ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಸೆ. 13 : ಚಿತ್ರದುರ್ಗ ನಗರದ ಆನೆ ಬಾಗಿಲ ಬಳಿ ಇರುವ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯವತಿಯಿಂದ 69ನೇ ವರ್ಷದ ಗಣಪತಿ ಪೂಜಾ ಮಹೋತ್ಸವವನ್ನು ಸೆ. 14 ರಿಂದ ಸೆ, 24ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಎಲ್.ಎನ್.ರಾಜಕುಮಾರ್, ತಿಳಿಸಿದ್ದಾರೆ.
ಅ. 17ರಂದು 69ನೇ ವರ್ಷದ ಗಣಪತಿ ಪೂಜಾ ಮಹೋತ್ಸವದ ಅಂಗವಾಗಿ ಭೂಮಿ ಪೂಜೆಯನ್ನು ನಡೆಸುವುದರ ಮೂಲಕ ಮಹೋತ್ಸವವಕ್ಕೆ ಚಾಲನೆಯನ್ನು ನೀಡಲಾಯಿತು. ಶಿವಮೊಗ್ಗದ ಶಿಲ್ಪಿಗಳಾದ ರಾಮಕೃಷ್ಣ ಪಾಂಡುರಂಗ ಇವರಿಂದ ನಿರ್ಮಾಣವಾದ ಶ್ರೀ ಪ್ರಸನ್ನ ಗಣಪತಿ ಹಾಗೂ ರಾಜು ಜಿ.ಎಂ. ನಿರ್ಮಾಣ ಚಿತ್ತಾಕರ್ಷಕವಾದ ಪೆಂಡಾಲ್ ನಿರ್ಮಾಣವಾಗಿದ್ದು, ಪ್ರತಿ ದಿನ ಗಣಪತಿಗೆ ನವಗ್ರಹ ಹೋಮ, ಸಹಸ್ರನಾಮ ಕುಂಕುಮಾರ್ಚನೆ, ಮಹಾ ಮಂಗಳಾರತಿ ಪ್ರಸಾದ್ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.
ಸೆ.15 ರಿಂದ 23ರವರೆಗೆ ಪ್ರತಿ ದಿನ ಸಂಜೆ 6 ಗಂಟೆಯಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು ಇದರಲ್ಲಿ ಸೆ. 15ರಂದು ಕೆ.ಎ.16 ತಂಡದ ಉದಯರಾವ್ ಮತ್ತು ಅಭೀಷೇಕ್ ಎಂ.ಮುರುಡರವರಿಂದ ಸಂಗೀತ ಸಂಜೆ, ಸೆ. 16 ರಂದು ಕಲಾಂಜಲಿ ಕರೋಕೆ ವಾದ್ಯ ಗೋಷ್ಟಿ ಇವರಿಂದ ಭಕ್ತಿಗೀತೆ, ಚಲನಚಿತ್ರ ಗೀತೆಗಳ ಗಾಯನ, ಸೆ. 17 ರಂದು ಶ್ರೀಕಾಂತ ಮತ್ತು ತಂಡ ಶ್ರೀ ಶಾರದ ಮೆಲೋಡಿಸ್ ಇವರಿಂದ ಚಲನಚಿತ್ರ ಗೀತೆಗಳ ಗಾಯನ, ಸೆ. 18 ರಂದು ಶಿವಮೊಗ್ಗದ ಶ್ರೀ ಗೌರಿ ಕಲಾ ಕೇಂದ್ರದ ವಿದೂಷಿ ಶ್ರೀಮತಿ ಕವಿತರಾಣಿ ಜಗದೀಶ್ ತಂಡದಿಂದ ಭರತನಾಟ್ಯ ಮತ್ತು ನೃತ್ಯ ವೈಭವ, ಸೆ. 19 ರಂದು ಲಾಸಿಕಾ ಫೌಂಡೇಷನ್ ವಿದೂಷಿ ಶ್ವೇತಾ ಮಂಜುನಾಥ್ ಮತ್ತು ತಂಡದಿಂದ ನೃತ್ಯ ಸಂಭ್ರಮ, ಸೆ, 20 ರಂದು ರಿಚರ್ಡ ಲೂಯಿಸ್ ತಂಡದಿಂದ ನಗೆ ಹಬ್ಬ, ಸೆ. 21 ರಂದು ಮಾಸ್ಟರ್ ಶಾಲೋಮ್ ಇವರಿಂದ ಭಕ್ತಿಗೀತೆ, ಭಾವಗೀತೆ, ಹಳೇ ಚಲನಚಿತ್ರ ಗೀತೆಗಳ ಗಾಯನ, ಸೆ, 22 ರಂದು ಹೂಸನಗರದ ಸಂಗೀತ ಮ್ಯೂಸಿಕಲ್ ಇವೆಂಟ್ಸ್ ಇವರಿಂದ ಸಂಗೀತ ಸಂಜೆ ಸೆ. 23ರಂದು ಕಿರಣ ಮತ್ತು ಕಲಾ ತಂಡ, ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರದಿಂದ ಚಿಣ್ಣರ ನೃತ್ಯ ಕಲರವ ಶಾಸ್ತ್ರೀಯ ನೃತ್ಯ ವಿಶೇಷ ನೃತ್ಯ ರೂಪಕ ಮಹಿಷಾಸುರ ಮರ್ಧಿನಿ ಪ್ರದರ್ಶನವಾಗಲಿದೆ.
ಸೆ, 23ರಂದು ನವಗ್ರಹ ಹೋಮ, ಸಹಸ್ರ ಮೋದಕ ಗಣಹೋಮ. ಮಧ್ಯಾಹ್ನ 12ಕ್ಕೆ ಪೂರ್ಣಹುತಿ ನಡೆಯಲಿದ್ದು ಸೆ, 24ರ ಸಂಜೆ 6 ಗಂಟೆಯಿಂದ ಸರ್ವ ಅಲಂಕಾರ ವಿದ್ಯುತ್ ದೀಪದ ರಥದಲ್ಲಿ ಸಕಲ ದೇವ ಮರ್ಯಾದೆಗಳೊಂದಿಗೆ ಶ್ರೀ ಶಾರದ ಬ್ರಾಸ್ ಬ್ಯಾಂಡ್ ವಾದ್ಯಗೋಷ್ಟಿಯೊಂದಿಗೆ ಶ್ರೀ ಪ್ರಸನ್ನ ಗಣಪತಿ ಉತ್ಸವ ನಡೆಯಲಿದ್ದು, ರಾತ್ರಿ 10.30ಕ್ಕೆ ಚಂದ್ರವಳ್ಳಿ ಕರೆಯಲ್ಲಿ ಗಣಪತಿಯನ್ನು ಉದ್ಘಾಸನೆ ಕಾರ್ಯಕ್ರಮ ನಡೆಯಲಿದೆ ಎಂದು ಎಲ್.ಎನ್.ರಾಜಕುಮಾರ್ ತಿಳಿಸಿದ್ದಾರೆ.













