Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಸರಾ ಉದ್ಘಾಟನೆ ಅಧಿಕೃತ ಆಹ್ವಾನ : ಬಾನು‌ ಮುಷ್ತಾಕ ಫಸ್ಟ್ ರಿಯಾಕ್ಷನ್

---Advertisement---

ಹಾಸನ: ಸಾಕಷ್ಟು ವಿರೋಧಗಳ ನಡುವೆಯೂ ರಾಜ್ಯ ಸರ್ಕಾರ, ಬಾನು‌ ಮುಷ್ತಾಕ ಅವರಿಗೆ ಆಹ್ವಾನ ನೀಡಿದೆ. ದಸರಾ ಉದ್ಘಾಟನೆಗಾಗಿ ಆಹ್ವಾನ ನೀಡಿದೆ. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಚಾಮುಂಡೇಶ್ವರಿ ಪ್ರಾಧಿಕಾರದ ಮುಖ್ಯ ಜಾರ್ಯನಿರ್ವಹಣಾಧಿಕಾರಿ ರೂಪಾ ಮತ್ತು ಮೈಸೂರು ಜಿಲ್ಲಾಡಳಿತ ನೇತೃತ್ವದ ತಂಡ ಅಮೀರ್ ಮೊಹಲ್ಲಾದಲ್ಲಿರುವ ಬಾನು ಮುಷ್ತಾಕ ಅವರ ಮನೆಗೆ ಭೇಟಿ ನೀಡಿ, ಕುಟುಂಬ ಸಮೇತ ಬರಬೇಕೆಂದು ಆಹ್ವಾನ ನೀಡಿದೆ. ಮೈಸೂರು ಪೇಟ ಧರಿಸಿ, ಶಾಲು ಹೊದಿಸಿ, ಆನೆ ವಿಗ್ರಹವನ್ನು ನೀಡಿ ಆಹ್ವಾನ ಕೊಟ್ಟಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾನು ಮುಷ್ತಾಕ ಅವರು, ಖಂಡಿತಾ ನನಗೆ ಇದು ಖುಷಿಯ ವಿಚಾರವೇ ಸರಿ. ದಸರಾವನ್ನು ನಾವೂ ಹಲವು ಪ್ರಬೇಧಗಳಲ್ಲಿ ನೋಡಬಹುದಾಗಿದೆ. ನೀವೂ ಚಾಮುಂಡೇಶ್ವರಿ ತಾಯಿ ಅಂತೀರಿ, ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ಇದನ್ನು ನಾಡಹಬ್ಬ ಅಂತಾರೆ, ಅದನ್ನು ಗೌರವಿಸುತ್ತೇನೆ. ನಾಡಹಬ್ಬ, ಚಾಮುಂಡೇಶ್ವರಿ ತಾಯಿ ಎಂದು ಪ್ರೀತಿ, ಅಭಿಮಾನದಿಂದ ಕರಿತೀರಿ.

 

ಇದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ನಾಡಿನ ಭಾಗವಾಗಿದೆ. ಹೀಗಾಗಿ ಇದು ನನಗೂ ಪ್ರಿಯವಾಗಿದೆ. ನಾನು ಗೌರವಿಸುವ ಹಬ್ಬವಾಗಿದೆ. ಪ್ರೀತಿಯಿಂದ ಭಾಗಿಯಾಗುವ ಹಬ್ಬವಾಗಿದೆ. ನಾನು ತಂದೆ ತಾಯಿ ಜೊತೆಗೆ ಹಲವು ಬಾರಿ ಜಂಬು ಸವಾರಿ ನೋಡುವುದಕ್ಕೆ ಹೋಗುತ್ತಿದ್ದೆ. ಈಗ ನಾನೇ ದಸರಾ ಉದ್ಘಾಟನೆ ಸಂದರ್ಭದ ಆಹ್ವಾನ ಬಂದಿದೆ. ನನಗೆ ನಿಜಕ್ಕೂ ತುಂಬಾನೇ ಖುಷಿಯಾಗಿದೆ ಎಂದು ಅಧಿಕೃತ ಆಹ್ವಾನದ ಬಳಿಕ ಬಾನು ಮುಷ್ತಾಕ ಮಾತನಾಡಿದ್ದಾರೆ. ಬಾನು ಮುಷ್ತಾಕ ಅವರು ಹಣೆಗೆ ಕುಂಕುಮ ಇಟ್ಟುಕೊಂಡು ಬರಲಿ ಎಂದೇ ಹಲವರು ಒತ್ತಾಯಿಸುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...