ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 13 : ‘ಮುಂದಿನ ವಾರ ಅಮಾವಾಸ್ಯೆ, ದೇವಸ್ಥಾನಕ್ಕೆ ಜಾಸ್ತಿ ಜನ ಬರ್ತಾರೆ. ಆವಾಗ ಬಂದ್ರೆ ನಿನಗೂ ಸಹಾಯ ಆಗುತ್ತೆ..ಈ ವಾರ ಇಲ್ಲೇ ಇರ್ತಿನಿ..’ ಇದು ಮಿಥುನ್ (23) ತನ್ನ ತಾಯಿ ಜತೆ ಮಾತನಾಡಿದ ಕೊನೆ ಮಾತು.
ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ 8 ರಿಂದ 8.30 ಸುಮಾರಿಗೆ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿರುವಾಗ ಮೈಸೂರು ಹಾಸನ ಹೆದ್ದಾರಿಯಲ್ಲಿ ಹಾಸನದ ಕಡೆಯಿಂದ ಬಂದ ಲಾರಿಯು ಡಿಕ್ಕಿ ಹೊಡೆದ ಪರಿಣಾಮ 9 ಜನ ಮೃತಪಟ್ಟಿದ್ದಾರೆ.ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಗವಿರಂಗನಾಥ ಪುರದ ಗ್ರಾಮದ ವಿಜಯ ನಾಗರಾಜು, ಕುಸುಮಾ ದಂಪತಿ ಪುತ್ರ ಮಿಥುನ್.

ಇಬ್ಬರು ಸಹೋದರಿಯ ಜತೆ ಬೆಳೆದಿದ್ದ ಮಿಥುನ್ ಬಾಲ್ಯದಿಂದಲೇ ಓದಿನಲ್ಲಿ ಎಲ್ಲರ ಗಮನ ಸೆಳೆದಿದ್ದ. ಸರ್ಕಾರಿ ಶಾಲೆಯಲ್ಲಿ ಓದಿದ್ದ. ಬಳಿಕ ಹಾಸನದ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಿದ್ದ. ಇದೀಗ ಕೊನೆ ಸೆಮಿಸ್ಟರ್ ನಲ್ಲಿದ್ದ ಮಿಥುನ್ ತನ್ನ ಜನ್ಮ ದಿನದಂದೇ ಉಸಿರು ನಿಲ್ಲಿಸಿದ್ದಾನೆ.
ನಿತ್ಯ ಒಮ್ಮೆ ಮಾತ್ರ ಮನೆಗೆ ಕರೆ ಮಾಡಿ ಮಾತನಾಡುತ್ತಿದ್ದ ಮಿಥುನ್ ಜನ್ಮ ದಿನ ಎಂದು ಶುಕ್ರವಾರ ಎರಡು ಬಾರಿ ಕರೆ ಮಾಡಿ ಕುಟುಂಬಸ್ಥರ ಜತೆ ಮಾತನಾಡಿದ್ದ. ಶನಿವಾರ ಬಾ ಎಂದು ಊರಿಗೆ ಕರೆದ ತಾಯಿಗೆ ಅಮ್ಮ ಮುಂದಿನ ವಾರ ಬರ್ತಿನಿ ಎಂದು ಹೇಳಿದ್ದ ಎನ್ನುತ್ತಾ ಕಣ್ಣೀರಾದರು ಕುಟುಂಬಸ್ಥರು.
ಮಗ ಲ್ಯಾಪ್ ಟಾಪ್ ಹೇಳಿದ್ದ ಕೊಡಿಸುವ ಸಿದ್ಧತೆಯಲ್ಲಿದ್ದ ತಂದೆ ಮಗನ ಸಾವಿನ ಸುದ್ದಿಯಿಂದ ‘ಇಬ್ಬರು ಪುತ್ರಿಯರ ಬಳಿಕ ದೇವರಿಗೆ ಹರಕೆ ಹೊತ್ತ ಬಳಿಕ ಆ ದೇವರು ನೀಡಿದ ಫಲ ನನ್ನ ಮಗ. ಆದ್ರೆ ತಾನು ನೀಡಿದ ಫಲವನ್ನು ಜನ್ಮದಿನದಂದೇ ಅದು ಗಣಪತಿ ಮುಂದೆಯೇ ಕಿತ್ತು ಕೊಂಡಿದ್ದಾನೆ. ಏನೂ ಹೇಳ ಬೇಕು..’ ಎಂದು ಗೋಳಾಡಿದರು ಗವಿರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಥುನ್ ತಂದೆ ವಿಜಯ ನಾಗರಾಜು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















