Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಗಸದಲ್ಲಿಂದು 7 ಗ್ರಹಗಳನ್ನು ನೋಡಲು ಅವಕಾಶ : ಸೂರ್ಯ ಮುಳುಗುವ ಸಮಯ ಮರೆಯಲೇ ಬೇಡಿ..!

---Advertisement---

ಆಕಾಶದಲ್ಲಿ ಆಗಾಗ ಚಮತ್ಕಾರಗಳು ನಡೆಯುತ್ತಲೇ ಇರುತ್ತವೆ. ಇಂದು ಕೂಡ ಅಪರೂಪದ ಸನ್ನಿವೇಶ ಸೃಷ್ಟಿಯಾಗಲಿದೆ‌. ಸೌರಮಂಡಲದ ಏಳು ಗ್ರಾಹಗಳು ಒಂದೇ ರೇಖೆಯಲ್ಲು ಕಾಣಿಸಿಕೊಳ್ಳುವ ಅಪರೂಪದ ವಿದ್ಯಾಮಾನ ಇಂದಿನ ನಭೋಮಂಡಲದಲ್ಲಿ ಕಾಣಿಸುತ್ತದೆ. ಇದನ್ನು ಖುಷಿಯಿಂದ ಕಣ್ತುಂಬಿಕೊಳ್ಳಬಹುದು. ಮೋಡಗಳ ಅಡೆತಡೆಗಳಿಲ್ಲದೆ ಹೋದಾಗ ಈ ಅದ್ಭುತವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇಂತಹ ಸನ್ನಿವೇಶ ನಮಗೆ ಪದೇ ಪದೇ ಗೋಚರವಾಗುವುದಿಲ್ಲ. ಇಂದು ಆ ಅದ್ಭುತ ದೃಶ್ಯವನ್ನು ಬಿಟ್ಟರೆ 2040ರ ವರ್ಷದವರೆಗೂ ಕಾಯಬೇಕಾಗುತ್ತದೆ. ಹೀಗಾಗಿ ಪ್ಲ್ಯಾನ್ ಮಾಡಿಕೊಂಡು ಸಂಜೆ ವೇಳೆಗೆ ಈ ದೃಶ್ಯವನ್ನು ಕಣ್ತುಂಬಿಕೊಳ್ಳಿ.

ಹಲವು ಗ್ರಹಗಳು ಏಕಕಾಲಕ್ಕೆ ಒಂದೇ ಸಾಲಿನಲ್ಲಿ ಆಗಸದಲ್ಲಿ ಒಂದರ ಹಿಂದೆ ಒಂದರಂತೆ ನಿಲ್ಲುತ್ತವೆ. ಈ ಗ್ರಹಗಳ ಜೋಡಣೆ ಒಂದು ಕಾಲಕ್ಕೆ ಸರಿಯಾಗಿ ನಡೆಯುವಂತಹ ಅಪರೂಪದ ಜೋಡಣೆಯಾಗಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಒಂದೇ ಸಾಲಿನಲ್ಲಿ ಬರುವುದು ತುಂಬಾ ಅಪರೂಪವಾದದ್ದಾಗಿದೆ. ಈ ಗ್ರಹಗಳ ಪಥಸಂಚಲನ ಆರಂಭವಾಗಿದ್ದು ಜನವರಿಯಲ್ಲಿ. ಈ ಚಮತ್ಕಾರವನ್ನು ಹಲವು ದೇಶಗಳಲ್ಲಿ ಮಾತ್ರ ಕಾಣಬಹುದಾಗಿದೆ.

ಈ ಅದ್ಭುತ ದೃಶ್ಯವನ್ನು ಸಂಜೆ ಅಂದ್ರೆ ಸೂರ್ಯ ಮುಳುಗಿದ 45 ನಿಮಿಷಗಳ ಬಳಿಕ ಕಾಣಬಹುದು. ಶುಕ್ರ, ಮಂಗಳ, ಗುರು ಮತ್ತು ಯುರೇನಸ್ ಗ್ರಹಗಳು ಸರಳವಾಗಿ ಬರಿಗಣ್ಣಿನಲ್ಲಿ ನೋಡುವುದಕ್ಕೆ ಕಾಣಿಸುತ್ತದೆ. ಆದರೆ ಬುಧ, ಶನಿ ಹಾಗೂ ನೆಫ್ಚೂನ್ ಗ್ರಹಗಳನ್ನು ಬರೀ ಕಣ್ಣಿನಿಂದ ನೋಡುವುದಕ್ಕೆ ಸಾಧ್ಯವಿಲ್ಲ. ಇವುಗಳನ್ನು ನೋಡುವುದಕ್ಕೆ ಬೈನಾಕ್ಯೂಲರ್ ಅಥವಾ ಟೆಲಿಸ್ಕೋಪ್ ನ ಅವಶ್ಯಕತೆ ಇರುತ್ತದೆ. ಈ ಗ್ರಹಗಳ ಜೋಡಣೆಯನ್ನು ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಹೈದ್ರಾಬಾದ್, ಪುಣೆ, ಜೈಪುರ, ಲಖನೌ, ನೊಯ್ಡಾ, ಇಂದೋರ್, ಕಾನ್ಪುರ, ಗುಹವಾಟಿ, ಗಂಗಟೊಕ್, ಅಹ್ಮದಾಬಾದ್, ಡೆಹ್ರಾಡೂನ್, ದೆಹಲಿ, ಮುಂಬೈ ನಲ್ಲಿ ನೋಡಬಹುದಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment