Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹರಿಮತಿ ಚೌಡೇಶ್ವರಿ ದೇವಿಯ ಜೀರ್ಣೋದ್ದಾರ ಟ್ರಸ್ಟ್‌ಗೆ ಸಂಸದರಿಂದ ಅನುದಾನದ ಭರವಸೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್,ಹೊಳಲ್ಕೆರೆ, ಏ. 13 : ಪಟ್ಟಣದ ಮಂಜುನಾಥ ಶಾಲೆಯ ರಸ್ತೆಯ ಹರಿಮತಿ ಚೌಡೇಶ್ವರಿ ದೇವಿಯ ಜೀರ್ಣೋದ್ದಾರ ಟ್ರಸ್ಟ್‍ನಿಂದ ಆಯೋಜಿಸಿದ್ದ ಹೊಳಲ್ಕೆರೆ ಪಟ್ಟಣದ ಶ್ರೀ ಹರಿಮತಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವವು ಏ. 6 ಮತ್ತು 7 ರಂದು ನಡೆದಿದ್ದು, ಭಾನುವಾರ ದೇವಾಲಯಕ್ಕೆ ಸಂಸದರಾದ ಗೋವಿಂದ ಕಾರಜೋಳ ಭೇಟಿ ನೀಡಿ ಅಮ್ಮನವರು ಆರ್ಶೀವಾದವನ್ನು ಪಡೆದರು. ದೇವಿಗೆ ವಿಶೇಷ ಪುಷ್ಪಾಲಂಕಾರ ಸೇವೆ, ವಿವಿಧ ಪೂಜಾ ಕೈಂಕರ್ಯಗಳು ನಡೆಸಲಾಗಿತ್ತು.

 

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ ಶಕ್ತಿದೇವತೆ ಹರಿಮತಿ ಚೌಡೇಶ್ವರಿ ದೇವಿ ದುಷ್ಟ ಶಕ್ತಿಗಳಿಂದ ಭಕ್ತರನ್ನು ರಕ್ಷಿಸುತ್ತಿದ್ದಾಳೆ. ಸಮಸ್ಯೆಗಳ ಪರಿಹಾರಕ್ಕಾಗಿ ಬೇಡಿ ಬರುವ ಭಕ್ತರಿಂದ ಟ್ರಸ್ಟ್ ಆಗಲಿ, ದೇವಸ್ಥಾನದವರಾಗಲೀ ಹಣ ಪಡೆಯುವುದಿಲ್ಲ. ಇಲ್ಲಿನ ಟ್ರಸ್ಟ್‍ನವರೇ ಹಣವನ್ನು ಹಾಕಿ ದೇವಿ ಜಾತ್ರಾ ಮಹೋತ್ಸವವನ್ನು ನಡೆಸುತ್ತಾರೆ ಮುಂದಿನ ದಿನದಲ್ಲಿ ಈ ದೇವಾಲಯದ ಅಭೀವೃದ್ದಿಗೆ ಸಂಸದರ ಅನುದಾನದಡಿಯಲ್ಲಿ ಆರ್ಥಿಕ ನೆರವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.

 

ಈ ಸಮಯದಲ್ಲಿ ಹರಿಮತಿ ಚೌಡೇಶ್ವರಿ ಅಮ್ಮನವರ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಎಂ. ಸತೀಶ್ ಕುಮಾರ್, ಟ್ರಸ್ಟ್ ಸದಸ್ಯರಾದ ಪೂಜಾರ್ ಕಾಳ್ಯನಾಯ್ಕ, ಹೀರಾನಾಯ್ಕ, ಮಂಜುನಾಥ್, ಶಿವಾನಂದಪ್ಪ, ಆನಂದ್‍ಪ್ಪ,  ಮಹೇಶ್, ಶ್ರೀಮತಿ ಶೋಭಾ, ಸುಧಾಮಣಿ, ಪರಶುರಾಮ, ಶ್ರೀನಿವಾಸ್, ಶಂಕರನಾಯ್ಕ, ವಿಜಯಕುಮಾರ್, ಪ್ರವೀಣ್‍ನಾಯ್ಕ ತಿಪ್ಪೇಸ್ವಾಮಿ ನಾಯ್ಕ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now