ಬೆಂಗಳೂರು: ಹೈಕಮಾಂಡ್ ಹೇಳ್ತಿಲ್ಲ.. ಇವ್ರು ಬಿಡ್ತಿಲ್ಲ.. ಖುರ್ಚಿ ಕದನ ನಿಂತಿದೆ ಅಂತ ಅಂದುಕೊಂಡರೆ ಮತ್ತೆ ಮತ್ತೆ ಸದ್ದು ಮಾಡ್ತಾನೆ ಇದೆ. ಇದೀಗ ಡಿಕೆ ಶಿವಕುಮಾರ್ ಅವರ ಆಪ್ತರೆಲ್ಲಾ ಸೇರಿ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. 40 ಶಾಸಕರು ಸೇರಿ ಈ ಸಭೆಯನ್ನ ನಡೆಸಿದ್ದಾರೆ. ಈ ಮೂಲಕ ಶಕ್ತಿ ಪ್ರದರ್ಶನ ನಡೆಸ್ತಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ನಿರ್ಧಾರ ಕೈಗೊಳ್ಳದೆ ಇದ್ದರೆ ದೊಡ್ಡ ಹೆಜ್ಜೆಯನ್ನ ಇಡುವಂತ ಸೂಚನೆಯನ್ನ ನೀಡಿದ್ದಾರೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗೊಂದಲವನ್ನ ಪರಿಹರಿಸಿ. ಗೊಂದಲದ ವಾತಾವರಣದಿಂದ ಪಕ್ಷದ ಮೇಲೆ ದುಷ್ಪರಿಣಾಮ ಬೀರ್ತಾ ಇದೆ. ರಾಜ್ಯದ ಜನರಿಗೂ ಕೆಟ್ಟ ಸಂದೇಶ ರವಾನೆಯಾಗ್ತಾ ಇದೆ. ಮಾತು ಕೊಟ್ಟಿದ್ದರೆ, ಕೊಟ್ಟ ಮಾತನ್ನ ಉಳಿಸಿಕೊಳ್ಳಲಿ ಎಂದು ಶಾಸಕರು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.
ಈ ಸಭೆಯ ಬಗ್ಗೆ ಶಾಸಕ ರವಿ ಗಣಿಗ ಪ್ರತಿಕ್ರಿಯೆ ನೀಡಿದ್ದು, ಒಳ್ಳೆ ನಾಟಿಕೊಳಿ ಬಿರಿಯಾನಿ ತರಿಸಿದ್ರು ಚೆನ್ನಾಗಿ ತಿಂದೊ ಅಷ್ಟೇ. ಇದು ಬರ್ತ್ ಡೇ ಪಾರ್ಟಿ ಅಷ್ಟೆ. 30-40 ಜನ ಎಂಎಲ್ಎಗಳು ಬಂದಿದ್ದಾರೆ ಸಿಎಂ ಬದಲಾವಣೆ ಮಾಡೋದಕ್ಕೆ ಆಗುತ್ತಾ. ಬರ್ತ್ ಡೇ ಪಾರ್ಟಿಗೆ ಕರೆದಿದ್ದರು ಬಂದಿದ್ದೆವು, ಊಟ ಮಾಡಿದೆವು ಅಷ್ಟೇ. ಇನ್ನು ಎರಡೂವರೆ ವರ್ಷ ಇದೆ. ಸರ್ಕಾರ ಚೆನ್ನಾಗಿ ನಡೀತಾ ಇದೆ. ಅದರಿಂದ ಅದನ್ನೆಲ್ಲಾ ಮಾತನಾಡೋದು ಪ್ರಿಮೆಚ್ಯೂರ್ ಅಂತ ಬಾಲಕೃಷ್ಣ ಅವರ ಹೇಳಿಕೆಗೆ ಉತ್ತರ ನೀಡಿದರು. ಮುಂದಿನ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಅನುಮಾನ ಎಂಬ ಮಾತನ್ನ ಶಾಸಕ ಬಾಲಕೃಷ್ಣ ಅವರು ಹೇಳಿದ್ದಾರೆ. ಈ ಹೇಳಿಕೆ ಹಲವರಿಗೆ ಶಾಕ್ ನೀಡಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






