Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಂಧಾನ ವಿಫಲ : ದಾವಣಗೆರೆಯಲ್ಲಿ ತ್ರಿಕೋನ ಸ್ಪರ್ಧೆ

---Advertisement---

ದಾವಣಗೆರೆ : ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆಯ ಅಬ್ಬರದ ಪ್ರಚಾರ ನಡೆಯುತ್ತಿದೆ. ಆದರೆ ಬಂಡಾಯದ ಬಿಸಿಯೂ ಕಾಂಗ್ರೆಸ್ ಗೆ ತಟ್ಟಿದೆ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಕ್ಷೇತ್ರವಾದ್ದರಿಂದ, ಉಪಚುನಾವಣೆಗೆ ಅವರ ಕುಟುಂಬಸ್ಥರಿಗೇನೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದು ಅಲ್ಪಸಂಖ್ಯಾತರಿಗೆ ಬೇಸರ ಮೂಡಿಸಿದೆ. ಅಲ್ಪಸಂಖ್ಯಾತರಿಗೇನೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿದ ಸಚಿವ ಜಮೀರ್ ಅಹ್ಮದ್ ಅವರೇ ಹೈಕಮಾಂಡ್ ಮಾತಿಗೆ ತಲೆ ಬಾಗಿ ಸುಮ್ಮನೆ ಆಗಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಸಾಧಿಕ್ ಪೈಲ್ವಾನ್ ಯಾವ ಮಾತುಗಳು ಸಮಾಧಾನ ತರಿಸಿಲ್ಲ.

ಯಾವುದೇ ಕಾರಣಕ್ಕೂ ನಾಮಪತ್ರ ವಾಪಾಸ್ ತೆಗೆದುಕೊಳ್ಳಲ್ಲ ಎಂದಿದ್ದಾರೆ. ನಾಮಪತ್ರ ವಾಪಾಸ್ ಪೇಯಲು ಇಂದು ಮಧ್ಯಾಹ್ನ 3 ಗಂಟೆಯವರೆಗೂ ಸಮಯಾವಕಾಶ ಇತ್ತು. ಹೀಗಾಗಿ ಸಾದಿಕ್ ಪೈಲ್ವಾನ್ ಅವರ ಮನವೊಲಿಸಲು ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಕೊನೆಯ ಕ್ಷಣದವರೆಗೂ ಕಸರತ್ತು ನಡೆಸಿದರು. ನಾಯಕರ ಸಂಧಾನಕ್ಕೆ ಮಣಿಯದ ಸಾದಿಕ್ ಪೈಲ್ವಾನ್ ಸ್ಪರ್ಧಾಕಣದಲ್ಲಿ ಮುಂದುವರೆಯುವ ನಿರ್ಧಾರಕ್ಕರ ಅಂಟಿಕೊಂಡಿದ್ದಾರೆ.

ಇದರಿಂದ ಅಲ್ಪಸಂಖ್ಯಾತ ಮುಖಂಡರ ಮನವೊಲಿಸುವಂತೆ ಹೈಕಮಾಂಡ್ ಸೂಚನೆ ನೀಡಿದ್ದರೂ, ಸದ್ಯಕ್ಕೆ ಆ ಪ್ರಯತ್ನ ವಿಫಲವಾದಂತಾಗಿದೆ. ಸಾದಿಕ್ ಅವರು ಪಕ್ಷಕ್ಕಾಗಿ ಸಾಕಷ್ಟು ವರ್ಷ ದುಡಿದಿದ್ದಾರೆ. ಟಿಕೆಟ್ ಸಿಗದೆ ಇರುವ ಕಾರಣ ಸ್ವಲ್ಪ ಬೇಸರಗೊಂಡಿದ್ದಾರೆ. ನಾವೂ ಅವರ ಜೊತೆಗೆ ಮತ್ತೊಮ್ಮೆ ಮಾತನ್ನಾಡುತ್ತೇವೆ. ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಶಾಸಕ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಮೊದಲೇ ಬಿಜೆಪಿ ನಾಯಕರು ಕೂಡ ಗೆದ್ದೆ ಗೆಲ್ಲಬೇಕೆಂದು ಸಾಕಷ್ಟು ಪ್ರಯತ್ನ ಮಾಡ್ತಾ ಇದ್ದಾರೆ. ಹೀಗಿರುವಾಗ ಕಾಂಗ್ರೆಸ್ ನಲ್ಲಿ ವೋಟ್ ಗಳು ಡಿವೈಡ್ ಆಗುವ ಸಾಧ್ಯತೆ ಇರುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...