ಬೆಂಗಳೂರು: ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂದು ಹೇಳಿದಾಗಲೇ ಸಾಕಷ್ಟು ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿ ನಮಗೂ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹೊತ್ತವರೇ ಜಾಸ್ತಿ. ಇದೀಗ ಬಹಿರಂಗವಾಗಿಯೇ ಬಂಗಾರಪೇಟೆ ಶಾಸಕರು ಸಚಿವ ಸ್ಥಾನದ ಬಗ್ಗೆ ಮಾತನಾಡಿದ್ದಾರೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ನನಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ನಾನು ಅತಿ ಹಿರಿಯ ಶಾಸಕ. ಕೋಲಾರ ಜಿಲ್ಲೆಗೆ ಅನೇಕ ವರ್ಷಗಳಿಂದ ಅವಕಾಶ ಕೊಟ್ಟಿಲ್ಲ. ಹಿಂದೆ ನಮಗೆ 2.5 ವರ್ಷಗಳ ನಂತರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಆಗ ಕೊಡುವುದಾಗಿಯೂ ತಿಳಿಸಿದ್ದರು. ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ವೆ, ಡಿಕೆ ಶಿವಕುಮಾರ್ ಅವರು ಎರಡನೇ ಅವಧಿಗೆ ನೋಡೋಣಾ ಅಂತಾನು ಹೇಳಿದ್ದರು. ನನಗೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಸಿಎಂ ಸ್ಥಾನ ಖಾಲಿ ಇಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿ ಇದ್ದಾರೆ. ಈಗ ಸ್ಥಾನ ಖಾಲಿ ಇಲ್ಲ. ಖಾಲಿಯಾದರೆ ನೋಡೋಣಾ.

ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದು ನಮ್ಮ ಕೈನಲ್ಲಿ ಇಲ್ಲ. ಹೈಕಮಾಂಡ್ ಅದನ್ನು ನೋಡಿಕೊಳ್ಳುತ್ತದೆ. ಹೈಕಮಾಂಡ್ ಕೂಡ ಶಾಸಕರ ಅಭಿಪ್ರಾಯ ಪಡೆಯದೆ ಏನನ್ನು ಮಾಡುವುದಿಲ್ಲ ಎನಿಸುತ್ತದೆ ಎಂದು ಸಿಎಂ ಬದಲಾವಣೆ ವಿಚಾರದ ಬಗ್ಗೆಯು ಮಾತನಾಡಿದರು. ಒಟ್ನಲ್ಲಿ ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿಯೇ ದುಡಿಯುತ್ತಿರುವ ಶಾಸಕರು, ಈಗ ಸಚುವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಸಚಿವ ಸಂಪುಟ ಪುನರ್ ರಚನೆಯಾದರೆ ಯಾರಿಗೆ ಯಾವೆಲ್ಲಾ ಖಾತೆ ಸಿಗಬಹುದು ಎಂಬುದು ಗೊತ್ತಾಗುತ್ತದೆ.










