Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಪರೇಷನ್ ಸಿಂಧೂರ ಯಶಸ್ವಿ : ಸೈನಿಕರಿಗೆ ಗೌರವ ಸಮರ್ಪಣೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಮೇ. 19 : ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘ (ರಿ) ಬೆಂಗಳೂರು ರಾಜ್ಯ ಘಟಕದ ಸಂಘದ ಸದಸ್ಯರ ಮೊದಲನೆಯ ಸಭೆಯೂ ಇತ್ತೀಚೆಗೆ ಶಾಸಕರಾದ ವೀರೇಂದ್ರ(ಪಪ್ಪಿ)ರವರ ಕಛೇರಿಯಲ್ಲಿ ಶ್ರೀಮತಿ ಕೆ,ಸಿ, ವೀಣಾರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಗಾಣಿಗ ಸಮುದಾಯವನ್ನು ಸಂಘಟಿಸುವ ಹಾಗೂ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಇದಾದ ನಂತರ ಚಿತ್ರದುರ್ಗ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾದ ಸುರೇಶ ಬಾಬು ಮತ್ತು ಸಮಾಜದ ಮುಖಂಡರ ಹಾಗೂ ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘದ ರಾಜ್ಯ ಘಟಕದ ಸಹಯೋಗದಲ್ಲಿ “ಆಪರೇಷನ್ ಸಿಂಧೂರ” ವಿಜಯೋತ್ಸವದ ಅಂಗವಾಗಿ ಹಣೆಗೆ ಸಿಂಧೂರ ಹಚ್ಚಿಕೊಂಡು ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ರಾಷ್ಟ್ರ ಧ್ವಜವನ್ನು ಪ್ರದರ್ಶನ ಮಾಡುವುದರ ಮೂಲಕ ಸೈನಿಕರಿಗೆ ಧೈರ್ಯವನ್ನು ತುಂಬಲಾಯಿತು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾದ ಸುರೇಶ ಬಾಬುರವರು ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಚಕ್‍ನ್ನು ಯೋಧರ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳಾದ ವೆಂಕಟೇಶ್ ರವರಿಗೆ ನೀಡಿದರು.

ಈ ಸಂದರ್ಭದಲ್ಲಿ ಶಿವಾನಂದ, ಮಹಾಮಂತೇಶ್ ಡಿ.ಜಿ. ತಿಪ್ಪೇಸ್ವಾಮಿ, ಕೆ.ಟಿ.ಬಸಣ್ಣ, ಎನ್.ಟಿ.ಬಸವರಾಜು, ಆದರ್ಶ ರುದ್ರಮುನಿ, ಚನ್ನಬಸಪ್ಪ, ಕಿರಣಶಂಕರ್, ನಾಗರತ್ನ, ಪುಷ್ಪ ಸುರೇಶ್‍ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...