ಹುಬ್ಬಳ್ಳಿ; ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಕನ್ನಡಿಗರು ಇದ್ದಾರೆ. ಹಿಂದುಗಳನ್ನೆ ಹುಡುಕಿ ಕೊಂದ ಉಗ್ರರ ಸಂಹಾರಕ್ಕೆ ಕೇಂದ್ರ ಸರ್ಕಾರ ಟೊಂಕ ಕಟ್ಟಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪಹಲ್ಗಾಮ ತಲುಪಿದ್ದಾರೆ. ಕನ್ನಡಿಗರ ರಕ್ಷಣೆಯನ್ನು ಮಾಡಬೇಕೆಂದು ಸೂಚನೆ ನೀಡಿದ್ದಾರೆ. ಹೀಗಾಗಿಯೇ ಪಹಲ್ಗಾಮ ತಲುಪಿದ್ದಾರೆ.
ಜಮ್ಮು ಕಾಶ್ಮಿರಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಪ್ರವಾಸಿಗರ ಮೇಲೆ ಉಗ್ರರು ಅಟ್ಯಾಕ್ ಮಾಡಿದ್ದಾರೆ. 27ಕ್ಕೂ ಹೆಚ್ಚು ಮಂದಿ ಅಸು ನೀಗಿದ್ದಾರೆ. ಇದರಲ್ಲಿ ಕರ್ನಾಟಕದ ಇಬ್ಬರು ಮೃತ ಪಟ್ಟಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆಂದು ತೆರಳಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸಚಿವ ಸಂತೋಷ್ ಲಾಡ್ ಗೆ ಸೂಚನೆ ನೀಡಿದ್ದಾರೆ. ಹುಬ್ಬಳ್ಳಿಯಿಂದ ಶ್ರೀನಗರಕ್ಕೆ ತೆರಳಿದ ಸಂತೋಷ್ ಲಾಡ್ ಅವರಿಗೆ ಜರ್ನಿ ಸುಲಭವಾಗಿರಲಿಲ್ಲ. ಸಾಕಷ್ಟು ಹರಸಾಹಸ ಪಟ್ಟುಕೊಂಡು ಹೋಗಿದ್ದಾರೆ. ದಾಳಿ ನಡೆದ ವಿಚಾರ ತಿಳಿದ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ರಾತ್ರಿ 9.30ಕ್ಕೆ ಕರೆ ಮಾಡಿ ಪಹಲ್ಗಾಮಕ್ಕೆ ತೆರಳುವಂತೆ, ಅಲ್ಲಿನ ಕನ್ನಡಿಗರ ಸುರಕ್ಷತೆಯ ಜೊತೆಗೆ ನಿಲ್ಲುವಂತೆ ಸೂಚನೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದ ಕಾರಣಕ್ಕೆ ಧಾರವಾಡ ಪ್ರವಾಸದಲ್ಲಿದ್ದ ಸಂತೋಷ್ ಲಾಡ್ ಅವರು ಅದನ್ನು ನಿಲ್ಲಿಸಿ, ನೇರ ಶ್ರೀಗರ ಹೊರಡುವ ಪ್ಲ್ಯಾನ್ ಮಾಡಿಕೊಂಡರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾತ್ರಿ 10 ಗಂಟೆಗೆ ಬಂದ ಸಂತೋಷ್ ಲಾಡ್ ಅವರಿಗೆ ವಿಶೇಷ ವಿಮಾನದ ವ್ಯವಸ್ಥೆಯೇ ಕಷ್ಟಕರವಾಗಿತ್ತು. ಎರಡೂವರೆ ಗಂಟೆಗಳಕಾಲ ಪರದಾಡಿದ ನಂತರ ಮುಂಬೈ ಮೂಲದ ಕಂಪನಿಯೊಂದು ಸಂತೋಷ್ ಲಾಡ್ ಅವರಿಗೆ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡಿತು. ಬೆಳಗಿನ ಜಾವ ತಲುಪಿದ ಅವರು ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಕೆಲಸದಲ್ಲಿ ತೊಡಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















