Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಳಗಾವಿಯಲ್ಲಿ ಜನವರಿ 27 ಮತ್ತು 28 ರಂದು ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ : ಡಿ.ಕೆಂಚವೀರಪ್ಪ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 24 : ಜಾಗತಿಕ ಲಿಂಗಾಯತ ಮಹಾಸಭಾದವತಿಯಿಂದ ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶವು ಜ. 27 ಮತ್ತು 28 ರಂದು ಬೆಳಗಾವಿಯ ಶಿವಬಸವ ನಗರದ ಆರ್.ಎನ್.ಶೆಟ್ಟಿ ಪಾಲಿಟ್ನೆಕಿಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಚಿತ್ರದುರ್ಗ ಘಟಕದ ಅಧ್ಯಕ್ಷರಾದ ಡಿ.ಕೆಂಚವೀರಪ್ಪ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಾ. ಬ. ಡಾ. ಫ. ಗು. ಹಳಕಟ್ಟಿ ಅವರಂತಹ ಅನೇಕ ವಿದ್ವಾಂಸರ ಪರಿಶ್ರಮದ ಫಲವಾಗಿ ಇಂದು ಶರಣರ 23000 ವಚನಗಳು ಪ್ರಕಟಗೊಂಡಿವೆ. ಲಿಂಗಾಯತ ಧರ್ಮದ ಇತಿಹಾಸ, ತತ್ತ್ವ, ಧರ್ಮ, ಸಾಹಿತ್ಯ, ಸಂಸ್ಕೃತಿಯಂತಹ ಮಹತ್ವದ ವಿಷಯಗಳು ವಚನಗಳ ಮೂಲಕ ನಮ್ಮರಿವಿಗೆ ಬಂದ ಕಾರಣವಾಗಿ ನಮ್ಮ ಧರ್ಮ-ಲಿಂಗಾಯತ, ಧರ್ಮಗುರು ಬಸವಣ್ಣನವರು, ಸಂವಿಧಾನ ವಚನ ಸಾಹಿತ್ಯ ಎಂಬುದು ಸ್ಪಷ್ಟವಾಯಿತು.

ಇಂದು ಈ ವಿಷಯವನ್ನು ಇನ್ನಷ್ಟು ವ್ಯಾಪಕವಾಗಿ ಪ್ರಸಾರಮಾಡುವ ಕಾರ್ಯದಲ್ಲಿ ಮಹಿಳೆಯರ ಸಹಭಾಗಿತ್ವವೂ ಅತ್ಯವಶ್ಯವಾಗಿದೆ. ಮುಂಬರುವ ಜನಗಣತಿ ಹಾಗು ಜಾತಿಗಣತಿಯ ಸಂದರ್ಭಗಳಲ್ಲಿ ಲಿಂಗಾಯತ ಧರ್ಮ ಮತ್ತು ಸಮಾಜ ತನ್ನ ಅಸ್ತಿತ್ವ ಹಾಗು. ಆಸ್ಥಿತೆಯನ್ನು ಕಾಯ್ದುಕೊಳ್ಳುವಂತಾಗಲು ಲಿಂಗಾಯತ ಧರ್ಮೀಯರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಾವೇಶದ ಮೂಲಕ ಅರಿವನ್ನು ಮೂಡಿಸಬೇಕಾಗಿದೆ ಎಂದರು.

ನಮ್ಮ ರಾಜಕಾರಣಿಗಳು ಹಾಗು ಪಟ್ಟಭದ್ರ ಹಿತಾಸಕ್ತಿಗಳು ಹಲವಾರು ಆಮಿಷಗಳ ಮೂಲಕ ಲಿಂಗಾಯತರ ಸಮಗ್ರತೆಗೆ ಹಾಗು ಐಕ್ಯತೆಯನ್ನು ಹಾಳು ಮಾಡದಂತೆ ಈ ಸಮಾವೇಶದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು ಲಿಂಗಾಯತ ಸ್ವತಂತ್ರ 3 ದರ್ಮದ ಹೋರಾಟ ಹಾಗು ಮೀಸಲಾತಿಯ ಹೋರಾಟಗಳು ಪರಸ್ಪರ ಪೂರಕವಾಗಿದ್ದು, ಸ್ವತಂತ್ರ ಧರ್ಮದ ಮಾನ್ಯತೆ ಹಾಗು ಮೀಸಲಾತಿಗಳು ಲಿಂಗಾಯತರ ಹಕ್ಕುಗಳಾಗಿವೆ. ಇಂದು ಬೌದ್ಧ, ಜೈನ, ಸಿಬ್ಬ ಧರ್ಮಗಳು ಮಾತ್ರ ಧರ್ಮ ಮಾನ್ಯಗಿವೆ. ಆ ಧರ್ಮದವರೆಲ್ಲರೂ ಮೀಸಲಾತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಸಂವಿಧಾನಾತ್ಮಕವಾಗಿ ಸ್ವತಂತ್ರ ಧರ್ಮವಾಗಿ ಪರಿಗಣಿತವಾಗುವ ಎಲ್ಲ ಲಕ್ಷಣಗಳನ್ನು ಲಿಂಗಾಯತ ಧರ್ಮ ಹೊಂದಿದ್ದರೂ ಹಿಂದುತ್ವದ ಭಾಗ ಎಂದೇ ಮುಂದುವರಿಯುತ್ತಾ ಬಂತು. ಇದರಿಂದ ಎಚ್ಚೆತ್ತುಗೊಂಡ ಸಮುದಾಯದ ಜನ ಲಿಂಗಾಯತ ಒಂದು ಸ್ವತಂತ್ರ ಧರ್ಮ ಮತ್ತು ವೀರಶೈವ ಅದರ ಉಪ ಪಂಗಡ ಎಂದು ತೆರೆಗೆ ಸರಿದ ಇದರ ದಾಖಲೆಗಳನ್ನು ಎತ್ತಿ ಹಿಡಿದು ಶತಮಾನಗಳಿಂದ ಧ್ವನಿ ಎತ್ತುತ್ತ ಬಂದರು. ಇದು ಕಳೆದ ಆರೇಳು ವರ್ಷಗಳಿಂದ ಹೆಚ್ಚು ಸಂಘಟಿತಗೊಂಡು ಈ ಹಕ್ಕೊತ್ತಾಯಕ್ಕಾಗಿಯೇ ಜಾಗತಿಕ ಲಿಂಗಾಯತ ಮಹಾಸಭಾ” ಸಂಘಟನೆ ಸ್ಥಾಪಿತವಾಯಿತು.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಘೋಷಿಸಲು ಈ ಹಿಂದೆ ರಾಜ್ಯ ಸರ್ಕಾರದ ಮೂಲಕ ಶಿಫಾರಸ್ಸುಗೊಂಡು ಭಾರತ ಸರ್ಕಾರಕ್ಕೆ ಕಳುಹಿಸಿದ ಪ್ರಸ್ತಾವನೆ ಅಸ್ಪಷ್ಟ ಹಿಂಬರಹದಿಂದ ಹಿಂದಕ್ಕೆ ಬಂದಿದೆ. ಈ ಕುರಿತು ಮುಂದಿನ ಕ್ರಮ ಜರುಗಿಸಲು ಜಾಗತಿಕ ಲಿಂಗಾಯತ ಮಹಾಸಭಾ ಹಲವು ಕಡೆ ಸಮ್ಮೇಳನಗಳನ್ನು ಮಾಡುತ್ತಾ ಬಂದಿದೆ. ಬೆಳಗಾವಿಯಲ್ಲಿ ಎರಡು ದಿನಗಳ ರಾಷ್ಟ್ರ ಮಟ್ಟದ ಮಹಿಳಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಜಿಲ್ಲೆಯಲ್ಲಿ ಸುಮಾರು ನಾಲ್ಕು ನೂರು ನೂರು ಸದಸ್ಯರಿದ್ದ ಅದರಲ್ಲಿ ಒಂದು ನೂರು ಮಹಿಳಾ ಸದಸ್ಯರಿದ್ದಾರೆ ಎಂದರು.

ಗೋಷ್ಠಿಯಲ್ಲಿ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಶೈಲಜಾ ಬಾಬು ಕಾರ್ಯದರ್ಶಿ ಶ್ರೀಮತಿ ಜಯಶೀಲ ವೀರಣ್ಣ,ಸಹಾ ಸಂಚಾಲಕರಾದ ಜಿ.ಟೆ ನಂದೀಶ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಉಪಸ್ಥಿತರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment