Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ನೊಣವಿನಕೆರೆಯ ಶ್ರೀ ಬೇಟೆರಾಯಸ್ವಾಮಿ ದೇವಾಲಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ತುಮಕೂರು ಜಿಲ್ಲೆಯ ಹಲವಾರು ಪ್ರಾಚೀನ ದೇವಾಲಯಗಳ ತವರೂರಾಗಿದೆ. ಅದರಲ್ಲಿ ಮುಖ್ಯವಾಗಿ ತಿಪಟೂರು ಮತ್ತು ತುರುವೇಕೆರೆ ತಾಲೂಕುಗಳಂತೂ ಹೊಯ್ಸಳರ ವಾಸ್ತುಶಿಲ್ಪವನ್ನು ಹೊಂದಿರುವ ಹತ್ತು ಹಲವಾರು ದೇವಾಲಯಗಳನ್ನು ಹೊಂದಿರುವ ಪ್ರದೇಶಗಳಾಗಿವೆ.

 

ತಿಪಟೂರು ತಾಲೂಕಿನ ಒಂದು ಪ್ರಮುಖ ಹೋಬಳಿ ಕೇಂದ್ರವಾಗಿರುವ ನೊಣವಿನಕೆರೆ ಗ್ರಾಮವು ನೊಳಂಬರ ಒಂದು ಆಡಳಿತಾತ್ಮಕ ಕೇಂದ್ರವಾಗಿದ್ದಿತ್ತು. ಇಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಮುಖ್ಯವಾಗಿ ಬೇಟೆರಾಯಸ್ವಾಮಿ ದೇವಾಲಯ ಪ್ರಮುಖವಾಗಿದೆ. ಇದು ಒಂದು ದೇವಾಲಯವಲ್ಲ. ಬದಲಾಗಿ ದೇವಾಲಯ ಹೊಂದಿರುವ ಬೃಹತ್ತಾದ, ಅತ್ಯಂತ ವಿಶಾಲವಾಗಿರುವ ದೇವಾಲಯ ಸಂಕೀರ್ಣವಾಗಿದೆ.

 

ವಿಜಯನಗರದ ವಾಸ್ತುಶಿಲ್ಪವನ್ನು ಅತ್ಯಂತ ಸ್ಪಷ್ಟವಾಗಿ ಗುರುತಿಸಬಹುದಾದ ದೇವಸ್ಥಾನವಾಗಿದೆ.
ಇಂತಹ ಒಂದು ಬೃಹತ್ತಾದ ದೇವಸ್ಥಾನವನ್ನು ಅಂದು ಕಟ್ಟಿರುವುದೇ ಒಂದು ಆಶ್ಚರ್ಯ ತರಿಸುತ್ತದೆ.
ವೈಷ್ಣವ ಆರಾಧಕರಾಗಿದ್ದ ವಿಜಯನಗರ ಅರಸರು ಈ ದೇವಾಲಯಕ್ಕೆ ದಾನದತ್ತಿ ನೀಡಿದ್ದಾರೆ
ನೊಣವಿನಕೆರೆಯಲ್ಲಿರುವ ಶ್ರೀ ಬೇಟೆರಾಯ ಸ್ವಾಮಿ ದೇವಾಲಯವು ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಸಮರ್ಪಿತವಾದ ಐತಿಹಾಸಿಕ ಮತ್ತು ಪವಿತ್ರ ಕ್ಷೇತ್ರವಾಗಿದೆ. ಕ್ರಿಸ್ತಶಕ 15 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆ ಮಹಾನಂದನಾಯಕ ಸೋಮಣ್ಣ ಈ ದೇವಾಲಯವನ್ನು ನಿರ್ಮಿಸಿದನು. ಐತಿಹ್ಯದಂತೆ ವಿಷ್ಣುವು ಇಲ್ಲಿ ಇದ್ದ ರಾಕ್ಷಸರನ್ನು ಬೇಟೆಯಾಡಲು ಬೇಟೆರಾಯ ಸ್ವರೂಪಿಯಾಗಿ ಬಂದು ರಾಕ್ಷಸರನ್ನು ಸಂಹಾರ ಮಾಡಿ ನಂತರ ಇಲ್ಲಿಯೇ ನೆಲೆಸಿದನೆಂಬ ನಂಬಿಕೆ ಇದೆ. ತುಮಕೂರಿನಿಂದ 80 ಕಿ.ಮೀ ಮತ್ತು ಬೆಂಗಳೂರಿನಿಂದ 140 ಕಿ.ಮೀ ದೂರದಲ್ಲಿರುವ ಇಲ್ಲಿಗೆ ತಲುಪಲು ತಿಪಟೂರು- ತುರುವೇಕೆರೆಯಿಂದ ಸಾಕಷ್ಟು ಬಸ್ ಗಳಿವೆ.

ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ, ಯಶಸ್ಸು ಪಡೆಯಲು ಮತ್ತು ರೋಗ-ರುಜಿನಗಳಿಂದ ಮುಕ್ತಿ ಪಡೆಯಲು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಾಲಯವು ಮಹಾಮಂಟಪ, ಸಭಾಮಂಟಪ,ಅಂತರಾಳ, ಗರ್ಭಗೃಹಗಳನ್ನು ಹೊಂದಿದೆ. ಸಭಾಮಂಟಪದಲ್ಲಿ ವಿಜಯನಗರ ಶೈಲಿಯ ಕಂಬಗಳನ್ನು ಹಾಗೂ ಹಿಂದೆ ಇಲ್ಲಿ ದೇವಾಲಯವನ್ನು ನಿರ್ಮಿಸಿದ ಅಧಿಕಾರಿಗಳ ಉಬ್ಬು ಚಿತ್ರಗಳನ್ನು, ವಿದ ರೀತಿಯ ಪ್ರಾಣಿ, ಪಕ್ಷಿ, ದೇವತೆಗಳು ಉಬ್ಬು ಶಿಲ್ಪಗಳನ್ನು ಕೆತ್ತಿರುವುದನ್ನುಕಾಣಬಹುದು.

ನೊಣವಿನಕೆರೆ ಪ್ರದೇಶವು ಹೊಯ್ಸಳರು ಮತ್ತು ನೊಳಂಬರ ಕಾಲದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಪ್ರಮುಖ ಸ್ಥಳವಾಗಿದೆ.
ಈ ದೇವಾಲಯವು ಸುಂದರವಾದ ಮಂಟಪಗಳ ಸಂಕೀರ್ಣವನ್ನು ಒಳಗೊಂಡಿದ್ದು, ಅತ್ಯಂತ ಆಕರ್ಷಕವಾದ ಧಾರ್ಮಿಕ ಕೇಂದ್ರವಾಗಿದೆ.
ಈ ದೇವಾಲಯದಲ್ಲಿ ಪ್ರತಿದಿನ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಪ್ರತಿವರ್ಷ ಮಾರ್ಚ್ /ಏಪ್ರಿಲ್ ತಿಂಗಳಲ್ಲಿ ವಿಜೃಂಭಣೆಯಿಂದ ಜಾತ್ರೆ ಹಾಗೂ ರಥೋತ್ಸವ ನಡೆಯುತ್ತದೆ. ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಕೂಡ ಇರುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now