Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರೋಟರಿ ಕ್ಲಬ್‌ನ ಅಧ್ಯಕ್ಷೆಯಾಗಿ ಒಂದು ವರ್ಷದ ಸೇವೆ ತೃಪ್ತಿ ತಂದಿದೆ : ಶ್ರೀಮತಿ ಮಾಧುರಿ ಮಧುಪ್ರಸಾದ್

---Advertisement---

ಚಿತ್ರದುರ್ಗ,(ಜೂ.30) : ಕಳೆದ ಒಂದು ವರ್ಷದಿಂದ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ಆರೋಗ್ಯ, ಶಿಕ್ಷಣದಂತಹ ವಿವಿಧ ಜನಪಯೋಗಿ ಕಾರ್ಯಗಳನ್ನು ಮಾಡಿದ್ದು ಇದರಲ್ಲಿ ನನಗೆ ತೃಪ್ತಿ ತಂದಿದೆ ಎಂದು ರೋಟರಿ ಕ್ಲಬ್‌ನ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಮಧುಪ್ರಸಾದ್ ತಿಳಿಸಿದರು.

ನಗರದ  ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 2022-23ನೇ ಸಾಲಿನ ಪದಾಧಿಕಾರಿಗಳ ಅವಧಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಾರಂಭದಲ್ಲಿ ಅಧ್ಯಕ್ಷರಾದಾಗ ತುಂಬ ಭಯವಾಗಿತ್ತು. ಆದರೆ ತದ ನಂತರ ನಮ್ಮ ಸಂಘದ ಪದಾಧಿಕಾರಿಗಳ ಸಹಕಾರದಿಂದ ನಗರದ ಜನತೆಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಜಾರಿ ಮಾಡಿ ಅರ್ಹರಿಗೆ ತಲುಪಿಸಲಾಯಿತು ಎಂದರು.

ಈ ವರ್ಷದಲ್ಲಿ ಸುಮಾರು 150 ಕಾರ್ಯಕ್ರಮಗಳನ್ನು ಮಾಡಲಾಗಿದೆ.ಇದರಲ್ಲಿ ಆರೋಗ್ಯ, ಶಿಕ್ಷಣ, ದಂತ ಶಿಬಿರ, ಅಪೌಷ್ಟಿಕತೆಯ 120 ಮಕ್ಕಳಿಗೆ ಪೌಷ್ಟಿಕತೆಯ ಆಹಾರ ವಿತರಣೆ, ಪಶು ಚಿಕಿತ್ಸಾ ಶಿಬಿರ, ಜನರಿಗಾಗಿ ಆರೋಗ್ಯ ತಪಾಸಣಾ ಶಿಬಿರ, ಮಕ್ಕಳಲ್ಲಿ ಆತ್ಮಹತ್ಯೆಯನ್ನು ತಡೆಯುವ ಸಲುವಾಗಿ ವಿವಿಧ ಕಾಲೇಜಿನಲ್ಲಿ ತಜ್ಞರಿಂದ ಉಪನ್ಯಾಸ, ಕೋವಿಡ್ ಲಸಿಖಾ ಕಾರ್ಯಕ್ರಮ, ಕ್ಯಾನ್ಸ್‌ರ್ ತಪಾಸಣಾ ಶಿಬಿರ, ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ವಿತರಣಾ ಕಾರ್ಯಕ್ರಮ, ವಿವಿಧ ಸರ್ಕಾರಿ ಶಾಲೆಗಳಿಗೆ ಶಾಲಾ ಬೆಂಚುಗಳ ವಿತರಣೆ, ಉತ್ತಮ ಶಿಕ್ಷಕರುಗಳಿಗೆ ಪ್ರಶಸ್ತ್ರಿ ಪ್ರಧಾನ, ಇದ್ದಲ್ಲದೆ ಶಿಕ್ಷಕರುಗಳಿಗೆ ತರಬೇತಿ, ಮಕ್ಕಳ ಪ್ರತಿಭಾ ಪುರಸ್ಕಾರ, ದಂಡಿನ ಕುರುಬರ ಹಟ್ಟಿ ಸರ್ಕಾರಿ ಶಾಲೆಗೆ 2 ಲಕ್ಷ ರೂ ಮೌಲ್ಯದ ವಿವಿಧ ರೀತಿಯ ಉಪಕರಣಗಳ ಕೂಡುಗೆ, ಕ್ಲಬ್‌ನ ಪದಾಧಿಕಾರಿಗಳಿಗಾಗಿ ವಿವಿಧ ರೀತಿಯ ಕ್ರೀಡಾಕೂಟ, ಸಂಗೀತ ಸಂಜೆ, ಯೋಗ ದಿನಾಚರಣೆ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.

ರೋಟರಿ ಕ್ಲಬ್ ಕನಸಿನ ಕೂಸಾದ ಡಯಾಲಿಸಿಸಿ ಕೇಂದ್ರ ಸ್ಥಾಪನೆ ಇದರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದರ ಮೂಲಕ ನನ್ನ ಅವಧಿಯಲ್ಲಿಯೇ ಕೇಂದ್ರವನ್ನು ಸ್ಥಾಪನೆ ಮಾಡಬೇಕೆಂದು ತೀರ್ಮಾನಿಸಲಾಯಿತು. ಅದರೆ ಇನ್ನು ಸ್ವಲ್ಪ ಕೆಲಸ ಬಾಕಿ ಇರುವುದರಿಂದ ಮುಂದಿನ ದಿನದಲ್ಲಿ ಇದರ ಉದ್ಘಾಟನೆ ಕಾರ್ಯ ನಡೆಯಲಿದೆ.

ಸುಮಾರು 3 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ ಇದಕ್ಕೆ ಅಗತ್ಯವಾಗಿ ಬೇಕಾದ ಡಯಾಲಿಸಿಸಿ ಯಂತ್ರಗಳನ್ನು ಸಹಾ ದಾನಿಗಳಿಂದ ತರಲಾಗುತ್ತಿದೆ. ಈ ಕಟ್ಟಡದ ಮೇಲೆ ರಕ್ತ ನಿಧಿ ಮತ್ತು ಕಣ್ಣಿನ ಸಂಗ್ರಹ ಕೇಂದ್ರವನ್ನು ಪ್ರಾರಂಭ ಮಾಡುವ ಬಗ್ಗೆಯೂ ಸಹಾ ಚಿಂತನೆ ನಡೆದಿದೆ ಎಂದು ಮಾಧುರಿ ಮಧುಪ್ರಸಾದ್ ತಿಳಿಸಿದರು.

ಕ್ಲಬ್ ನ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಷಾ ಮಾತನಾಡಿ ನಮ್ಮ ಒಂದು ವರ್ಷದ ಅವಧಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ರೀತಿಯ ಕಾರ್ಯಕ್ರಮಗಳಿಗೆ ಎಲ್ಲಾ ಸದಸ್ಯರು ತನು.ಮನು, ಧನದೊಂದಿಗೆ ಸಹಾಯವನ್ನು ಮಾಡಿದ್ದಾರೆ. ಮುಂದಿನ  ದಿನದಲ್ಲಿಯೂ ಸಹಾ ಇದೇ ರೀತಿ ಸಹಕಾರವನ್ನು ನೀಡುವುದರ ಮೂಲಕ ಕ್ಲಬ್‌ನ ಬೆಳವಣಿಗೆಯಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಗೌರ‍್ನರ್ ಶ್ರೀಮತಿ ಗಾಯತ್ರಿ ಶಿವರಾಂ, ಪಿ.ಡಿ.ಜಿ. ಕೆ.ಮದುಪ್ರಸಾದ್, ಪಿ.ಎಚ್.ಎಫ್. ಎಂ.ಕೆ.ರವೀಂದ್ರ ಭಾಗವಹಿಸಿದ್ದರು. ಶ್ರೀಮತಿ ಉಮಾ ರಾಮಾಂಜುನೇಯ ಪ್ರಾರ್ಥಿಸಿದರೆ ಲಕ್ಷ್ಮಣ್ ಕಾರ್ಯಕ್ರಮ ನಿರೂಪಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...