Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ವಿಜಯಲಕ್ಷ್ಮೀ ದರ್ಶನ್ ಮನೆಯಲ್ಲಿ ಹಣ ಕಳವು : ನಾವು ಹಣ ಕದ್ದಿಲ್ಲ ಎಂದ ಕೆಲಸಗಾರರು, ಹಾಗಾದ್ರೆ ಕದ್ದಿದ್ದು ಯಾರು..?

---Advertisement---

 

ಬೆಂಗಳೂರು: ಒಂದು ಕಡೆ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲಲ್ಲಿದ್ರೆ, ಇತ್ತ ವಿಜಯಲಕ್ಷ್ಮೀ ಮನೆಯಲ್ಲಿ ಇಟ್ಟಿದ್ದ ಮೂರು ಲಕ್ಷ ಹಣ ಕಳ್ಳತನವಾಗಿತ್ತು. ಈ ಸಂಬಂಧ ವಿಜಯಲಕ್ಷ್ಮೀ ಮ್ಯಾನೇಜರ್ ನಾಗರಾಜ್ ದೂರನ್ನ ನೀಡಿದ್ದರು. ದೂರು ದಾಖಲಿಸಿಕೊಂಡ ಅಚ್ಚುಕಟ್ಟು ಪೊಲೀಸರು ತನಿಖೆಯನ್ನ ಶುರು ಮಾಡಿದರು. ಸಹಜವಾಗಿಯೇ ಅನುಮಾನ ಬರುವಂತೆ ಮನೆ ಕೆಲಸದವರ ಮೇಲೆ ಅನುಮಾನವಿತ್ತು. ವಿಚಾರಣೆಯನ್ನು ನಡೆಸಿದರು. ಹಾಗಾದ್ರೆ ಮನೆ ಕೆಲಸದವರು ಏನಂದ್ರು ರಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ದರ್ಶನ್ ಪತ್ನಿ ವಿಜಯಲಕ್ಷ್ಮೀ ಪ್ಲ್ಯಾಟ್ ನಲ್ಲಿದ್ದ ಹಣವನ್ನು ದೇವ್ರಾಣೆ ನಾವೂ ಕದ್ದಿಲ್ಲ. ಹಣದ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಇದರ ನಡುವೆ ವಿಜಯಲಕ್ಷ್ಮೀ ಅವರ ತಾಯಿಯನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮ್ಯಾನೇಜರ್ ನಾಗರಾಜ್ ಕೊಟ್ಟಂತ ದೂರಿನಲ್ಲಿ, ನಾನು ವಾರ್ಡ್ ರೋಬ್ ನಿಂದ ಹಣ ತೆಗೆದು, ಉಳಿದಂತ ಮೂರು ಲಕ್ಷ ಹಣವನ್ನ ಅಲ್ಲಿಯೇ ಇಟ್ಟಿದ್ದೆ. ಮನೆ ಕೆಲಸದವರ ಮೇಲೆ ಅನುಮಾನವಿದೆ ಎಂದು ದೂರು ನೀಡಿದ್ದರು. ಹಣ ಕಳ್ಳತನವಾದಾಗ ಮನೆಯಲ್ಲಿದ್ದವರು ವಿಜಯಲಕ್ಷ್ಮೀ ತಾಯಿ ಹಾಗೂ ಮ್ಯಾನೇಜರ್ ಹಾಗೂ ಮೂವರು ಮನೆ ಕೆಲಸದವರು. ಹೀಗಾಗಿ ಈ ಐದು ಜನರಲ್ಲಿ ಹಣ ಕದ್ದವರು ಯಾರು ಎಂಬ ಪ್ರಶ್ನೆ ಪೊಲೀಸರನ್ನ ಕಾಡುತ್ತಿದೆ. ಹೀಗಾಗಿ ಎಲ್ಲಾ ಆಯಾಮದಿಂದಾನೂ ತನಿಖೆಯನ್ನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ವಿಜಯಲಕ್ಷ್ಮೀ ತಾಯಿ ಹಾಗೂ ಅವರ ಮ್ಯಾನೇಜರ್ ನಾಗರಾಜ್ ಅವರನ್ನು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now