Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ಕೇಸ್ : ತಂದೆ ಸೇರಿ ಮೂವರ ಬಂಧನ..!

---Advertisement---

 

ಧಾರವಾಡ: ಇಡೀ ಹುಬ್ಬಳ್ಳಿ ಧಾರವಾಡವನ್ನೇ ನಡುಗಿಸುವಂತಹ ಘಟನೆ ನಡೆದಿದೆ. ತಂದೆಯೇ ಮುದ್ದು ಮಗಳನ್ನ ಬರ್ಬರವಾಗಿ ಕೊಂದಿದ್ದಾನೆ. ಅದರಲ್ಲೂ ಆ ಮೃತ ಮಗಳೆಂದರೆ ತಂದೆಗೆ ಇನ್ನಿಲ್ಲದ ಪ್ರೀತಿ. ಮಗಳನ್ನ ಚೆನ್ನಾಗಿ ಓದಿಸಿ, ಇಂಜಿನಿಯರ್ ಮಾಡಬೇಕು ಎಂಬ ಆಸೆ. ಆದರೆ ಅನ್ಯ ಜಾತಿ ಹುಡುಗನನ್ನ ಮದುವೆಯಾಗಿದ್ದಾಳೆಂಬ ಒಂದೇ ಒಂದು ಕಾರಣಕ್ಕೆ ತಂದೆಯೇ ಮುದ್ದಿನ ಮಗಳು ಎಂಬ ಮಮಕಾರ ಮರೆತು ಕೊಚ್ಚಿ ಕೊಲೆ ಮಾಡಿದ. ಈ ಕೇಸ್ ಸಂಬಂಧ ತಂದೆ ಸೇರಿ ಮೂವರ ಬಂಧನವಾಗಿದೆ.

ಮೃತ ಮಾನ್ಯಗೆ ಇನ್ನು 19 ವರ್ಷವಷ್ಟೇ. ಅದೇ ಗ್ರಾಮದ ಅಂದ್ರೆ ಧಾರವಾಡ ಜಿಲ್ಲೆಯ ಇನಾಂವೀರಾಪುರ ಗ್ರಾಮದ ವಿವೇಕಾನಂದನನ್ನ ಪ್ರೀತಿಸಿದ್ದಳು. ಅನ್ಯ ಜಾತಿಯೆಂಬ ಕಾರಣಕ್ಕೆ‌ ಮನೆಯಲ್ಲಿ ಒಪ್ಪಿಗೆ ನೀಡಿರಲಿಲ್ಲ. ಆದರೂ ಮಾನ್ಯ ಮನೆಯವರ ವಿರೋಧದ ನಡುವೆಯೇ ವಿವೇಕಾನಂದನನ್ನ ಮದುವೆಯಾದಳು. ಊರನ್ನು ಬಿಟ್ಟಿದ್ದರು. ಏಳು ತಿಂಗಳ ಬಳಿಕ ಇನಾಂವೀರಾಪುರ ಗ್ರಾಮಕ್ಕೆ ಬಂದಿದ್ದರು. ಈಗ ಮಾನ್ಯ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಮೂರು ತಿಂಗಳು ಕಳೆದಿದ್ದರೆ ಮನೆಗೊಂದು ಪುಟ್ಟ ಮಗು ಬರ್ತಾ ಇತ್ತು.

ಊರಿಗೆ ಬಂದ ಮಗಳನ್ನ ತಂದೆಯೇ ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಮಾನ್ಯಳನ್ನ ಉಳಿಸಿಕೊಳ್ಳುವುದಕ್ಕೆ ಕುಟುಂಬಸ್ಥರು ಕೂಡ ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಮಗಳು ಗರ್ಭಿಣಿ ಎಂಬುದನ್ನು ಲೆಕ್ಕಿಸದೇ ತಂದೆ ಪ್ರಕಾಶ್ ಗೌಡಗೆ ತನ್ನ ಜಾತಿಯೇ ಮುಖ್ಯವಾಗಿದೆ. ಎಷ್ಟು ವರ್ಷಗಳು ಬೇಕು ಈ ರೀತಿಯ ಮನಸ್ಥಿತಿ ದೂರವಾಗುವುದಕ್ಕೆ ಎಂಬುದು ಮಾತ್ರ ಗೊತ್ತಿಲ್ಲ. ಪುಟ್ಟ ಹುಡುಗಿ, ತನ್ನೊಡಲೊಳಗಿದ್ದ ಮತ್ತೊಂದು ಜೀವವನ್ನು ಬಲಿ ಕೊಟ್ಟಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now