Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಾಹನ ಚಾಲನೆ ವೇಳೆ ತಾಳ್ಮೆ ಅಗತ್ಯ : ಮಹಾಂತೇಶ್

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ವಾಹನ ಚಲಾವಣೆ ಮಾಡುವ ಸಂದರ್ಭ ಬಹಳಷ್ಟು ತಾಳ್ಮೆ ಅಗತ್ಯ. ಇಲ್ಲದಿದ್ದರೆ ಅಪಘಾತಗಳು ಹೆಚ್ಚು ಸಂಭವಿಸುತ್ತವೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಹಿರಿಯ ನಿರೀಕ್ಷಕ ಮಹಾಂತೇಶ್ ಹೇಳಿದರು.

ನಗರದ ಮಹೇಶ್ ಮೋಟಾರ್ಸ್ ನಲ್ಲಿ ಹಿರೋ ಡೆಸ್ಟಿನ್ 125 ವಾಹನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಬಳಿಕ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ನೆರೆದಿದ್ದ ಜನತೆಗೆ ಜಾಗೃತಿ ಮೂಡಿಸಿ ಮಾತನಾಡಿದರು.

ನಾವೆಲ್ಲರೂ ಮಧ್ಯಮ ವರ್ಗದವರು. ಹಿಂದೆ ನಮ್ಮ ತಾತ ಮುತ್ತಾತಂದಿರು ಅವರೆಲ್ಲೂ ಮನೆ, ತೋಟದಲ್ಲಿ ವಯಸ್ಸು, ಅನಾರೋಗ್ಯ ಕಾರಣಕ್ಕೆ ನಿಧನ ಹೊಂದುತ್ತಿದ್ದರು. ಆದರೆ, ಇಂದು ಯುವಪೀಳಿಗೆ ರಸ್ತೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.
ಕಾರಣ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದು ಮತ್ತು ರಸ್ತೆ ಮಾರ್ಗದ ನಿಯಮ ಪಾಲಿಸದಿರುವುದು. ಇಂದಿನ ಯುವಕರು ರಸ್ತೆಯನ್ನು ನೋಡಿ ವಾಹನ ಚಾಲನೆ ಮಾಡುತ್ತಾರೆಯೇ ಹೊರತು ರಸ್ತೆ ಬದಿಯಲ್ಲಿರುವ ಸುರಕ್ಷತಾ ಚಿನ್ಹೆಯನ್ನು ನೋಡಿ ವಾಹನ ಚಲಾವಣೆ ಮಾಡುವುದಿಲ್ಲ. ಚಾಲಕರು ಬರೀ ಚಾಲಕರಾಗದೆ ವೃತ್ತಿಪರ ಹಾಗೂ ಪರಿಪೂರ್ಣ ಚಾಲಕರಾಗಿ ವಾಹನ ಚಲಾಯಿಸಬೇಕು ಎಂದರು.

ನಾವೆಲ್ಲರೂ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆ ಆಗಲಿದೆ. ಜೊತೆಗೆ ನಮ್ಮ ಜೀವ ಉಳಿಸಿಕೊಂಡು ಕುಟುಂಬಕ್ಕೆ ಕೊಡುಗೆ ನೀಡಬಹುದು.
ವೇಗವಾಗಿ ವಾಹನ ಚಲಾವಣೆ ಮಾಡುವುದು ಸರಿಯಲ್ಲ. ಇದರಿಂದ ಜೀವಕ್ಕೆ ಕುತ್ತು ಬರಲಿದೆ ಎಂದು ಎಚ್ಚರಿಸಿದರು. ಆದ್ದರಿಂದ ನಾವೆಲ್ಲರೂ ಆದಷ್ಟು ನಿಯಮ ಪಾಲಿಸಿ ಜೀವ ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ನಿರೀಕ್ಷಕ ಪ್ರಕಾಶ್, ಅಶೋಕ್, ರಮೇಶ್ ಸೇರಿದಂತೆ ಸಾರಿಗೆ ಇಲಾಖೆಯ ಸಿಬ್ಬಂದಿ ಶೋರೂಂನ ಸಿಬ್ಬಂದಿಯವರು ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...