Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಶಾಸಕ ಮುನಿರತ್ನ ಓದಿರೋದು 8ನೇ ಕ್ಲಾಸ್ ಅಷ್ಟೇನಾ..? ರೌಡಿಯಾಗಿದ್ದ ತಮ್ಮನ ಸಪೋರ್ಟ್ ನಿಂದ ಬೆಳೆದರಾ..? ಆಪ್ತ ಬಿಚ್ಚಿಟ್ಟ ಸೀಕ್ರೆಟ್ ಏನು..?

---Advertisement---

 

ಬೆಂಗಳೂರು: ದಲಿತರ ಬಗ್ಗೆ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಶಾಸಕ ಮುನಿರತ್ನ ಸದ್ಯಕ್ಕೆ‌ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಇದೇ ವೇಳೆ ಅವರ ಹಿನ್ನೆಲೆಯನ್ನು ಮುನಿರತ್ನ ಆಪ್ತರಾಗಿದ್ದ ವೇಲು ನಾಯ್ಕರ್ ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿ ಶಾಕ್ ಆಗಿದೆ. ವೇಲು ನಾಯ್ಕರ್ ಮಾಜಿ ಕಾರ್ಪೋರೇಟರ್ ಕೂಡ ಆಗಿದ್ದರು.

ವೇಲು ನಾಯ್ಕ್ ಹೇಳುವ ಪ್ರಕಾರ ಮುನಿರತ್ನ ಅವರಿಗೆ ರೌಡಿಸಂ ಬ್ಯಾಗ್ರೌಂಡ್ ಇದೆ ಎನ್ನಲಾಗಿದೆ. ಡಾನ್ ಜಯರಾಜ್ ಎಲ್ಲರಿಗೂ ಗೊತ್ತಿರುವ ರೌಡಿ. ಬೆಂಗಳೂರಿನ ಅತಿ ದೊಡ್ಡ ರೌಡಿ. ಜೊತೆಗೆ ಈತ ಹಲವು ರೌಡಿಗಳನ್ನು ಹುಟ್ಟುಹಾಕಿದ್ದ. ಜಯರಾಜ್ ಗ್ಯಾಂಗ್ ನಲ್ಲಿಯೇ ಮುನಿರತ್ನ ತಮ್ಮ ಕೊರಂಗು ಕೃಷ್ಣ ಕೂಡ ಗುರುತಿಸಿಕೊಂಡಿದ್ದ. ಜಯರಾಜ್ ಸತ್ತ ಬಳಿಕ ಕೊರಂಗು ಕೃಷ್ಣ ಬೆಂಗಳೂರಿನಲ್ಲಿ ತನ್ನದೇ ಆದ ಪಟಾಲಂ ಕಟ್ಟಿಕೊಂಡಿದ್ದ. ಆ ಬಳಿಕ ಮುನಿರತ್ನ ಆಂಧ್ರದಿಂದ ಬೆಂಗಳೂರಿಗೆ ಬಂದು, ತಮ್ಮನ ಬೆಂಬಲ ಪಡೆದು ಸಣ್ಣಪುಟ್ಟ ರೌಡಿಸಂ‌ ಮಾಡಿಕೊಂಡಿದ್ದರಂತೆ.

ಶಾಸಕ ಮುನಿರತ್ನ ಓದಿದ್ದು ಕೇವಲ 8ನೇ ತರಗತಿ ಮಾತ್ರವಂತೆ. ನಾಯ್ಡು ಕುಟುಂಬ ಆಂಧ್ರದಿಂದ ವಲಸೆ ಬಂದು ಗಾರೆ ಕೆಲಸ‌ಮಾಡುತ್ತಿದ್ದರಂತೆ. ಸಣ್ಣ ಪುಟ್ಟ ರೌಡಿಸಂನಿಂದ ಶುರುವಾಗಿದ್ದು, ಇಂದು ಈ ಹಂತಕ್ಕೆ‌ ತಲುಪಿದ್ದಾರೆ. ಪೊಲೀಸರು ಹೇಗೂ ಬಂಧಿಸಿದ್ದಾರೆ. ಈಗ ಅವರ ಹೆಸರಲ್ಲಿರುವ ಸಾವಿರಾರು ಕೋಟಿ ಆಸ್ತಿಯ ಮೂಲವನ್ನು ಪರಿಶೀಲನೆ ಮಾಡಬೇಕು ಎಂದು ವೇಲು ನಾಯ್ಕರ್ ಆಗ್ರಹ ಮಾಡಿದ್ದಾರೆ. ಇನ್ನು ಇಂದು ಮುನಿರತ್ನಂ ಕಸ್ಟಡಿ ಅಂತ್ಯವಾಗಿದೆ. ಪೊಲೀಸರು ಯಾವ ತೀರ್ಮಾನ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...