Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಪಂಚಮಸಾಲಿ ಮುಖಂಡರ ಸಭೆ : ಯತ್ನಾಳ್ ಗೈರಾಗಿದ್ದೇಕೆ..?

---Advertisement---

ಬಾಗಲಕೋಟೆ: ಪಂಚಮಸಾಲಿ ಮುಖಂಡರ ಮಹತ್ವದ ಸಭೆ ನಡೆದಿದೆ. ಆ ಸಭೆಗೆ ಶಾಸಕ ಬಸನಗೌಡ ಪಾಟೀಲ್ ಅವರು ಹಾಜರಾಗಿರಲಿಲ್ಲ. ಇದು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಈ ಬಗ್ಗೆ ಅರವಿಂದ್ ಬೆಲ್ಲದ್ ಕ್ಲಾರಿಟಿ ನೀಡಿದ್ದಾರೆ.

ಸಮಾಜದ ಪ್ರಥಮ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಬೆಂಬಲ ಕೊಡೋದಕ್ಕೆ, ನೈತಿಕ ಸ್ಥೈರ್ಯ ನೀಡುವುದಕ್ಕೆ ಸಮಾಜದಲ್ಲಿ ಏನು ಗೊಂದಲ ಆಗಿತ್ತು ಅದನ್ನ ತಿಳಿ ಮಾಡುವುದಕ್ಕೆ ಸಿಸಿ ಪಾಟೀಲ್, ಶಿವಶಂಕರ್, ಸಿದ್ದು ಸವದಿ ಸೇರಿದಂತೆ ಹಲವರು ಬಂದಿದ್ದೇವೆ. ಯತ್ನಾಳ್ ಅವರು ಬರಬೇಕಿತ್ತು. ಆದ್ರೆ ಯತ್ನಾಳ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಬಂದಿಲ್ಲ. ಇಲ್ಲ ಅಂದಿದ್ರೆ ಅವರು ಸಭೆಗೆ ಬರ್ತಾ ಇದ್ದರು. ಸದ್ಯಕ್ಕೆ ನಾವೆಲ್ಲಾ ಸೇರಿಕೊಂಡು ಸ್ವಾಮೀಜಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮುಖ್ಯವಾದವರೆಲ್ಲ ಸೇರಿಕೊಂಡು ಸಭೆ ಮಾಡುತ್ತೇವೆ. ಬಳಿಕ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡುತ್ತೇವೆ ಎಂದಿದ್ದಾರೆ.

ಇದೇ ವೇಳೆ ಸ್ವಾಮೀಜಿಗಳ ಬಗ್ಗೆ ಸಿಡಿ ಬಾಂಬ್ ಸಿಡಿಸಿದ್ದ ಕಾಶಪ್ಪನವರ್ ವಿರುದ್ಧ ಸಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಯಾವುದೇ ವ್ಯಕ್ತಿಯ ಗೌರವವನ್ನ ಸಮಾಜದಲ್ಲಿ ಕಳೆಯುವಂತಹ ಕೆಲಸವನ್ನು ಯಾರು ಮಾಡಬಾರದು. ಅವರ ಮರ್ಯಾದೆ ತೆಗೆಯಬೇಕು ಅಂತ ಹೋದರೆ ಅವರದ್ದೇ ಮರ್ಯಾದೆಯನ್ನ ತೆಗೆದುಕೊಳ್ತಾರೆ. ಸಮಾಜ ಒಬ್ಬ ವ್ಯಕ್ತಿಗಿಂತ ದೊಡ್ಡದು. ಸಮಾಜದಿಂದ ನಾನೇ ವಿನಃ, ನನ್ನಿಂದ ಸಮಾಜ ಅಲ್ಲ. ಸಮಾಜದ ಒಗ್ಗಟ್ಟಿಗಾಗಿ ಎಲ್ಲರನ್ನಿ ಸೇರಿಸಿ ಪ್ರತಿಭಟನೆ ಮಾಡಿದವರು. ನಮ್ಮ ಸಮಾಜದ ಬಗ್ಗೆ ರಾಜ್ಯ ಮಟ್ಟ ಮಾತ್ರವಲ್ಲ ರಾಷ್ಟ್ರ ಮಟ್ಟದವರೆಗೆ ತಿಳಿಯುವಂತೆ ಮಾಡುವಲ್ಲಿ ಅವರ ಪಾತ್ರವಿದೆ. ಅವರಿಗೆ ನಮ್ಮೆಲ್ಲರ ಬೆಂಬಲವಿದೆ. ಅವರೊಬ್ಬ ಜಗದ್ಗುರು ಆಗಿ ಮುಂದುವರೆಯುತ್ತಾರೆ ಎಂದು ತಿಳಿಸಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now