Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೋದಿಯವರ ಭಗೀರಥ ಪ್ರಯತ್ನದಿಂದ ನವೀನ್ ಮೃತದೇಹ ತಂದಿದ್ದು : ಸಿಎಂ ಬೊಮ್ಮಾಯಿ

Facebook
Twitter
Telegram
WhatsApp

ದಾವಣಗೆರೆ: ಉಕ್ರೇನ್ ನಲ್ಲಿ ದಾಳಿಗೆ ಬಲಿಯಾದ ನವೀನ್ ಅವರ ಮೃತದೇಹವನ್ನ ಇಂದು ತವರಿಗೆ ತರಲಾಗಿದೆ. ಕುಟುಂಬಸ್ಥರು ಪೂಜಾ ವಿಧಿವಿಧಾನ‌ಮುಗಿಸಿ, ಮೆರವಣಿಗೆ ನಡೆಸಿ ಬಳಿಕ ದೇಹವನ್ನ ಮೆಡಿಕಲ್ ಕಾಲೇಜಿಗೆ ದಾನ ಮಾಡಲಿದ್ದಾರೆ.

ಈ ಸಂಬಂಧ ಜಿಲ್ಲೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಪ್ರಧಾನಿ ಮೋದಿ ವರ್ಚ್ಚಸ್ಸಿಗೆ ಇದು ಉದಾಹರಣೆಯಾಗಿದೆ. ಅಮೆರಿಕಾ‌ ಕೂಡ ತನ್ನ ನಾಗರಿಕರನ್ನ ಕೈ ಬಿಟ್ಟಿದೆ. ಆದರೆ ಭಾರತ ಮಾತ್ರ ತನ್ನ ನಾಗರಿಕರನ್ನ ಕೈ ಬಿಟ್ಟಿಲ್ಲ. ನಮ್ಮ ದುರ್ದೈವ ಯುದ್ಧದಲ್ಲಿ ನವೀನ್ ಮೃತಪಟ್ಟಿದ್ದಾರೆ. ನವೀನ್ ಮೃತದೇಹ ಚಳಗೇರಿಗೆ ತರಲಾಗಿದೆ. ಮೋದಿಯವರ ಭಗೀರಥ ಪ್ರಯತ್ನದಿಂದ ಇದು ಸಾಧ್ಯವಾಗಿದೆ.

ಯಾಕಂದ್ರೆ ಅಲ್ಲಿನ ದೇಶದ ಸಹಕಾರ ಪಡೆಯುವುದು ಅಷ್ಟು ಸುಲಭವಲ್ಲ. ಭಾರತ ಧ್ವಜ ಹಿಡಿದರೆ ಸಾಕು ಬಿಟ್ಟು ಕಳುಹಿಸಿದ್ದಾರೆ. ಮೃತದೇಹ ತರಲು ವಿದೇಶಾಂಗ ಸಚಿವರ ಸಹಕಾರವಿದೆ. ಘಟಬೆ ಬಳಿಕ‌ ನವೀನ್ ಮೃತದೇಹವನ್ನ ಸಂರಕ್ಷಿಸಲಾಗಿತ್ತು.

ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಉಕ್ರೇನ್ ವಿದ್ಯಾರ್ಥಿಗಳ ಬಗ್ಗೆ ಮೆಡಿಕಲ್ ಕೌನ್ಸಲ್ ಮಾಡುವ ಚಿಂತನೆ ನಡೆದಿದೆ. ಅಲ್ಲಿ ಕೋರ್ಸ್ ಮುಗಿದರು ಇಲ್ಲಿ ಮತ್ತೆ ಪರೀಕ್ಷೆ ನಡೆಯಬೇಕು. ಎಲ್ಲಾ ರಾಜ್ಯಗಳಲ್ಲೂ ಉಕ್ರೇನ್ ನಿಂದ ಬಂದವರಿದ್ದಾರೆ. ಹೀಗಾಗಿ ಅವರ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ಸುರಿಯುತ್ತಿರುವ ಮಳೆ : ತಂಪಾದ ಇಳೆ

  ಸುದ್ದಿಒನ್, ಚಿತ್ರದುರ್ಗ, ಮೇ.10 : ಮಳೆಗಾಗಿ ಕಾದಿದ್ದ ಕೋಟೆ ನಾಡಿನ ಜನತೆಗೆ ಮಳೆರಾಯ ಕೃಪೆ ತೋರಿದ್ದಾನೆ. ಬುಧವಾರ ಸ್ವಲ್ಪ ಮಳೆ ಬಂದಿತ್ತು. ಆದರೆ ಇಂದು (ಶುಕ್ರವಾರ) ರಾತ್ರಿ 10 ಗಂಟೆ ಸುಮಾರಿಗೆ ಮಳೆ

ಹಿರಿಯೂರಿನಲ್ಲಿ ವಕೀಲ ದೇವರಾಜೆಗೌಡ ಬಂಧನ …!

  ಸುದ್ದಿಒನ್, ಹಿರಿಯೂರು, ಮೇ. 10  : ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ  ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಅವರನ್ನು ಹಿರಿಯೂರು ಗ್ರಾಮಾಂತರ ಪೋಲಿಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಹೊಳೆನರಸೀಪುರದಲ್ಲಿ

ಚಳ್ಳಕೆರೆ | ಬೆಳಗೆರೆ ಬಿ. ಸೀತಾರಾಮ ಶಾಸ್ತ್ರಿ ಪ್ರೌಢಶಾಲೆಗೆ SSLC ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

  ಸುದ್ದಿಒನ್, ಚಳ್ಳಕೆರೆ, ಮೇ.10 : 2024 ನೇ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟವಾಗಿದ್ದು, ತಾಲ್ಲೂಕಿನ ಬೆಳಗೆರೆ ಬಿ. ಸೀತಾರಾಮ ಶಾಸ್ತ್ರಿ ಪ್ರೌಢ ಶಾಲೆಗೆ  ಶೇಕಡ 78.4.0 ರಷ್ಟು ಫಲಿತಾಂಶ

error: Content is protected !!