Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ಇನ್ನಿಲ್ಲ

---Advertisement---

 

ಸುದ್ದಿಒನ್ : MS Swaminathan : ಭಾರತದ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ ಖ್ಯಾತ ಕೃಷಿ ವಿಜ್ಞಾನಿ, ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ಇನ್ನಿಲ್ಲ.

ಎಂಎಸ್ ಸ್ವಾಮಿನಾಥನ್ ಅವರು ತಮ್ಮ 98 ನೇ ವಯಸ್ಸಿನಲ್ಲಿ ತಮಿಳುನಾಡಿನ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಕೊನೆಯುಸಿರೆಳೆದರು. ಆರೋಗ್ಯ ಸಮಸ್ಯೆ ಹಾಗೂ ವಯೋಸಹಜ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸ್ವಾಮಿನಾಥನ್ ಅವರು 1925 ರ ಆಗಸ್ಟ್ 7 ರಂದು ಮದ್ರಾಸ್ ಪ್ರೆಸಿಡೆನ್ಸಿಯ ಕುಂಭಕೋಣಂ ಪ್ರದೇಶದಲ್ಲಿ ಜನಿಸಿದರು.  ಭಾರತದ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ ಎಂ.ಎಸ್.ಸ್ವಾಮಿನಾಥನ್ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹಲವು ಸೇವೆಗಳನ್ನು ಸಲ್ಲಿಸಿದ್ದಾರೆ. ಇವರು ತಮ್ಮ ಸಂಶೋಧನೆಗಾಗಿ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಎಂಎಸ್ ಸ್ವಾಮಿನಾಥನ್ ಅವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯಲಾಗುತ್ತದೆ. ದೇಶದ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಗಾಗಿ ಸಾಕಷ್ಟು ದುಡಿದಿದ್ದಾರೆ. ಅದರಲ್ಲೂ ಭತ್ತದ ಗದ್ದೆಗಳಲ್ಲಿ ಅಧಿಕ ಇಳುವರಿಯನ್ನು ಸೃಷ್ಟಿಸಿದ್ದಾರೆ. ಇದರಿಂದ ಭಾರತವು ಆಹಾರಕ್ಕಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿಲ್ಲ.  ಸ್ವಾತಂತ್ರ್ಯಾನಂತರ ದೇಶ ಆಹಾರ ಉತ್ಪಾದನೆಯಲ್ಲಿ ತೀರಾ ಹಿಂದುಳಿದಿತ್ತು. ಆ ಸಮಯದಲ್ಲಿಯೇ ಹಸಿರು ಕ್ರಾಂತಿ ನಡೆದು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿತು.

ಪ್ರಯೋಗ-ಸಂಶೋಧನೆಗಳನ್ನು ಮಾಡಿ ಕೃಷಿ ಪದ್ಧತಿಯಲ್ಲಿ ಹಲವು ಬದಲಾವಣೆಗಳಿಗೆ ನಾಂದಿ ಹಾಡಿದ್ದಾರೆ. ಇದರಿಂದ ಭಾರತೀಯ ಕೃಷಿಯ ದಿಕ್ಕೇ ಬದಲಾಗಿದ್ದು, ಇಳುವರಿಯೂ ಹೆಚ್ಚಿದೆ.

ಎಂ.ಎಸ್.ಸ್ವಾಮಿನಾಥನ್ ಅವರ ತಂದೆ ಎಂ.ಕೆ.ಸಾಂಬಶಿವನ್ ಶಸ್ತ್ರಚಿಕಿತ್ಸಕರಾಗಿದ್ದರು(ಸರ್ಜನ್). ಆದರೆ ಮೆಟ್ರಿಕ್ಯುಲೇಷನ್ ಮುಗಿದ ನಂತರ ಸ್ವಾಮಿನಾಥನ್ ಕೂಡ ವೈದ್ಯಕೀಯ ಕ್ಷೇತ್ರದತ್ತ ಹೆಜ್ಜೆ ಇಡಲು ನಿರ್ಧರಿಸಿದರು. ಆದರೆ 1943ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕ್ಷಾಮವನ್ನು ಕಂಡ ನಂತರ ಮನಸ್ಸು ಬದಲಿಸಿ ಕೃಷಿ ಸಂಶೋಧನೆಯತ್ತ ಮುಖ ಮಾಡಿದರು.

ಎಂಎಸ್ ಸ್ವಾಮಿನಾಥನ್ ತಿರುವನಂತಪುರಂನ ಮಹಾರಾಜ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ನಂತರ ಮದ್ರಾಸ್ ಕೃಷಿ ಕಾಲೇಜಿನಲ್ಲಿ ಕೃಷಿ ವಿಜ್ಞಾನದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಅವರು ತಮ್ಮ ಪಿಜಿಯನ್ನು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ- IARI, ದೆಹಲಿಯಲ್ಲಿ ಮಾಡಿದರು.

ಪಿಜಿ ಮುಗಿಸಿ ಸಿವಿಲ್ಸ್ ಬರೆದ ಎಂ.ಎಸ್.ಸ್ವಾಮಿನಾಥನ್ ಐಪಿಎಸ್ ಗೆ ಅರ್ಹತೆ ಪಡೆದರು. ಅದರ ನಂತರ, ಅವರು ಕೇಂಬ್ರಿಡ್ಜ್ ಯೂನಿವರ್ಸಿಟಿ ಸ್ಕೂಲ್ ಆಫ್ ಅಗ್ರಿಕಲ್ಚರ್ ಸೇರಿಕೊಂಡರು ಮತ್ತು ತಮ್ಮ ಪಿಎಚ್ಡಿ ಪೂರ್ಣಗೊಳಿಸಿದರು.  ಅಂತಿಮವಾಗಿ, ಅವರು 1954 ರಲ್ಲಿ ಭಾರತಕ್ಕೆ ಮರಳಿದರು ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ-IARI ನಲ್ಲಿ ವಿಜ್ಞಾನಿಯಾಗಿ ಸಂಶೋಧನೆಯನ್ನು ಮುಂದುವರೆಸಿದರು.
1972 ರಿಂದ 1979 ರವರೆಗೆ ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಅವರು ಭಾರತೀಯ ಅರಣ್ಯ ಸಮೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1979ರಲ್ಲಿ ಕೇಂದ್ರ ಸರ್ಕಾರ ಅವರನ್ನು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿತು.

ಅದರ ನಂತರ 1987 ರಲ್ಲಿ ಅವರು ಚೆನ್ನೈನಲ್ಲಿ ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಅನ್ನು ಸ್ಥಾಪಿಸಿದರು. ಇದಕ್ಕಾಗಿ ಅವರು ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ಪಡೆದರು.

1971 ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1986 ರಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ವರ್ಲ್ಡ್ ಸೈನ್ಸ್ ಪ್ರಶಸ್ತಿ. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಇಂದಿರಾ ಶಾಂತಿ ಪ್ರಶಸ್ತಿ ಮತ್ತು ಇಂದಿರಾ ರಾಷ್ಟ್ರೀಯ ಏಕೀಕರಣ ಪ್ರಶಸ್ತಿಗಳನ್ನು ಸಹ ಎಂಎಸ್ ಸ್ವಾಮಿನಾಥನ್ ಅವರಿಗೆ ನೀಡಲಾಗಿದೆ.
ಸ್ವಾಮಿನಾಥನ್ ಅವರು ಪತ್ನಿ ಮೀನಾ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಹೆಣ್ಣು ಮಕ್ಕಳ ಹೆಸರು ಸೌಮ್ಯಾ ಸ್ವಾಮಿನಾಥನ್, ಮಥುರಾ ಸ್ವಾಮಿನಾಥನ್ ಮತ್ತು ನಿತ್ಯಾ ಸ್ವಾಮಿನಾಥನ್ ಇದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...