Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಠಗಳು ನೆಮ್ಮದಿ ನೀಡುವ ಪುಣ್ಯಸ್ಥಳ : ಶ್ರೀ ವೀರಭದ್ರ ಮಹಾಸ್ವಾಮಿಗಳು

---Advertisement---

ಸುದ್ದಿಒನ್, ಚಿತ್ರದುರ್ಗ ಮಾ. 23 : ಮಠಗಳಿಗೆ ಮನುಷ್ಯನ ಭಾವನೆ, ಭಕ್ತಿ ಹಾಗೂ ಮನಸ್ಸನ್ನು ಜಾಗೃತಗೊಳಿಸುವ ಶಕ್ತಿಯಿದೆ ಮನುಷ್ಯನ ಒತ್ತಡಗಳನ್ನು ಸಡಿಲಿಸುವ ಜೊತೆಗೆ ನೆಮ್ಮದಿ ಬಾಳಿಗೆ ಭದ್ರ ಬುನಾದಿ ಕರುಣಿಸುವ ಪುಣ್ಯಸ್ಥಳ ಮಠಗಳಾಗಿವೆ ಎಂದು ಬೀದರ್ ಜಿಲ್ಲೆಯ ಎಣುಕಲ್ಲುಗುಡ್ಡದ ಶ್ರೀ ವೀರಭದ್ರ ಮಹಾಸ್ವಾಮಿಗಳು ತಿಳಿಸಿದರು.

ಶ್ರೀಮದ್ ಉಜ್ಜಯನೀ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಲಿಂ|| ಮರುಳಾರಾಧ್ಯ ಶಿವಾಚಾರ್ಯ ಮಹಾಭಗವತ್ಪಾದರ 31 ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ನಗರದ ರಂಗಯ್ಯನ ಬಾಗಿಲ ಬಳಿಯಲ್ಲಿನ ಶ್ರೀ ಉಜ್ಜಯಿನಿ ಮಠದಲ್ಲಿ ಸೋಮವಾರ ನಡೆದ ಜನ ಜಾಗೃತಿ ಮತ್ತು ಧರ್ಮಸಭಾ ಕಾರ್ಯಕ್ರಮದ ದಿವ್ಯ ಸಾನೀಧ್ಯವಹಿಸಿ ಮಾತನಾಡಿದ ಶ್ರೀಗಳು  ಮಕ್ಕಳಿಗೆ ಬಾಲ್ಯದಿಂದಲೇ ಸನ್ನಡತೆ, ಭಾರತೀಯ ಉಡುಗೆ ಮತ್ತು ಇತಿಹಾಸದ ಸತ್ಯಾಂಶವನ್ನು ತಿಳಿಸಬೇಕು. ಪಾಲಕರು ತಮ್ಮ ಮಕ್ಕಳನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಹಾಗೂ ಕೆಲಸಕ್ಕೆ ಕಳುಹಿಸಿ, ದೇಶದ ಸಂಪತ್ತನ್ನು ವಿದೇಶಕ್ಕೆ ವ್ಯಯಿ ಸುತ್ತಿದ್ದಿರಿ. ಕೂಡಲೇ ಈ ನಿರ್ಧಾರದಿಂದ ಹೊರ ಬಂದು ಮಕ್ಕಳ ಉತ್ತಮ ಭವಿಷ್ಯಕ್ಕೆ ಸ್ವದೇಶದಲ್ಲೇ ಸಂಪತ್ತನ್ನು ವ್ಯಯಿಸಬೇಕು ಪ್ರಸ್ತುತ ಹಿಂದೂ ಸಮಾಜ ಜಾತಿ ಎಂಬ ವಿಷಬೀಜದಿಂದ ಹೊರಬಂದು, ಸನಾತನ ಧರ್ಮವನ್ನು ಪಾಲಿಸಬೇಕು ಮಠಗಳಿಗೆ ಮನುಷ್ಯನ ಭಾವನೆ, ಭಕ್ತಿ ಹಾಗೂ ಮನಸ್ಸನ್ನು ಜಾಗೃತಗೊಳಿಸುವ ಶಕ್ತಿಯಿದೆ ಮನುಷ್ಯನ ಒತ್ತಡಗಳನ್ನು ಸಡಿಲಿಸುವ ಜೊತೆಗೆ ನೆಮ್ಮದಿ ಬಾಳಿಗೆ ಭದ್ರ ಬುನಾದಿ ಕರುಣಿಸುವ ಪುಣ್ಯಸ್ಥಳ ಮಠಗಳಾಗಿವೆ ಎಂದು ತಿಳಿಸಿದರು.

ಲಕ್ಷೇಶ್ವರದ ಕರೇವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಕ್ಕಳಲ್ಲಿ ಅಧ್ಯಾತ್ಮ ಹಾಗೂ ಸಂಸ್ಕಾರವನ್ನು ಬೆಳೆಸಲು ಸತ್ಸಂಗವನ್ನು ಒದಗಿಸಬೇಕಿದೆ. ಶರಣರು, ಸಂತರು ನಿರ್ಮಿಸಿದ ಮಠಗಳು ಜನರಿಗೆ ಮಾರ್ಗದರ್ಶನ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ  ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುತ್ತಿದೆ. ಇಡೀ ವಿಶ್ವದಲ್ಲಿ ಅಲ ಕಲ್ಲೋಲ ಉಂಟಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಭಾರತ ಮತ್ತು ರಾಜ್ಯದ ಜನತೆ ಶಾಂತಿ ಮತ್ತು ನೆಮ್ಮದಿಯಾಗಿ ಬದುಕುತ್ತಿದ್ದಾರೆಂದರೆ ಅದಕ್ಕೆ ರಾಜ್ಯದ ಸಂತರು ಕಾರಣ. ಮಕ್ಕಳನ್ನು ಕೇವಲ ಐಟಿಬಿಟಿ ಉದ್ಯೋಗಕ್ಕೆ ಸೀಮಿತಗೊಳಿಸದೆ ಅವರಲ್ಲಿ ರೈತ ಮತ್ತು ಸೈನಿಕರಾಗುವ ಆಸಕ್ತಿ ಬೆಳೆಸಬೇಕು ಎಂದರು.

ಉಕ್ಕಡಗಾತ್ರಿಯ ಶ್ರೀ ಹಾಲಶಂಕರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಎಳೆವಯಸ್ಸಿನಿಂದಲೇ ಸಂಸ್ಕಾರ, ಸಂಸ್ಕೃತಿ, ಪರಂಪರೆ ಹಾಗೂ ರಾಷ್ಟ್ರದ ಹಿನ್ನೆಲೆ ಪರಿಚಯಸಬೇಕು. ಹೆಣ್ಣುಮಕ್ಕಳು ತುಂಡು ಬಟ್ಟೆಗಳನ್ನು ಧರಿಸುವುದನ್ನು ಪಾಲಕರು ತಪ್ಪಿಸಬೇಕು. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸನಾತನ ಧರ್ಮವನ್ನು ಬೋಧಿಸಬೇಕು ಎಂದು ಸೂಚಿಸಿ ರಾಷ್ಟ್ರದ ಹಿತಚಿಂತನೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಜ್ಜಯಿನಿ ಮಠದ ಅಭೀಷೇಕ ದೇವರು ಹಾಗೂ ಕಾರ್ಯದರ್ಶಿ ಯು.ಎಂ.ಆರ್. ಈಶ್ವರ ಪ್ರಸಾದ್, ವೀರಶೈವ ಸಮಾಜದ ಮುಖಂಡರಾದ ಷಣ್ಮುಖಪ್ಪ, ಕೆಇಬಿ,  ಶ್ರೀಮತಿ ತಿಪ್ಪಕ್ಕ ಜಯ್ಯಪ್ಪ, ಭಾಗವಹಿ ಸಿದ್ದರು, ಗಂಜಿಗಟ್ಟೆ ಕೃಷ್ಣಮೂರ್ತಿ ಪ್ರಾರ್ಥಿಸಿದರೆ ಶಿಲ್ಪ ಸ್ವಾಗತಿಸಿದರೆ ಮಠದ ಪರಿಚಯವನ್ನು ಶಿಕ್ಷಕಿ ಶಾಂಭವಿ ಮಾಡಿದರೆ ಕಾರ್ಯಕ್ರಮ ನಿರೂಪಣೆ ವಂದನಾರ್ಪಣೆಯನ್ನು ಸಂಸ್ರ್ಕಋತ ಶಿಕ್ಷಕರಾದ ದೇವರಾಜ್ ಮಾಡಿದರು. ಸಂಸ್ಕøತ ಪಾಠ ಶಾಲೆಯ ಹಿರಿಯ ವಿದ್ಯಾರ್ಥಿ ರಕ್ಷಿತ ಭರತನಾಟ್ಯವನ್ನು ಪ್ರದರ್ಶನ ಮಾಡಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...