ಸುದ್ದಿಒನ್, ಮೈಸೂರು, ಮೇ.07 : ದಿವಂಗತ ರಾಕೇಶ್ ಸಿದ್ದರಾಮಯ್ಯನವರ ಸ್ಮರಣಾರ್ಥವಾಗಿ ಸಮತಾ ಟ್ರಸ್ಟ್ ವತಿಯಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ದೇಣಿಗೆಯಾಗಿ ನೀಡಲಾದ ಸುಸಜ್ಜಿತ ಅಂಬುಲೆನ್ಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಚಾಲನೆ ನೀಡಿದರು.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬುಲೆನ್ಸ್‌ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಸಾರ್ವಜನಿಕರ ಆರೋಗ್ಯ ಸೇವೆಗೆ ಈ ವಾಹನಗಳು ಸಹಕಾರಿಯಾಗಲಿ ಎಂದು ಆಶಿಸಿದರು.
ರಾಕೇಶ್ ಸಿದ್ದರಾಮಯ್ಯ ಅವರ ನೆನಪಿನಲ್ಲಿ ಸಾಮಾಜಿಕ ಸೇವೆ ಮುಂದುವರಿಸುತ್ತಿರುವ ಸಮತಾ ಟ್ರಸ್ಟ್, ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಬಲಪಡಿಸಲು ಈ ಕ್ರಮ ಕೈಗೊಂಡಿದೆ. ಈ ಅಂಬುಲೆನ್ಸ್‌ಗಳು ಇನ್ನು ಮುಂದೆ ರಾಜ್ಯ ಆರೋಗ್ಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ತುರ್ತು ಸಮಯದಲ್ಲಿ ನೆರವಾಗಲಿವೆ.

ಇಂದು ಮೈಸೂರಿನಲ್ಲಿ ರಾಕೇಶ್ ಸಿದ್ದರಾಮಯ್ಯನವರ ಸ್ಮರಣಾರ್ಥ ಸಮತಾ ಟ್ರಸ್ಟ್ ವತಿಯಿಂದ ಆರೋಗ್ಯ ಇಲಾಖೆಗೆ ನೀಡಲಾದ ಅಂಬುಲೆನ್ಸ್‌ಗಳಿಗೆ ಚಾಲನೆ ನೀಡಿದೆ. pic.twitter.com/4ytFUQsFp5
— Siddaramaiah (@siddaramaiah) May 7, 2026










