ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 01 : ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ ಸೈಯದ್ ಅಫಾಖ್ ಅಹಮದ್ ಸಮಾಜವಾದಿ ಪಾರ್ಟಿಗೆ ಮಂಗಳವಾರ ಸೇರ್ಪಡೆಯಾದರು.

ಪ್ರವಾಸಿ ಮಂದಿರದಲ್ಲಿ ಅಫಾಖ್ ಅಹಮದ್ ಹಾಗೂ ಶಬ್ಬೀರ್ ಅಹಮದ್ ಇವರುಗಳನ್ನು ಸಮಾಜವಾದಿ ಪಾರ್ಟಿಗೆ ಬರಮಾಡಿಕೊಂಡು ಮಾತನಾಡಿದ ಜಿಲ್ಲಾಧ್ಯಕ್ಷ
ಎಸ್.ಲಕ್ಷ್ಮಿಕಾಂತ್ ಮುಲಾಯಂಸಿಂಗ್ ಯಾದವ್ರವರು 1994 ರಲ್ಲಿ ಸಮಾಜವಾದಿ ಪಾರ್ಟಿಯನ್ನು ಹುಟ್ಟುಹಾಕಿ ರಾಜ್ಯಾದ್ಯಂತ ಸೈಕಲ್ನಲ್ಲಿ ಸಂಚರಿಸಿ ಪಾರ್ಟಿಯನ್ನು ಸಂಘಟನೆಗೊಳಿಸಿದರು. ಅವರ ಪುತ್ರ ಅಖಿಲೇಶ್ಯಾದವ್ ಉತ್ತರಪ್ರದೇಶದಲ್ಲಿ 37 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದು ಸಮಾಜವಾದಿ ಪಾರ್ಟಿಯ ಮೂಲ ಉದ್ದೇಶ ಎಂದು ತಿಳಿಸಿದರು.
ಕೇಂದ್ರದಲ್ಲಿರುವ ಬಿಜೆಪಿ. ಸರ್ಕಾರ ಲೂಟಿ ಹೊಡೆಯುತ್ತಿದೆ. ನೀಟ್ ಪರೀಕ್ಷೆಯಲ್ಲಿನ ಅಕ್ರಮದಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಶ್ರೀಮಂತರ ಪರವಾಗಿರುವ ಬಿಜೆಪಿ.ಯನ್ನು ಕಿತ್ತೊಗೆದು ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಕೇಂದ್ರದಲ್ಲಿ ಗದ್ದುಗೆ ಹಿಡಿಯಲಿದೆ ಎಂದು ಹೇಳಿದರು.
ಸಮಾಜವಾದಿ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಗುರುಮೂರ್ತಿ ಮಾತನಾಡಿ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವ ರಾಜ್ಯ ಸರ್ಕಾರ ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮುರು ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸದೆ ರೈತರಿಗೆ ಅನ್ಯಾಯವೆಸಗುತ್ತಿದೆ. ದಾವಣಗೆರೆ ಜಿಲ್ಲೆಯ ಜಗಳೂರು ಸೇರಿದಂತೆ ನಮ್ಮ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಕೂಡಲೆ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲವಾದಲ್ಲಿ ವಿಧಾನಸೌಧಕ್ಕೆ ಅಭಿಯಾನ ಹೊರಡಲಾಗುವುದೆಂದು ಎಚ್ಚರಿಸಿದರು.
ಸಮಾಜವಾದಿ ಪಾರ್ಟಿಗೆ ಸೇರ್ಪಡೆಯಾಗಿ ಮಾತನಾಡಿದ ಸೈಯದ್ ಅಫಾಖ್ ಅಹಮದ್ ಕಾಂಗ್ರೆಸ್ನಲ್ಲಿ ಸೇವೆ ಸಲ್ಲಿಸಿ ಎಂಎಲ್ಸಿ. ಚುನಾವಣೆಗೆ ಟಿಕೇಟ್ ಕೇಳಿದೆ. ನನ್ನ ಮನವಿಯನ್ನು ತಿರಸ್ಕರಿಸಿದ ಪರಿಣಾಮ ಬೇಸರಗೊಂಡು ಸಮಾಜವಾದಿ ಪಾರ್ಟಿಯ ತತ್ವ ಸಿದ್ದಾಂತ ಒಪ್ಪಿ ಸೇರ್ಪಡೆಯಾಗಿದ್ದೇನೆಂದು ಹೇಳಿದರು.
ಸಮಾಜವಾದಿ ಪಾರ್ಟಿ ಎಸ್ಸಿ. ಘಟಕದ ಅಧಕ್ಷ ರವಿ ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೆಹಬೂಬ್ಪಾಷ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.










