ಬೆಂಗಳೂರು: ಹೊಸ ವರ್ಷದ ಸಂಭ್ರಮದ ಹೊಸ್ತಿಲಲ್ಲಿ ಜನರಿದ್ದಾರೆ. ಇಂದು ಒಂದೇ ಒಂದು ದಿನ ಕಳೆದರೆ 2026ಕ್ಕೆ ಮುನ್ನಡಿ ಬರೆಯಲಿದ್ದಾರೆ. ಹೀಗಾಗಿಯೇ 2025ನ್ನ ಬೀಳ್ಕೊಟ್ಟು 2026 ಅನ್ನು ಸ್ವಾಗತಿಸೋದಕ್ಕೆ ಜನ ಸಿದ್ಧವಾಗಿದ್ದಾರೆ. ಪಾರ್ಟಿ, ಸಾಂಗ್ಸ್ ಅಂತ ಕುಣಿದು ಕುಪ್ಪಳಿಸಲಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಂತೂ ಈ ಸಂಭ್ರಮ ಜೋರಾಗಿಯೇ ಇರಲಿದೆ. ನಮ್ಮ ಪೊಲೀಸರು ಕೂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆಯನ್ನು ಮಾಡಿಕೊಂಡಿದ್ದಾರೆ. ನ್ಯೂ ಇಯರ್ ಸೆಲೆಬ್ರೇಷನ್ ಅಂದ್ರೆ ಪಾರ್ಟಿ ಜೋರಾಗಿರುತ್ತೆ. ಮದ್ಯದ ಗಮ್ಮತ್ತಲ್ಲೇ ಜನ ತೇಲುತ್ತಾ ಇರ್ತಾರೆ. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ.
ಎಲ್ಲರನ್ನು ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ. ತುಂಬಾ ಅವರಿಗೆ ನಡೆಯೋದಕ್ಕೆ ಆಗ್ತಿಲ್ಲ, ಅವರಿಗೆ ಪ್ರಜ್ಞೆನೇ ಇರುವುದಿಲ್ಲ, ಎಂಜಾಯ್ಮೆಂಟ್ ಮಾಡುವಾಗ ಹತೋಟಿ ಕಳೆದುಕೊಂಡಿರುತ್ತಾರೆ. ಅಂತಹವಿರಿಗೆ ವಿಶ್ರಾಂತಿ ಸ್ಥಳಕ್ಕ ಬಿಡುತ್ತಾರೆ.
15 ಕಡೆ ಆ ರೀತಿಯ ಸ್ಥಳವನ್ನ ಮಾಡಿದ್ದಾರೆ. ಅವರನ್ನ ಎಚ್ಚರವಾಗುವ ತನಕ ಇಟ್ಟುಕೊಂಡು, ಆಮೇಲೆ ಅವರ ಮನೆ ವಿಳಾಸ ತಗೊಂಡು ಮನೆಗೆ ಕಳುಹಿಸಿಕೊಡುವ ಕೆಲಸ ಮಾಡುತ್ತೇವೆ. ವಿಶೇಷವಾಗಿ ಹೆಣ್ಣು ಮಕ್ಕಳು, ಆ ಸಂದರ್ಭದಲ್ಲಿ ಯಾವ್ಯಾವ ಪರಿಸ್ಥಿತಿಯಲ್ಲಿರ್ತಾರೆ ಅನ್ನೋದು ಹೇಳುವುದಕ್ಕೆ ಬರಲ್ಲ. ಪ್ರಜ್ಞೆ ಇಲ್ಲದೆ ಇದ್ದಾಗ ಅವರಿಗೆ ಯಾರು ಏನು ಬೇಕಾದರೂ ಮಾಡಬಹುದು. ಆ ಕಾರಣಕ್ಕೆ ನಾವೂ ಈಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇದು ದುರುಪಯೋಗ ಆಗಬಾರದು. 30 ಜಿಲ್ಲೆಗಳಲ್ಲೂ ಕಟ್ಟುನಿಟ್ಟಿನ ಭದ್ರತೆಯನ್ನ ಒದಗಿಸಿದ್ದೀವಿ. ವಿಶೇಷವಾಗಿ ಬೆಂಗಳೂರಿಗೆ ಪ್ರತಿ ವರ್ಷ ಹೊರಗಿನಿಂದ ಬರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















