Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೈಲಿನಲ್ಲಿ ಅಧಿಕಾರಿಗಳ ಕ್ಯಾಮೆರಾಗೆ ನಗುತ್ತಾ ಪೋಸ್ ಕೊಟ್ಟ ಪವಿತ್ರಾ ಗೌಡ : ದರ್ಶನ್ ಮುಡಿ ಕೊಟ್ಟಿರೋದು ಯಾವ ದೇವರಿಗೆ..?

---Advertisement---

 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಜನ ಆರೋಪಿಗಳು ಜೈಲು ಪಾಲಾಗಿದ್ದಾರೆ. ಜೈಲಿಗೆ ಸೇರಿದ ಪ್ರತಿಯೊಬ್ಬ ಆರೋಪಿಯ ಫೋಟೋಗಳನ್ನು ಅಲ್ಲಿನ ಜೈಲು ಅಧಿಕಾರಿಗಳು ತೆಗೆದು ದಾಖಲೆಗಳ ಜೊತೆಗೆ ಸೇರಿಸುತ್ತಾರೆ. ಕಳೆದ ಬಾರಿ ಜೈಲಿಗೆ ಹೋದಾಗಲೂ ದರ್ಶನ್ ಹಾಗೂ ಪವಿತ್ರಾ ಗೌಡ ಫೋಟೋ ತೆಗೆದಿದ್ದರು. ಈ ಬಾರಿಯೂ ಇಬ್ಬರ ಫೋಟೋವನ್ನು ಪೊಲೀಸರು ತೆಗೆದಿದ್ದಾರೆ.

ಇಬ್ಬರ ಫೋಟೋ ಕೂಡ ವೈರಲ್ ಆಗಿದ್ದು, ದರ್ಶನ್ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ರೆ ಈ ಫೋಟೋ ನೋಡಿದರೆ ದೇವರಿಗೆ ಮುಡಿ ಕೊಟ್ಟು ಜೈಲಿಗೆ ಬಂದಿರುವುದು ಅರ್ಥವಾಗುತ್ತಿದೆ. ಪವಿತ್ರಾ ಗೌಡ ಈ ಫೋಟೋಗೆ ನಗುತ್ತಾ ಪೋಸ್ ಕೊಟ್ಟಿದ್ದಾರೆ. ಯಾಕೆ ಆ ನಗು ಅನ್ನೋದು ಅರ್ಥವಾದಂತೆ ಇಲ್ಲ. ಪವಿತ್ರಾ ಗೌಡ ಅವರ ಎರಡು ಫೋಟೋಗಳನ್ನು ತೆಗೆದಿದ್ದಾರೆ. ಒಂದರಲ್ಲಿ ನಾರ್ಮಲ್ ಆಗಿ ಕಾಣಿಸಿಕೊಂಡರೆ, ಮತ್ತೊಂದು ಫೋಟೋದಲ್ಲಿ ನಗು ಬೀರಿದ್ದಾರೆ. ಅದು ಜೈಲು ಸೇರಿದರು ನಕ್ಕಿದ್ದು ಯಾಕೆ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಇನ್ನು ನಟ ದರ್ಶನ್ ದೇವಸ್ಥಾನಕ್ಕೆ ಮುಡಿ‌ಕೊಟ್ಟಿದ್ದು, ತಮಿಳುನಾಡಿನ ದೇವಸ್ಥಾನ ಒಂದಕ್ಕೆ ಮುಡಿ ಕೊಟ್ಟಿದ್ದಾರೆ ಎನ್ನಲಾಗಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಬಣ್ಣಾರಿಯಮ್ಮ ದೇವಾಲಯಕ್ಕೆ ತೆರಳಿ ತಲೆ ಮುಡಿಕೊಟ್ಟಿದ್ದಾರೆ. ಅದಾದ ಬಳಿಕ ಕೊಡಗಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲಿಂದ ನೇರವಾಗಿ ಕೋರ್ಟ್ ಗೆ ಹಾಜರಾಗಿದ್ದರು. ಕೋರ್ಟ್ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಡೆಯ ತನಕ ದರ್ಶನ್ ಜೊತೆಗೆ ಧನ್ವೀರ್ ಅವರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...