Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಚಿವರು, ಶಾಸಕರ ಸಭೆಗೆ ಆಹ್ವಾನ ಇಲ್ಲ : ನನಗಿಲ್ಲದ ಕಷ್ಟ ನಿಮಗಿದೆ ಎಂದು ಮಾಧ್ಯಮದವರಿಗೆ ತಿರುಗೇಟು ಕೊಟ್ರು ಡಿಕೆಶಿ..!

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಕಷಚಟಪಟ್ಟು ಪಕ್ಷ ಕಟ್ಟಿದರು ಆ ಕ್ಷಣದಲ್ಲಿ ಎಸ್ ಎಂ ಕೃಷ್ಣ ಅವರು ಸಿಎಂ ಆದ್ರೂ. ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಮಿಸ್ ಆಯ್ತು. ಈ ಸಂಬಂಧ ಇತ್ತೀಚೆಗಷ್ಟೇ ನೋವನ್ನು ಕೂಡ ಹೊರ ಹಾಕಿದ್ರು. ಇದೀವ ಸಿಎಂ ಆಕಾಂಕ್ಷಿಯಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಅವರ ನೋವು, ಅವರ ಭಾವನೆಯನ್ನು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ. ಅವರು ಒಬ್ಬ ಹಿರಿಯ ನಾಯಕರು, ನಮ್ಮ‌ಪಕ್ಷಕ್ಕಾಗಿ ದುಡಿದಿದ್ದಾರೆ. ಅದರಲ್ಲೇನು ತಪ್ಪಿಲ್ಲ ಎಂದಿದ್ದಾರೆ. ಇದರ‌ ನಡುವೆ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರ್ತಾರೆ ಎಂಬ ಚರ್ಚೆಯೂ ಆಗ್ತಾ ಇದೆ. ಆ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಚರ್ಚೆ ಮಾಡ್ತಾ ಇರಲಿ. ಚರ್ಚೆ ಮಾಡುವುದರಲ್ಲಿ ತಪ್ಪೇನಿದೆ. ಅವರವರ ಅಭಿಪ್ರಾಯ ತಿಳಿಸುತ್ತಾರೆ. ಆದ್ರೆ ಅದನ್ನ ಪಬ್ಲಿಕ್ ನಲ್ಲಿ ಮಾತನಾಡುವುದು ತಪ್ಪು ಎಂದಿದ್ದಾರೆ.

ಇದೇ ವೇಳೆ ಇಂದಿನ ಸಚಿವರು, ಶಾಸಕರ ಸಭೆಗೆ ಆಹ್ವಾನ ಇಲ್ಲದೆ ಇರುವುದರ ಬಗ್ಗೆ ಮಾತನಾಡಿ, ಸಿಎಂ ಅವರಿಗೆ ಏನು ಅಧಿಕಾರ ಇದೆ ಅದರಿಂದ ಕೆಲವು ಎಂಎಲ್ಎ ಗಳಿಗೆ ಏನು ಸಮಸ್ಯೆ ಇದೆ ಅದನ್ನ ಕೇಳುವುದಕ್ಕೋಸ್ಕರ ಈ ಸಭೆ ಮಾಡ್ತಾ ಇದ್ದಾರೆ. ನಮ್ಮ ಸುರ್ಜೆವಾಲ ಸಾಹೇಬ್ರು ಅನೇಕ ಸಮಸ್ಯೆಗಳನ್ನ ಅವರ ಗಮನಕ್ಕೆ ತಂದಿದ್ದಾರೆ. ನಮ್ಮ ಎದುರಿಗೆ ಕರೆದು ಮಾತನಾಡಿದ್ದಾರೆ. ನಮಗೆ ಅದೆಲ್ಲ ಏನು ಕಷ್ಟ ಇಲ್ಲ. ನಿಮಗೆ ಕಷ್ಟ ಅಂತ ಕಾಣಿಸ್ತಾ ಇದೆ. ಇವತ್ತು ನಂಗೆ ಒಂದು ಮೀಟಿಂಗ್ ಇದೆ ಎಂದಿದ್ದಾರೆ. ಈ ಮೂಲಕ ಸಭೆಗೆ ಆಹ್ವಾನ ನೀಡದೆ ಇದ್ದರು ನನಗೇನು ಬೇಸರವಿಲ್ಲ ಎಂಬ ಮಾತನ್ನ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment