರಶಾಂತನಗರದ  ಪೈಪ್ ಲೈನ್ ರಸ್ತೆಯ ಶ್ರೀ ಅಯ್ಯಪ್ಪ ಟೆಂಪಲ್ ಮೆಡಿಕಲ್ ಸೆಂಟರ್ ರೂ. 50,000, ಶ್ರೀ ಪದ್ಮಗಿರಿ ಕ್ಲಿನಿಕ್ , ಎಸ್,ಎಲ್,ಎನ್ ರಸ್ತೆ, ಕೂಡ್ಲೂ ರೆಡ್ಡಿ ಲೇಜೌಟ್ ,ಜಿಗಣಿ, ಆನೇಕಲ್, ತಾಲ್ಲೂಕು ರೂ. 1.00,000, ಹಾಗೂ ಶ್ರೀ ಹರ್ಷವರ್ಧನ್ ಆಸ್ಪತ್ರೆ, 7ನೇ ಕ್ರಾಸ್, ಬಿ.ಜಿ. ರಸ್ತೆ, ಬೆಂಗಳೂರು ರೂ. 20,000 ಗಳ ದಂಡವನ್ನು ವಿಧಿಸಿ  ಕೆ.ಪಿ.ಎಂ.ಇ ಪರವಾನಗಿಯನ್ನು ರದ್ದುಪಡಿಸಿದರು.

ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಮದಿನಿ, ಜಿಲ್ಲಾ ಆರೋಗ್ಯಧಿಕಾರಿಗಳಾದ ನದೀಮ್ ಮೊಹ್ಮದ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು

Join WhatsApp

Join Now

Join Telegram

Join Now