ಖಾಸಗಿ ಶಾಲೆಯಲ್ಲಿ ಮಕ್ಕಳ ಬೆಳವಣಿಗೆ, ಓದು, ಚಟುವಟಿಕೆಗಳಿಗೆಲ್ಲಾ ಸಾಕಷ್ಟು ಒತ್ತು ನೀಡುತ್ತಾರೆ. ಆಗಾಗ ಪೇರೆಂಟ್ಸ್ ಮೀಟಿಂಗ್ ಅಂತ ಕರೆದು ಮಕ್ಕಳ ಬೆಳವಣಿಗೆಗೆ ಸಹಾಯವಾಗುವಂತೆ ಮಾಡುತ್ತಾರೆ. ಪೋಷಕರಿಗೂ ಮಕ್ಕಳ ಬೆಳವಣಿಗೆ ಬಗ್ಗೆ ತಿಳಿಯುವುದಕ್ಕೆ ಇದೆಲ್ಲಾ ಸಹಾಯವಾಗುತ್ತದೆ. ಮಕ್ಕಳು ಯಾವ ಸಬ್ಜೆಕ್ಟ್ ನಲ್ಲಿ ಸ್ಟ್ರಾಂಗ್ ಇದ್ದಾರೆ..? ಯಾವುದರಲ್ಲಿ ವೀಕ್ ಇದ್ದಾರೆ ಎಂಬೆಲ್ಲಾ ವಿಚಾರಗಳು ಸಿಗುತ್ತವೆ. ಮಕ್ಕಳ ಬೆಳವಣಿಗೆಗಾಗಿಯೇ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಇದೀಗ ಆ ರೀತಿಯ ಸೌಲಭ್ಯವನ್ನು ಸರ್ಕಾರಿ ಶಾಲೆಯಲ್ಲಿಯೂ ತರುವುದಕ್ಕೆ ಯೋಜನೆ ರೂಪಿಸಿದ್ದಾರೆ.
ಈ ಸಂಬಂಧ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದು, ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಪೇರೆಂಟ್ಸ್ ಮೀಟಿಂಗ್ ಆಗುತ್ತೆ. ಸರ್ಕಾರಿ ಶಾಲೆಗಳಲ್ಲೂ ಪೋಷಕರ ಸಭೆ ಆರಂಭಿಸುವುದಕ್ಕೆ ಸೂಚನೆ ನೀಡಿದ್ದಾರೆ. ನವೆಂಬರ್ 14ರಿಂದ ಇದು ಜಾರಿಯಾಗುವಂತೆ ತಿಳಿಸಿದ್ದಾರೆ. ಸದ್ಯ ಶಿಕ್ಷಣ ಇಲಾಖೆಯಿಂದ ಇದನ್ನು ಅಧಿಕೃತವಾಗಿ ತಿಳಿಸಿದ್ದು, ಇನ್ಮುಂದೆ ಎಲ್ಲಾ ಶಾಲೆಯಲ್ಲೂ ಇದು ನಡೆಯಲಿದೆ.

ಸರ್ಕಾರಿ ಶಾಲೆಯಲ್ಲಿ ಇರುವ ಸೌಲಭ್ಯವೂ ಕಡಿಮೆಯೇ. ಅದರಲ್ಲೂ ಎಷ್ಟೋ ಶಾಲೆಗಳು ಶಿಥಿಲಾವಸ್ಥೆ ತಲುಪಿವೆ. ಕೆಲವೊಂದು ಶಾಲೆಗಳನ್ನು ಅಭಿವೃದ್ಧಿಯೂ ಮಾಡಲಾಗಿದೆ. ಆದರೆ ಬೇಕಾದಷ್ಟು ಸಂಖ್ಯೆಯಲ್ಲಿ ಶಿಕ್ಷಕರು ಇಲ್ಲ. ಹೀಗಿರುವಾಗ ಒಂದೊಂದೆ ಸೌಲಭ್ಯವನ್ನು ನೀಡಿದರೆ ಶಾಲೆಗೆ ಸೇರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಬಹುದು. ಅದರಲ್ಲೂ ಮಕ್ಕಳ ಬೆಳವಣಿಗೆಗೆ ಈ ರೀತಿಯ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಿಕೊಡುವುದು ಮುಖ್ಯವಾಗಿರುತ್ತದೆ. ಪೋಷಕರ ಸಭೆಯಿಂದ ಮಕ್ಕಳ ಓದು, ಮನಸ್ಥಿತಿ ಎಲ್ಲವೂ ಪೋಷಕರಿಗೂ ನೇರವಾಗಿ ತಿಳಿದಂತೆ ಆಗುತ್ತದೆ. ನವೆಂಬರ್ 14 ಮಕ್ಕಳ ದಿನಾಚರಣೆಯಂದು ಅಧಿಕೃತವಾಗಿ ನಡೆಸುವಂತೆ ಆದೇಶ ನೀಡಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















