ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ನಾಳೆಯಿಂದ ರಾಜ್ಯದಲ್ಲಿ ದಸರಾ ಸಂಭ್ರಮ ಮನೆ ಮಾಡುತ್ತಿದೆ. ಈ ಶುಭ ದಿನಕ್ಕೆ ಜನ ಸಾಮಾನ್ಯರಿಗೂ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅದು ದಿನ ಬಳಕೆಯ ವಸ್ತುಗಳ ಮೇಲೆ ದರ ಇಳಿಕೆಯಗಿರುವುದು. ಕೇಂದ್ರ ಸರ್ಕಾರ ಜಿಎಸ್ಟಿ ದರ ಕಡಿಮೆ ಮಾಡಿದ ಹಿನ್ನೆಲೆ ನಾಳೆಯಿಂದ ಹೊಸ ದರ ಅನ್ವಯವಾಗಲಿದೆ. ಹಾಗಾದ್ರೆ ಯಾವೆಲ್ಲಾ ವಸ್ತುಗಳ ಮೇಲೆ ದರ ಇಳಿಕೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ಸಾಕಷ್ಟು ಜನರಿಗೆ ಬೇಕಿರುವ ದಿನನಿತ್ಯದ ಮೆಡಿಸಿನ್ ಮೇಲೆ ದರ ಇಳಿಕೆಯಾಗುತ್ತಿದೆ. ವಿಕ್ಸ್ ಆಕ್ಷನ್ 500, ಟೂತ್ ಬ್ರೆಷ್, ದೇಹಕ್ಕೆ ಬಳಸುವ ಸೋಪ್ ಗಳು ಲೈಫ್ ಬಾಯ್, ಲಕ್ಸ್ ಈ ರೀತಿಯ ಸೋಪ್ ಗಳ ಬೆಲೆಯೂ ಕಡಿಮೆಯಾಗಲಿದೆ. ಕೆಚಪ್ ಗಳು, ಬ್ಯೂಟಿ ಪ್ರಾಡಕ್ಟ್, ಹಾರ್ಲಿಕ್ಸ್, ಬೂಸ್ಟ್ , ಬೋರೋಪ್ಲಸ್ ಆಯಿಲ್, ನವರತ್ನ ಆಯಿಲ್, ಡವ್, ಕ್ಲಿನಿಕ್ ಪ್ಲಸ್, ಸನ್ ಸಿಲ್ಕ್ ಸೇರಿದಂತೆ ಹಲವು ಬಗೆಯ ಶಾಂಪೂಗಳ ಬೆಲೆಯೂ ಇಳಿಕೆಯಾಗುತ್ತಿದೆ.
ಸರಿ ಸುಮಾರು 400 ವಸ್ತುಗಳ ಮೇಲಿನ ಜಿಎಸ್ಟಿ ದರಗಳನ್ನು ಕಡಿಮೆ ಮಾಡಲಾಗಿದೆ. ಈಗ ಅವುಗಳ ಬೆಲೆ ಮಾರ್ಪಾಡಿಗಾಗಿ ಸರ್ಕಾರ ಸಮಗ್ರ ತಂತ್ರಗಳನ್ನು ರೂಪಿಸಿದೆ. ಹೊಸ ಜಿಎಸ್ಟಿ ರಚನೆ ಜಾರಿಗೆ ಬಂದ ನಂತರ ಪರೋಕ್ಷ ತೆರಿಗೆ ಅಧಿಕಾರಿಗಳು ಸರಕು ಮತ್ತು ಸೇವೆಗಳ ಪ್ರಸ್ತುತ ಬೆಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಅವುಗಳನ್ನು ದರಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸೆಪ್ಟೆಂಬರ್ 3 ರಂದು ಪ್ರಮುಖ ಜಿಎಸ್ಟಿ ದರ ಕಡಿತ ಮತ್ತು ಸ್ಲ್ಯಾಬ್ ಬದಲಾವಣೆಗಳನ್ನು ಘೋಷಣೆ ಮಾಡಿದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್