Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಗಳ ಹುಟ್ಟುಹಬ್ಬಕ್ಕೆ ಕೇಕ್ ತರುತ್ತಿದ್ದಾಗ ಶಾಸಕ ಟೆಂಗಿನಕಾಯಿ ಕಾರು ಚಾಲಕ ಸಾವು..!

---Advertisement---

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಸಾವು ಸಾಕಷ್ಟು ಹೆಚ್ಚಾಗಿಯೇ ಕೇಳಿ ಬರ್ತಾಬಿದೆ. ಈಗ ಇದ್ದವರು ಮತ್ತೊಂದು ಕ್ಷಣಕ್ಕೆ ಇಲ್ಲದಂತೆ ಆಗುತ್ತಿದೆ. ಇದೀಗ ಶಾಸಕ‌ ಮಹೇಶ್ ಟೆಂಗಿನಕಾಯಿ ಕಾರು ಚಾಲಕನನ್ನು ಈ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.

ಮಂಜುನಾಥ್ ಅಲಿಯಾಸ್ ಸಾರಥಿ ಎಂಬುವವರು ತಮ್ಮ ಮಗಳ ಹುಟ್ಟುಹಬ್ಬದ ಖುಷಿಯಲ್ಲಿದ್ದರು. ಮಗಳ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಬೇಕು ಅಂತ ಕೇಕ್ ತರುವುದಕ್ಕೆ ಹೋಗಿದ್ದರು. ಆದರೆ ರಸ್ತೆ ಅಪಘಾತದಿಂದ ಜೀವ ಕಳೆದುಕೊಂಡಿದ್ದಾರೆ. ಈ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ‌. ಹುಬ್ಬಳ್ಳಿ ತಾಲೂಕಿನ ಕುಂದಗೋಳ ಕ್ರಾಸ್ ಬಳಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮಗಳ ಹುಟ್ಟುಹಬ್ಬ ಎಂದು ಇಡೀ ಮನೆ ಸಂತಸದಲ್ಲಿತ್ತು. ಈಗ ಈ ಸಾವಿನ ಸುದ್ದಿಯಿಂದ ಮನೆಯೇ ಸ್ಮಶಾನ ಮೌನವಾಗಿದೆ. ಮಗಳ ಸಂತಸಕ್ಕೆ ಆ ವಿಧಿ ಕಲ್ಲೆಸೆದಿದೆ.

ಹಲವು ವರ್ಷಗಳಿಂದ ಮೃತ ಮಂಜುನಾಥ್, ಶಾಸಕ ಟೆಂಗಿನಕಾಯಿ ಅವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕೇಕ್ ತೆಗೆದುಕೊಂಡು ಸ್ಕೂಟಿಯಲ್ಲಿ ಬರುತ್ತಿರುವಾಗ ರಸ್ತೆಯ ಡಿವೈಡರ್ ಗರ ಬೈಕ್ ಡಿಕ್ಕಿ ಹೊಡೆದು, ಪ್ರಾಣ ಕಳೆದುಕೊಂಡಿದ್ದಾರೆ. ತಕ್ಷಣ ಅವರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದ್ದರು, ಯಾವುದೇ ಪ್ರಯೋಜನವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಶಾಸಕ ಟೆಂಗಿನಕಾಯಿ ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಶವಗಾರದಲ್ಲಿದ್ದ ಮಂಜುನಾಥ್ ಶವ ನೋಡಿ ಅವರಿಗೂ ದುಃಖ ತಡೆದುಕೊಳ್ಳುವುದಕ್ಕೆ ಆಗಿಲ್ಲ. ಇಷ್ಟು ವರ್ಷ ಮಂಜುನಾಥ್ ಕೆಲಸ‌ಮಾಡುತ್ತಿದ್ದ ರೀತಿ ಬಗ್ಗೆ ನೆನೆದು ಕಣ್ಣೀರಾಕಿದ್ದಾರೆ. ಅಷ್ಟೇ ಅಲ್ಲ ಮಗಳ ಹುಟ್ಟುಹಬ್ಬದ ದಿನವೇ ಇಂಥ ದುರ್ಘಟನೆ ನಡೆದದ್ದು, ಇನ್ನು ದುರಂತ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now