Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾಶಿಯಿಂದ ಬಂದ ನಾಗಸಾಧುಗಳಿಂದ ಡಿಕೆಶಿಗೆ ಆಶೀರ್ವಾದ : ಸಿಎಂ ಆಗಲೆಂದು ಹಾರೈಕೆ

---Advertisement---

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಸಿಎಂ ಖುರ್ಚಿ ಕದನ ಅದ್ಯಾವಾಗ ಅಂತ್ಯವಾಗುತ್ತೋ ಗೊತ್ತಿಲ್ಲ. ಆದ್ರೆ ಪ್ರತಿದಿನ ಒಂದೊಂದು ಬೆಳವಣಿಗೆ ನಡೆಯುತ್ತಲೆ ಇದೆ. ಡಿಕೆ ಶಿವಕುಮಾರ್ ಅವರು ಕೂಡ ಸಿಎಂ ಆಗುವುದಕ್ಕೆ ಇರುವ ಪ್ರಯತ್ನಗಳೆಲ್ಲವನ್ನು ಮಾಡುತ್ತಾ ಇದ್ದಾರೆ. ಇದರ ನಡುವೆ ಅವರಿಗೆ ನಾಗಸಾಧುಗಳ ಬೆಂಬಲ ಸಿಕ್ಕಿದೆ. ಅವರಿಂದ ಸಿಎಂ ಆಗಬೇಕೆಂಬ ಆಸೆಗೆ ಆಶೀರ್ವಾದವೂ ಸಿಕ್ಕಿದೆ.

ಇಂದು ಡಿಕೆ ಶಿವಕುಮಾರ್ ಅವರ ಸದಾಶಿವನಗರದ ಮನೆಗೆ ಬಂದ ನಾಗಸಾಧುಗಳು ಆಶೀರ್ವಾದ ಮಾಡಿದ್ದಾರೆ. ಡಿಕೆಶಿ ಅವರ ಇಷ್ಟಾರ್ಥ ಸಿದ್ಧಿಗೆ ಶುಭಕೋರಿದ್ದಾರೆ. ಅವರ ತೆಲೆ ಮೇಲೆ ಕೈ ಇಟ್ಟು, ನೀನು ಸಿಎಂ ಆಗ್ತೀಯಾ ಎಂಬ ಮಾತನ್ನ ಹೇಳಿದ್ದಾರೆ. ಇವರೆಲ್ಲ ಕಾಶಿಯಿಂದ ಬಂದಂತ ಸಾಧುಗಳಾಗಿದ್ದಾರೆ. ಬಳಿಕ ಮಾಧ್ಯಮದವರೊಂದಿಗೂ ಮಾತನಾಡಿದ್ದು, ಶಿವಕುಮಾರ್ ಸಿಎಂ ಆಗಲೆಂದೇ ಆಶೀರ್ವಾದ ಮಾಡಿದ್ದೇವೆ. ಅವರು ಸಿಎಂ ಆಗ್ತಾರೆ ಎಂಬ ಮಾತನ್ನ ಹೇಳಿದ್ದಾರೆ.

ನಾಗಸಾಧುಗಳಿಗೆ ಸ್ಪೆಷಲ್ ಪವರ್ ಇದೆ ಎಂದೇ ಎಲ್ಲರೂ ನಂಬುತ್ತಾರೆ. ಯಾಕಂದ್ರೆ ಅವರುಗಳು ಎಲ್ಲೆಂದರಲ್ಲಿ ಕಾಣಿಸುವುದಿಲ್ಲ. ಮಹಾಕುಂಭಮೇಳ, ಕುಂಭಮೇಳದ ಸಮಯದಲ್ಲಿ ಜನರಿಗೆ ಕಾಣಿಸಬಹುದು. ಆದರೆ ಮಾಮೂಲಿ ಸಮಯದಲ್ಲಿ ಅವರು ಯಾರಿಗೂ ಕಾಣಿಸುವುದಿಲ್ಲ. ಚಿತ್ರ ವಿಚಿತ್ರವಾಗಿ ಬದುಕುತ್ತಾರೆ. ನಾಗಸಾಧುಗಳ ಆಶೀರ್ವಾದ ಸಿಕ್ಕರೆ ಸಾಕು ಎಂಬ ಭಾವದಲ್ಲಿ ಸಾಮಾನ್ಯ ಜನರು ಇರುತ್ತಾರೆ. ಈಗ ನೋಡಿದ್ರೆ ಅಂಥಹ ಶಕ್ತಿ ಇರುವ ನಾಗಸಾಧುಗಳು ಈಗ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗುತ್ತೀರಾ ಎಂಬ ಆಶೀರ್ವಾದ ಸಿಕ್ಕಿದೆ. ತುದಿಗಾಲಲ್ಲಿ ನಿಂತು ಸಿಎಂ ಖುರ್ಚಿಗಾಗಿ ಕಾಯುತ್ತಿರುವ ಡಿಕೆಶಿ ಅವರಿಗೆ ನಾಗಸಾಧುಗಳ ಆಶೀರ್ವಾದ ಮನಸ್ಸಿಗೆ ಇನ್ನಷ್ಟು ತೃಪ್ತಿ ತಂದಿರುವ ಸಾಧ್ಯತೆ ಹೆಚ್ಚಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now