Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರದ ಮಹತ್ವದ ಎಚ್ಚರಿಕೆ: ಈ ಕೆಲಸ ಮಾಡದಿದ್ದರೆ ಕಾರ್ಡ್ ರದ್ದು!

---Advertisement---

ದೆಹಲಿ. ಅಕ್ಟೋಬರ್. 03: ಪಡಿತರ ಚೀಟಿ (Ration Card) ಹೊಂದಿರುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ (Central Government) ಶಾಕ್ ನೀಡಲು ಸಜ್ಜಾಗಿದೆ. ಕಾರ್ಡ್ ಇದ್ದರೂ ಹಲವು ತಿಂಗಳುಗಳಿಂದ ಪಡಿತರ ಪಡೆಯದವರ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ಕೇಂದ್ರ ಮುಂದಾಗಿದೆ.

ಸತತ ಆರು ತಿಂಗಳುಗಳಿಂದ ರೇಷನ್ ಪಡೆಯದವರ ಕಾರ್ಡ್‌ಗಳು ಇನ್‌ಆಕ್ಟಿವ್ ಆಗಲಿದ್ದು, ಈ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವೇ ಅವು ಮರಳಿ ಸಕ್ರಿಯಗೊಳ್ಳಲಿವೆ. ಅಕ್ರಮಗಳಿಗೆ ಕಡಿವಾಣ ಹಾಕಲು ಪಡಿತರ ಪಡೆಯದ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ನಿರ್ಧರಿಸಲಾಗಿದೆ. ಅಕ್ಟೋಬರ್ ತಿಂಗಳಿನಿಂದಲೇ ಸುಮಾರು 1.58 ಕೋಟಿ ಜನರ ಪಡಿತರ ಚೀಟಿಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಆದರೆ ಇವರ ಹೆಸರುಗಳನ್ನು ತಕ್ಷಣವೇ ಡೇಟಾದಿಂದ ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ. ಬದಲಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತಿದ್ದು, ಈ ಅವಧಿಯಲ್ಲಿ ಈ-ಕೆವೈಸಿ ಮಾಡಿಸಿಕೊಂಡರೆ ಕಾರ್ಡ್ ಪುನಃ ಸಕ್ರಿಯಗೊಳ್ಳಲಿದೆ.

ಮೃತ ವ್ಯಕ್ತಿಗಳು, ನಕಲಿ ಹೆಸರುಗಳು ಹಾಗೂ ಡುಪ್ಲಿಕೇಟ್ ಕಾರ್ಡ್‌ಗಳನ್ನು ಗುರುತಿಸಿ ರದ್ದುಪಡಿಸುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅರ್ಹ ಬಡ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡಲು ಈ ಡೇಟಾ ಪರಿಷ್ಕರಣೆ ನಡೆಸಲಾಗುತ್ತಿದ್ದು, ಸೌಲಭ್ಯ ಕೈತಪ್ಪಬಾರದು ಎಂದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೆವೈಸಿ ಮಾಡಿಸಿಕೊಳ್ಳಲೇಬೇಕಿದೆ.

ಪಡಿತರ ಚೀಟಿಯ ಈ-ಕೆವೈಸಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ‘ಮೇರಾ ರೇಷನ್’ (Mera Ration) ಆ್ಯಪ್ ಸೌಲಭ್ಯ ಕಲ್ಪಿಸಿದೆ. ಸಾರ್ವಜನಿಕರು ಮೊಬೈಲ್‌ನಲ್ಲೇ ಈ ಆ್ಯಪ್ ಮೂಲಕ ತಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ, ‘ಆಧಾರ್ ಫೇಸ್ ಆರ್‌ಡಿ’ ಆ್ಯಪ್ ನೆರವಿನಿಂದ ಮುಖ ಸ್ಕ್ಯಾನ್ ಮಾಡಿ ಸುಲಭವಾಗಿ ಕೆವೈಸಿ ಮುಗಿಸಿಕೊಳ್ಳಬಹುದು. ಮೊಬೈಲ್‌ನಲ್ಲಿ ಸಾಧ್ಯವಾಗದಿದ್ದರೆ ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶವಿದ್ದು, ಕಾರ್ಡ್ ರದ್ದಾಗುವುದನ್ನು ತಪ್ಪಿಸಲು ತಕ್ಷಣವೇ ಕೆವೈಸಿ ಮಾಡಿಸಿಕೊಳ್ಳುವುದು ಉತ್ತಮ.

BREAKING : ಏಷ್ಯನ್ ಗೇಮ್ಸ್ ಕುಸ್ತಿಯಲ್ಲಿ ಭಾರತ `ಅಮನ್’ಗೆ ಚಿನ್ನದ ಪದಕ

Join WhatsApp

Join Now

Join Telegram

Join Now