Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಶ್ವಿನಿ ಗೌಡ ಗೆಲ್ಲಿಸಲು 25 ಲಕ್ಷ ಕೊಟ್ರಾ ನಾರಾಯಣ ಗೌಡ್ರು..?

---Advertisement---

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಗಿಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ, ಜನರ ಬೆಂಬಲವೂ ಇದೆ. ಇದರ ನಡುವೆ ಅಶ್ವಿನಿ ಗೌಡ ಅವರ ಹೆಸರು ಕೂಡ ಓಡಾಡ್ತಾ ಇದೆ. ಅಶ್ವಿನಿ ಗೌಡ ಅವರನ್ನೆ ಗೆಲ್ಲಿಸೋದು ಎಂಬ ವಿಚಾರ ಓಡಾಡ್ತಾ ಇದೆ. ಇದರ ನಡುವೆ ಕರವೇ ಅಧ್ಯಕ್ಷ ನಾರಾಯಣ ಗೌಡ್ರು ಹಾಗೂ ಸುದೀಪ್ ಭೇಟಿ ಮಾಡಿದ ಫೋಟೋಗಳು ವೈರಲ್ ಆಗ್ತಾ ಇದೆ. ಅಶ್ವಿನಿ ಗೌಡ ಗೆಲ್ಲಿಸಲು ಡೀಲ್ ನಡೀತಾ ಇದೆ ಎಂಬೆಲ್ಲಾ ಚರ್ಚೆಗಳು ನಡೆಯುತ್ತಾ ಇದೆ. ಈ ಸಂಬಂಧ ನಾರಾಯಣ ಗೌಡ್ರು ಯಾಕ್ ಹೋಗಿದ್ದರು ಎಂಬ ಬಗ್ಗೆ ಕರವೇ ಸದಸ್ಯರು ಪ್ರತಿಕ್ರಿಯೆ ನೀಡಿದ್ದಾರೆ.

ಕರವೇ ಅಧ್ಯಕ್ಷರಾದ ನಾರಾಯಣ ಗೌಡ್ರು ತಮ್ಮ ಮಗನ ಮದುವೆ ಕಾರ್ಡ್ ಕೊಡುವುದಕ್ಕೆಂದು ಸುದೀಪ್ ಅವರ ಮನೆಗೆ ಹೋಗಿದ್ದರು. ಆದರೆ ಗಿಲ್ಲಿ ಫ್ಯಾನ್ಸ್ ಈ ರೀತಿ ತಿರುಗಿಸಿದ್ದಾರೆ. ಇರಲಿ ನಾವೂ ಇದಕ್ಕೆಲ್ಲಾ ಜಗ್ಗಲ್ಲ. ಕರವೇ ಕಾರ್ಯಕರ್ತರೆಲ್ಲಾ ಅಶ್ವಿನಿ ಗೌಡ ಅವರಿಗೆ ವೋಟ್ ಮಾಡುತ್ತೇವೆ. ಅಶ್ವಿನಿ ಗೌಡ ಅವರೇ ಬಿಗ್ ಬಾಸ್ ಟ್ರೋಫಿಯನ್ನ ಗೆಲ್ಲೋದು ಎಂದಿದ್ದಾರೆ.

ನಾರಾಯಣ ಗೌಡ್ರು ಹಾಗೂ ಸುದೀಪ್ ಅವರು ಕೂತಿರುವ ಫೋಟೋ ವೈರಲ್ ಆಗಿದೆ. ಆ ಫೋಟೋವನ್ನ ಸೂಕ್ಷ್ಮವಾಗಿ ಗಮನಿಸಿದಾಗ ಸುದೀಪ್ ಅವರ ಕೈಲಿ ಪತ್ರಿಕೆ ಒಂದು ಇದೆ. ಅದು ಮದುವೆಯ ಆಮಂತ್ರಣ ಪತ್ರಿಕೆಯೇ ಆಗಿದೆ. ಅದು ನಾರಾಯಣ ಗೌಡ್ರ ಮಗನ ವಿವಾಹ ಪತ್ರಿಕೆಯಾಗಿದೆ. ಇನ್ನು ಕೆಲವೇ ದಿನಗಳು ಫಿನಾಲೆಗೆ ಬಾಕಿ ಇರುವಾಗ ಈ ರೀತಿ ಸುಳ್ಳು ಸುದ್ದಿ ಹಬ್ಬಿದ್ದು ಮಾತ್ರ ವಿಪರ್ಯಾಸ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...