Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

66 ನೇ ವರ್ಷದ ಪ್ರಸನ್ನ ಗಣಪತಿಯ ಮೆರವಣಿಗೆ ಮಹೋತ್ಸವಕ್ಕೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಚಾಲನೆ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.29 : ನಗರದ ಆನೆಬಾಗಿಲು ಬಳಿಯಿರುವ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಟಾಪಿಸಲಾಗಿರುವ 66 ನೇ ವರ್ಷದ ಪ್ರಸನ್ನ ಗಣಪತಿಯ ಮೆರವಣಿಗೆ ಮಹೋತ್ಸವಕ್ಕೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರು ಶುಕ್ರವಾರ ಸಂಜೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ಆನೆಬಾಗಿಲಿನಿಂದ ಹೊರಟ ಪ್ರಸನ್ನ ಗಣಪತಿ ಮೆರವಣಿಗೆ ಗಾಂಧಿವೃತ್ತ, ಧರ್ಮಶಾಲಾ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ ಮೂಲಕ ಸಾಗಿತು. ರಾತ್ರಿ ಹನ್ನೊಂದು ಗಂಟೆಗೆ ಚಂದ್ರವಳ್ಳಿಯಲ್ಲಿ ವಿಸರ್ಜಿಸಲಾಯಿತು.

ನಾಸಿಕ್‍ಡೋಲು, ಡೊಳ್ಳುಕುಣಿತ, ಕೀಲುಕುದರೆ, ಅನೇಕ ಕಲಾ ತಂಡಗಳು, ಶಾರದ ಬ್ರಾಸ್‍ಬ್ಯಾಂಡ್ ಗುರುಮೂರ್ತಿಯವರಿಂದ ವಾದ್ಯಗೋಷ್ಠಿ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಗೋಪಾಲ್‍ರಾವ್ ಜಾಧವ್, ಉಪಾಧ್ಯಕ್ಷ ರಾಜ್‍ಕುಮಾರ್, ನಾಗರಾಜ್‍ಬೇದ್ರೆ, ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಆನಂದ್, ನಿರ್ದೇಶಕರುಗಳಾದ ವೆಂಕಟೇಶ್, ಶಂಭು, ಯಶವಂತ್, ಕಾರ್ತಿಕ್, ರಮೇಶ್, ನಾರಾಯಣರಾವ್, ಶ್ಯಾಂಪ್ರಸಾದ್ ಇನ್ನು ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆಯುದ್ದಕ್ಕೂ ನೂರಾರು ಭಕ್ತರು ಜಮಾಯಿಸಿ ಪ್ರಸನ್ನ ಗಣಪತಿಯ ದರ್ಶನ ಪಡೆದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...