Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ನೋಡಲು ಕಡೆಗೂ ಪರಪ್ಪನ ಅಗ್ರಹಾರಕ್ಕೆ ಬಂದ ತಾಯಿ ಹಾಗೂ ಸಹೋದರ..!

---Advertisement---

 

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿಗೆ ಎಚ್ಚರಿಕೆ ನೀಡುವುದಕ್ಕೆ ಹೋಗಿ ದರ್ಶನ್ ಅಂಡ್ ಗ್ಯಾಂಗ್ ಕೊಲೆಯನ್ನೇ ಮಾಡಿ, ಜೈಲು ಪಾಲಾಗಿದ್ದಾರೆ. ಅದರಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಜೈಲು ಸೇರಿದಾಗಿನಿಂದ ತಾಯಿ ಮೀನಾ ಅವರಾಗಲೀ, ಸಹೋದರ ದಿನಕರ್ ತೂಗುದೀಪ ಅವರಾಗಲೀ ಭೇಟಿ ಕೊಟ್ಟಿರಲಿಲ್ಲ. ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ತಾಯಿ ಮತ್ತು ತಮ್ಮ ಭೇಟಿ ನೀಡಿದ್ದಾರೆ.

ದರ್ಶನ್ ದೊಡ್ಡ ಸೆಲೆಬ್ರೆಟಿ. ಅವರು ಇದು ಎರಡನೇ ಸಲ ಜೈಲಿಗೆ ಹೋಗುತ್ತಿರುವುದು. ಹೀಗಾಗಿ ಎಲ್ಲರ ಫೋಕಸ್ ದರ್ಶನ್ ಮೇಲಿದೆ. ಇದರ ನಡುವೆ ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್ ಗಳ ಕಾಟ ಒಂದೊಂದೆ ಒಂದೊಂದೆ ಬಯಲಿಗೆ ಬರುತ್ತಿದೆ. ಅದರಲ್ಲೂ ಇಂಡಸ್ಟ್ರಿಯಲ್ಲಿರುವ ನಾಯಕಿಯರಿಗೇನೆ ಆ ರೀತಿ ಕೆಟ್ಟದಾಗಿ ಮೆಸೇಜ್ ಮಾಡಿರುವುದು ಬೆಳಕಿಗೆ ಬರುತ್ತಿದೆ.

ಇದರ ನಡುವೆ ದರ್ಶನ್ ಅವರ ಸ್ಥಿತಿ ಕಂಡು ಕನ್ನಡ ಚಿತ್ರರಂಗದ ಕೆಲವರು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಶಿವಣ್ಸ, ಹಂಸಲೇಖ ಸೇರಿದಂತೆ ಹಲವರು ಈ ರೀತಿ ಆಗಬಾರದಿತ್ತು ಎಂದೇ ಹೇಳುತ್ತಿದ್ದಾರೆ. ಇನ್ನು ರಕ್ಷಿತಾ ಮತ್ತು‌ ಪ್ರೇಮ್ ಜೈಲಿಗೆ ಹೋಗಿ ನೋಡಿಕೊಂಡು ಬಂದಿದ್ದಾರೆ. ಹೀಗಾಗಲೇ ವಿಜಯಲಕ್ಷ್ಮೀ ಹಾಗೂ ಮಗ ವಿನಿಶ್ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟು ಬಂದಿದ್ದಾರೆ. ದರ್ಶನ್ ಅವರನ್ನು ಜೈಲಿನಿಂದ ಹೊರತರಲು ವಿಜಯಲಕ್ಷ್ಮೀ ಹರಸಾಹಸ ಪಡುತ್ತಿದ್ದಾರೆ. ಇದೀಗ ತಾಯಿ ಮೀನಾ ಸಹೋದರ ದಿನಕರ್ ಜೈಲಿಗೆ ಭೇಟಿ ಕೊಟ್ಟು, ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದಾರೆ. ಮಗನ ಸ್ಥಿತಿ ಕಂಡು ಮೀನಾ ಕಣ್ಣೀರು ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment