ಧಾರವಾಡ: ಶಾಸಕ ವಿನಯ್ ಕುಲಕರ್ಣಿ ಅವರನ್ನ ಪೊಲೀಸರು ಇದೀಗ ಮತ್ತೆ ಬಂಧಿಸಿದ್ದಾರೆ. ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಅವರನ್ನ ಅರೆಸ್ಟ್ ಮಾಡಲಾಗಿದೆ. ಸಾಕ್ಷಿಗಳಿಗೆ ಲಂಚ ನೀಡಿದ ಆರೋಪದ ಹಿನ್ನೆಲೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಗೊಳಿಸಿದೆ. 2016ರಲ್ಲಿ ನಡೆದ ಕೊ*ಯ ಕೇಸ್ ಇದಾಗಿದೆ.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದ ಯೋಗೀಶ್ ಗೌಡನನ್ನು ಅವರದ್ದೇ ಮಾಲೀಜತ್ವದ ಜಿಮ್ ನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆದರೆ ಈ ಕೊಲೆಯಾದ ಮೇಲೆ ಬಸವರಾಜ್ ಮುತ್ತಗಿ ಹಾಗೂ ಆತನ ತಂಡವನ್ನು ಪೊಲೀಸರು ಬಂಧಿಸಿದ್ದರು. ಆದರೆ ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಈ ಕೇಸನ್ನ ಸಿಬಿಐಗೆ ನೀಡಿದರೋ ಆಗ ನಿಜವಾದ ಕೊಲೆಗಾರರೇ ಬೇರೆ ಅನ್ನೋದು ಬಯಲಿಗೆ ಬಂದಿತ್ತು. ಈ ಕೊಲೆಯಲ್ಲಿ ವಿನಯ್ ಕುಲಕರ್ಣಿ ಅವರ ಕೈವಾಡ ಇರೋದು ಬಯಲಿಗೆ ಬಂದಿತ್ತು.
ಧಾರವಾಡ ಕ್ಷೇತ್ರದ ಶಾಸಕರಾದರೂ ಸಹ ಧಾರವಾಡಕ್ಕೆ ಹೋಗುವುದಕ್ಕೆ ಅನುಮತಿ ಇಲ್ಲ. ಸಾಕ್ಷಿಗಳನ್ನು ನಾಶ ಮಾಡ್ತಾರೆ ಅಥವಾ ಕೊಂಡುಕೊಳ್ಳುವ ಪ್ರಯತ್ನ ಮಾಡಬಹುದು ಎಂಬ ಅನುಮಾನದಿಂದ. ಬೆಳಗಾವಿಯಲ್ಲಿಯೇ ಕುಳಿತು ತಮ್ಮ ಕ್ಷೇತ್ರದ ಕೆಲಸಗಳನ್ನು ಮಾಡ್ತಾ ಇದ್ದರು. ಇದೀಗ ಸಾಕ್ಷಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ಇದೀಗ ಸಾಕ್ಷಿಗಳಿಗೆ ಆಮಿಷವೊಡ್ಡಿರುವುದು ಸುಪ್ರೀಂ ಕೋರ್ಟ್ ಗಮನಕ್ಕೆ ಬಂದ ಕಾರಣ, ಅವರನ್ನು ಬಂಧಿಸಲಾಗಿದೆ. ಸಾಕಷ್ಟು ವರ್ಷಗಳಿಂದ ಈ ಕೊ* ಕೇಸಲ್ಲಿ ವಿನಯ್ ಕುಲಕರ್ಣಿ ವಿಚಾರಣೆ ಎದುರಿಸುತ್ತಲೆ ಇದ್ದಾರೆ.











