ಬೆಂಗಳೂರು: ದಲಿತರ ಬಗ್ಗೆ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಶಾಸಕ ಮುನಿರತ್ನ ಸದ್ಯಕ್ಕೆಪೊಲೀಸರ ಕಸ್ಟಡಿಯಲ್ಲಿದ್ದಾರೆ. ಇದೇ ವೇಳೆ ಅವರ ಹಿನ್ನೆಲೆಯನ್ನು ಮುನಿರತ್ನ ಆಪ್ತರಾಗಿದ್ದ ವೇಲು ನಾಯ್ಕರ್ ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿ ಶಾಕ್ ಆಗಿದೆ. ವೇಲು ನಾಯ್ಕರ್ ಮಾಜಿ ಕಾರ್ಪೋರೇಟರ್ ಕೂಡ ಆಗಿದ್ದರು.
ವೇಲು ನಾಯ್ಕ್ ಹೇಳುವ ಪ್ರಕಾರ ಮುನಿರತ್ನ ಅವರಿಗೆ ರೌಡಿಸಂ ಬ್ಯಾಗ್ರೌಂಡ್ ಇದೆ ಎನ್ನಲಾಗಿದೆ. ಡಾನ್ ಜಯರಾಜ್ ಎಲ್ಲರಿಗೂ ಗೊತ್ತಿರುವ ರೌಡಿ. ಬೆಂಗಳೂರಿನ ಅತಿ ದೊಡ್ಡ ರೌಡಿ. ಜೊತೆಗೆ ಈತ ಹಲವು ರೌಡಿಗಳನ್ನು ಹುಟ್ಟುಹಾಕಿದ್ದ. ಜಯರಾಜ್ ಗ್ಯಾಂಗ್ ನಲ್ಲಿಯೇ ಮುನಿರತ್ನ ತಮ್ಮ ಕೊರಂಗು ಕೃಷ್ಣ ಕೂಡ ಗುರುತಿಸಿಕೊಂಡಿದ್ದ. ಜಯರಾಜ್ ಸತ್ತ ಬಳಿಕ ಕೊರಂಗು ಕೃಷ್ಣ ಬೆಂಗಳೂರಿನಲ್ಲಿ ತನ್ನದೇ ಆದ ಪಟಾಲಂ ಕಟ್ಟಿಕೊಂಡಿದ್ದ. ಆ ಬಳಿಕ ಮುನಿರತ್ನ ಆಂಧ್ರದಿಂದ ಬೆಂಗಳೂರಿಗೆ ಬಂದು, ತಮ್ಮನ ಬೆಂಬಲ ಪಡೆದು ಸಣ್ಣಪುಟ್ಟ ರೌಡಿಸಂ ಮಾಡಿಕೊಂಡಿದ್ದರಂತೆ.

ಶಾಸಕ ಮುನಿರತ್ನ ಓದಿದ್ದು ಕೇವಲ 8ನೇ ತರಗತಿ ಮಾತ್ರವಂತೆ. ನಾಯ್ಡು ಕುಟುಂಬ ಆಂಧ್ರದಿಂದ ವಲಸೆ ಬಂದು ಗಾರೆ ಕೆಲಸಮಾಡುತ್ತಿದ್ದರಂತೆ. ಸಣ್ಣ ಪುಟ್ಟ ರೌಡಿಸಂನಿಂದ ಶುರುವಾಗಿದ್ದು, ಇಂದು ಈ ಹಂತಕ್ಕೆ ತಲುಪಿದ್ದಾರೆ. ಪೊಲೀಸರು ಹೇಗೂ ಬಂಧಿಸಿದ್ದಾರೆ. ಈಗ ಅವರ ಹೆಸರಲ್ಲಿರುವ ಸಾವಿರಾರು ಕೋಟಿ ಆಸ್ತಿಯ ಮೂಲವನ್ನು ಪರಿಶೀಲನೆ ಮಾಡಬೇಕು ಎಂದು ವೇಲು ನಾಯ್ಕರ್ ಆಗ್ರಹ ಮಾಡಿದ್ದಾರೆ. ಇನ್ನು ಇಂದು ಮುನಿರತ್ನಂ ಕಸ್ಟಡಿ ಅಂತ್ಯವಾಗಿದೆ. ಪೊಲೀಸರು ಯಾವ ತೀರ್ಮಾನ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















