Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧರ್ಮದಲ್ಲಿ ವೈಜ್ಞಾನಿಕತೆ ಇದ್ದಾಗ ಮಾತ್ರ ಭವಿಷ್ಯದಲ್ಲಿ ಉಳಿಯಲು ಸಾಧ್ಯ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

---Advertisement---

ಚಿತ್ರದುರ್ಗ : ವಚನ ಪರಂಪರೆಯ ಶರಣರು ಸಾಹಿತ್ಯ ಬದುಕಿಗೆ ಮತ್ತು ಸಮಾಜಕ್ಕೆ ಗೌರವ ತಂದುಕೊಟ್ಟಿದ್ದಾರೆ. ವಚನಗಳು ಭೂತಕಾಲದ ಉಪಮೆ ಮತ್ತು ನೆನಪುಗಳಲ್ಲ. ವರ್ತಮಾನದ ಅಗತ್ಯಗಳನ್ನು ಮೈಗೂಡಿಸಿಕೊಂಡ ಜೀವಪರ ಸಾಹಿತ್ಯವು ಬಡತನ ಮುಕ್ತ ಸಮಾಜ ಕಟ್ಟುವಲ್ಲಿ ಮುಂದಾಗಬೇಕಿದೆ ಎಂದು ಭೋವಿ ಗುರುಪೀಠ ಸಿದ್ಧರಾಮೇಶ್ವರ ಸಂಸ್ಥಾನದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಕರೆಕೊಟ್ಟರು.

ನಗರದ ಪತ್ರಿಕಾ ಭವನದಲ್ಲಿ ದಿನಾಂಕ: 01-09-2026 ರಂದು ಬೆಳಿಗ್ಗೆ 11-00 ಗಂಟೆಗೆ ಏರ್ಪಡಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ಶಸಾಪ ಜಿಲ್ಲಾ ಘಟಕ ವತಿಯಿಂದ ಗೊರುಚ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಇಂದಿನ ಯುವಕರು ವಿಜ್ಞಾನದ ಹೆಸರಲ್ಲಿ ಪ್ರಶ್ನೆಯನ್ನು ಮಾಡದೆ ಧರ್ಮದ ಜೊತೆಗೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಅವರು ಒಪ್ಪಿಕೊಳ್ಳುವ ಹಾಗೆ ನಮ್ಮ ಧರ್ಮದಲ್ಲಿ ವಿಜ್ಞಾನವಿರಬೇಕು. ನಮ್ಮ ಧರ್ಮದಲ್ಲಿ ವೈಜ್ಞಾನಿಕತೆ ರಾರಾಜಿಸಬೇಕು. ಯಾವ ಧರ್ಮದಲ್ಲಿ ವೈಜ್ಞಾನಿಕತೆ ಇರುತ್ತೋ ಆ ಧರ್ಮ ಮಾತ್ರ ಭವಿಷ್ಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ದತ್ತಿ ಪ್ರಶಸ್ತಿಗಳಲ್ಲಿ ಶರಣತತ್ವದ ವ್ಯಕ್ತಿತ್ವ ಘನತೆ ಇರುತ್ತದೆ. ಅಂತಹ ಹೆಸರಿನ ಪ್ರಶಸ್ತಿಗಳಿಗೆ ಯಾವತ್ತೂ ಮೌಲ್ಯಯುತ ಗೌರವ ಸಿಗುತ್ತದೆ ಎಂದರು.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು.
ದತ್ತಿ ದಾಸೋಹಿ ನಾಡೋಜ ಶ್ರೀ ಗೊ.ರು.ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ಮನುಷ್ಯನಿಗೆ ಸಿಗುವ ಬಡತನ, ಹಸಿವು ಮತ್ತು ಅಪಮಾನಗಳನ್ನು ಸಹಿಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು. ನಮಗೆ ಸಿಕ್ಕ ಅವಕಾಶಗಳನ್ನು ಸಮಾಜಮುಖಿ ಚಿಂತನೆಗೆ ಬಳಸುವುದರ ಮೂಲಕ ಸಾಂಸ್ಕøತಿಕ ಶ್ರೀಮಂತಿಕೆಗೆ ಕಾರಣರಾಗಬೇಕು ಆಮೂಲಕ ಜನಪದ ಹಾಗೂ ಶರಣ ಸಾಹಿತ್ಯದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಹಿರಿತನ ನಮ್ಮದಾಗಲಿ ಎಂದರು. ಅಭಾಶಸಾಪ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಶರಣ ಸಾಹಿತ್ಯದ ಶ್ರೀಮಂತ ಪರಂಪರೆಯನ್ನು ಮೆಲುಕು ಹಾಕಿದರು. ಸಾಹಿತಿ ಹಾಗೂ ಶಿಕ್ಷಣತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತ ಇಂದಿನ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದ ಆಗುಹೋಗುಗಳನ್ನು ಪರಿಚಯಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ದಾವಣಗೆರೆ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ದಾವಣಗೆರೆ ಶಸಾಪ ಜಿಲ್ಲಾಧ್ಯಕ್ಷ ಹೆಚ್.ಕೆ.ಲಿಂಗರಾಜು, ಡಾ.ಪಾಲಾಕ್ಷಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ.ಬಿ.ರಾಜಶೇಖರಪ್ಪ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ, ನಿವೃತ್ತ ಉಪನಿರ್ದೇಶಕ ಎನ್.ಎಂ.ರಮೇಶ್, ಡಾ.ಮೈಲನಹಳ್ಳಿ ರೇವಣ್ಣ, ಕರವೇ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್, ಶಸಾಪ ರಾಜ್ಯ ಕಾರ್ಯದರ್ಶಿ ಸೋಮವಾರ ಗಾಂಜಿ, ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಜಯಲಕ್ಷ್ಮೀ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಲೇಖಕಿ ಹಾಗೂ ಕವಿಯತ್ರಿ ಡಾ.ಜಯಾ ರಾಜಶೇಖರ್ ಇವರಿಗೆ ಗೊರುಚ ಶರಣ ದತ್ತಿ ಪ್ರಶಸ್ತಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಪ್ರಥಮ ಕುಲಪತಿ ಹಾಗೂ ಮೈಸೂರು ವಿವಿ.ಯಲ್ಲಿ ಜಾನಪದ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಶಿವಮೊಗ್ಗ ಜಿಲ್ಲೆಯ ಡಾ.ಅಂಬಳಕಿ ಹಿರಿಯಣ್ಣ ಇವರಿಗೆ ಗೊರುಚ ಜಾನಪದ ದತ್ತಿ ಪ್ರಶಸ್ತಿ, ರಂಗಭೂಮಿ ನಟ ನಿರ್ದೇಶಕ, ಧಾರಾವಾಹಿ ಕಲಾವಿದ, ಭಾವಗೀತೆ, ಚಲನಚಿತ್ರ ಗೀತೆಗಳನ್ನು ರಚಿಸಿದ ಕೆಎಎಸ್ ಅಧಿಕಾರಿ ಡಾ.ಸಂಗಮೇಶ್ ಉಪಾಸೆ ಇವರ ನೀರಕಂಡಲ್ಲಿ ಮುಳುಗುವರಯ್ಯ ಕೃತಿಗೆ ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ, ಗಾಯಕಿ ಹಾಗೂ ಲೇಖಕಿ ಡಾ.ಎಂ. ಕೆಂಪಮ್ಮ ಕಾರ್ಕಹಳ್ಳಿ ರಚಿಸಿದ ಮಂಡ್ಯ ಜಿಲ್ಲೆಯ ಆಚರಾಣಾತ್ಮಕ ಜಾನಪದ ಕೃತಿಗೆ ಗೊರುಚ ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉಮೇಶ್ ಪತ್ತಾರರ ವಚನ ಪ್ರಾರ್ಥನೆ, ಆಭಾಶಸಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತ ಕೋರಿದರು. ಜಿಲ್ಲಾ ಕಾರ್ಯದರ್ಶಿಗಳಾದ ಹುರಳಿ ಎಂ. ಬಸವರಾಜ್ ಕಾರ್ಯಕ್ರಮ ನಿರೂಪಿಸಿ, ಕೆ.ಪಿ.ಎಮ್ ಗಣೇಶಯ್ಯ ವಂದಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now