ಬೆಂಗಳೂರು; ಫಿಲ್ಮ್ ಫೆಸ್ಟಿವಲ್ ಗೆ ಸ್ಟಾರ್ ನಟರೇ ಗೈರಾಗಿದ್ದು ಈ ಬಾರಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕೆರಳಿಸಿತ್ತು. ಹೀಗಾಗಿ ಸೆಲೆಬ್ರೆಟಿಗಳ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎಂದೇ ಹೇಳಿಕೆ ನೀಡಿದ್ದರು. ಈ ಸಂಬಂಧ ಹಲವರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಇದೀಗ ಸುದೀಪ್ ಅವರು ಇದರ ಬಗ್ಗೆ ನೇರವಾಗಿಯೇ ಮಾತನಾಡಿದ್ದಾರೆ. ಅದಕ್ಕೆ ಡಿಸಿಎಂ ಡಿಕೆ ಕೂಡ ಅಷ್ಟೇ ನೇರವಾಗಿ ಉತ್ತರಿಸಿದ್ದಾರೆ.
ಸುದೀಪ್ ಅವರು ಈ ಬಗ್ಗೆ ಮಾಧ್ಯನ ಒಂದಕ್ಕೆ ಸಂದರ್ಶನ ಕೊಡುವಾಗ ಮಾತನಾಡಿ, ನಾವೂ ಓಡಾಡುವ ಕಾರುಗಳ ನಟ್ಟು ಬೋಲ್ಟ್ ಕೂಡ ಟೈಟ್ ಇರಬೇಕು. ಅದನ್ನ ಮಾಡುವುದಕ್ಕೆ ನಾನು ಹೋದರೆ ಸರಿ ಇರುವುದಿಲ್ಲ. ಮೆಕ್ಯಾನಿಕ್ ಬಳಿಯೇ ಹೋಗಬೇಕು. ಕಾರಿನ ವಿಚಾರ ಅವರಿಗೆ ಮಾತ್ರ ಗೊತ್ತಿರುತ್ತದೆ. ಚಿತ್ರರಂಗದ ವಿಚಾರ ಚಿತ್ರರಂಗದವರಿಗೆ ಮಾತ್ರ ಗೊತ್ತಿರುತ್ತದೆ. ಅವರ ಬಗ್ಗೆ ಗೌರವ ಇದೆ. ಕೆಲವು ಸತ್ಯವನ್ನು ತಿಳಿದುಕೊಂಡು ಮಾತನಾಡಬೇಕು ಎಂದು ಸುದೀಪ್ ಅವರು ಹೇಳಿದ್ದರು.
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ನನಗೆ ಯಾರಿಗೂ ಉತ್ತರ ಕೊಡುವುದಕ್ಕೆ ಇಷ್ಟವಿಲ್ಲ ಫಿಲ್ಮ್ ಚೇಂಬರ್ ಗೆ ಹೋಗಿ ನಾನು ಏನು ಮಾಡಿದ್ದೇನೆ ಎಂಬುದರ ಹಿಸ್ಟರಿ ತೆಗೆದುಕೊಂಡು ಬರಲಿ. ಅವರೆಲ್ಲರಿಗೂ ಉತ್ತರಿಸಬೇಕಿಲ್ಲ. ಕಾಲವೇ ಉತ್ತರ ಕೊಡುತ್ತದೆ ಎಂದು ತಿರುಗೇಟು ನೀಡಿದ್ದಾರೆ. ವಾರ್ನಿಂಗ್ ಅಂತಾದ್ರೂ ಅಂದ್ಕೊಳ್ಳಲಿ , ಚಿತ್ರರಂಗದವರ ನಟ್ಟು ಬೋಲ್ಟ್ ಹೇಗೆ ಟೈಟ್ ಮಾಡಬೇಕು ಅನ್ನೋದು ಗೊತ್ತಿದೆ ಎಂದು ಈ ಹಿಂದೆ ಡಿಕೆ ಶಿವಕುಮಾರ್ ಹೇಳಿದ್ದರು. ಇದೀಗ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














