Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮನೆ ಕಟ್ಟುವವರಿಗೆ ಬಿಗ್ ಶಾಕ್: ಗಗನಕ್ಕೇರುತ್ತಿದೆ ಸಿಮೆಂಟ್ ಬೆಲೆ!

---Advertisement---

ದೆಹಲಿ : ಸ್ವಂತ ಮನೆಯ ಕನಸು ಕಾಣುತ್ತಿರುವ ಸಾಮಾನ್ಯ ಜನರಿಗೆ ಮತ್ತು ನಿರ್ಮಾಣ ವಲಯದಲ್ಲಿರುವವರಿಗೆ ಸಿಮೆಂಟ್ ದರಗಳು ಮತ್ತೊಮ್ಮೆ ಆಘಾತ ನೀಡಲು ಸಜ್ಜಾಗಿವೆ.

 ದೇಶಾದ್ಯಂತ ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ಸಿಮೆಂಟ್ ಚೀಲದ ಮೇಲೆ ಸರಾಸರಿ 7 ರೂಪಾಯಿ ಏರಿಕೆಯಾಗಿದ್ದು, ಅಕ್ಟೋಬರ್‌ನಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ‘ಸೆಂಟ್ರಮ್ ಬ್ರೋಕಿಂಗ್’ ವರದಿ ತಿಳಿಸಿದೆ.

ಪ್ರಮುಖವಾಗಿ ಇಂಧನ ವೆಚ್ಚ ಗಣನೀಯವಾಗಿ ಹೆಚ್ಚಿರುವುದು ಸಿಮೆಂಟ್ ಉತ್ಪಾದನಾ ಕಂಪನಿಗಳ ಮೇಲೆ ತೀವ್ರ ಆರ್ಥಿಕ ಒತ್ತಡ ತಂದಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಂದಗತಿಯಲ್ಲಿದ್ದ ನಿರ್ಮಾಣ ಚಟುವಟಿಕೆಗಳು ಸೆಪ್ಟೆಂಬರ್ ಕೊನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಂತೆಯೇ, ಕಂಪನಿಗಳು ಪ್ರತಿ ಚೀಲಕ್ಕೆ 5 ರಿಂದ 20 ರೂಪಾಯಿವರೆಗೆ ಬೆಲೆ ಏರಿಕೆ ಮಾಡಲು ನಿರ್ಧರಿಸಿವೆ.

ಸೆಪ್ಟೆಂಬರ್ ಅಂತ್ಯದ ವೇಳೆಗೆ ದೇಶದಲ್ಲಿ ಪ್ರತಿ ಸಿಮೆಂಟ್ ಚೀಲದ ಸರಾಸರಿ ವಹಿವಾಟು ದರ 356 ರೂಪಾಯಿಗೆ ತಲುಪಿದೆ. ಪ್ರಾದೇಶಿಕ ಲೆಕ್ಕಾಚಾರವನ್ನು ಗಮನಿಸಿದರೆ, ದಕ್ಷಿಣ ಭಾರತದಲ್ಲಿ ಗರಿಷ್ಠ ಮಟ್ಟದಲ್ಲಿ ಪ್ರತಿ ಚೀಲಕ್ಕೆ 11 ರೂಪಾಯಿ ಹೆಚ್ಚಳವಾಗಿದೆ. ಪಶ್ಚಿಮ ಭಾರತದಲ್ಲಿ 9 ರೂಪಾಯಿ ಹಾಗೂ ಉತ್ತರ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ತಲಾ 5 ರೂಪಾಯಿ ಏರಿಕೆ ದಾಖಲಾಗಿದೆ.

ಸದ್ಯಕ್ಕೆ ಕಂಪನಿಗಳು ಘೋಷಿಸಿರುವ ಈ ಹೆಚ್ಚುವರಿ ಹೊರೆಯನ್ನು ಡೀಲರ್‌ಗಳು ಗ್ರಾಹಕರಿಗೆ ಪೂರ್ಣವಾಗಿ ವರ್ಗಾಯಿಸಿಲ್ಲ. ಆದರೆ, ಅಕ್ಟೋಬರ್‌ನಲ್ಲಿ ಹೆಚ್ಚಿಸಲಾಗುವ ಈ ಹೊಸ ದರಗಳು ಮಾರುಕಟ್ಟೆಯಲ್ಲಿ ಎಷ್ಟು ಕಾಲ ಮುಂದುವರಿಯುತ್ತವೆ ಎಂಬುದು ಬೇಡಿಕೆಯ ಮೇಲೆ ಅವಲಂಬಿತವಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ದೆಹಲಿ-ಎನ್‌ಸಿಆರ್ ಭಾಗದಲ್ಲಿ ಎದುರಾಗುವ ನಿರ್ಮಾಣ ನಿರ್ಬಂಧಗಳಿಂದ ಬೇಡಿಕೆ ಕುಸಿಯುವ ಸಂಭವವಿದ್ದು, ಒಂದು ವೇಳೆ ಮಾರುಕಟ್ಟೆಯಲ್ಲಿ ಬೇಡಿಕೆ ಸುಧಾರಿಸದಿದ್ದರೆ ಈ ಹೆಚ್ಚಿಸಿದ ದರಗಳನ್ನು ಕಾಯ್ದುಕೊಳ್ಳುವುದು ಕಂಪನಿಗಳಿಗೆ ದೊಡ್ಡ ಸವಾಲಾಗಲಿದೆ.

Join WhatsApp

Join Now

Join Telegram

Join Now