ಮುಂದಿನ ಪೀಳಿಗೆಗಾಗಿ ಗಣಿಗಾರಿಕೆ ನಿಲ್ಲಬೇಕು, ಗಣಿ ಕಂಪನಿಗಳಿಂದ ಅಭಿವೃದ್ಧಿಯಾಗಿಲ್ಲ : ಬಿ.ಇ. ಜಗದೀಶ್

2 Min Read

ಸುದ್ದಿಒನ್, ಚಿತ್ರದುರ್ಗ, ಜುಲೈ. 11 : ಸುಮಾರು 50 ವರ್ಷಗಳಿಂದ ಕಂಪೆನಿಗಳು ಗಣಿಗಾರಿಕೆ ಮಾಡುತ್ತಿದ್ದು ಇಲ್ಲಿಯ ರೈತರಿಗೆ ಕೃಷಿ ಜಮೀನ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ರೈತರು ಅಸಹಾಯಕರಾಗಿದ್ದಾರೆ. ರೈತರ ಮೇಲೆ ಎಷ್ಟೋ ಬಾರಿ ಕಂಪನಿಗಳು ದೌರ್ಜನ್ಯ ನಡೆಸುವ ಸುದ್ದಿ ತಿಳಿದು ಬಂದಿದೆ.  ಆದರೆ ರೈತರಿಂದ ಕಂಪನಿಗೆ ತೊಂದರೆಯಾಗಿಲ್ಲ.

ಖಾಸಗಿ ಗಣಿ ಕಂಪನಿಗಳಿಂದ ರೈತರಿಗೆ ತೊಂದರೆ ಇದೆ.  ಇಲ್ಲಿನ ರಸ್ತೆಗಳು ಶಾಸಕರ ಅನುದಾನದಲ್ಲಿ ಆಗಿದೆಯೇ ಹೊರತು ಯಾವುದೇ ರೀತಿಯ ಸಿಎಸ್ಆರ್ ಫಂಡ್ ಮೂಲಕ ಮಾಡಿಲ್ಲ.  ಮುಂದಿನ ದಿನಗಳಲ್ಲಿ ಗಣಿಗಾರಿಕೆ ಮಾಡುವುದು ರದ್ದು ಮಾಡಬೇಕು ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಅಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಗೋವಿಂದ ಕಾರಜೋಳ ಅವರು
ಸಭೆ ನಡೆಸಿದ್ದರು. ಅವರು ಲೋಕಸಭಾ ಸದಸ್ಯರಾದ ಮೇಲೆ ಮೊದಲ ಬಾರಿಗೆ ಗಣಿ ಕಂಪನಿಗಳ ಸಭೆ ಕರೆದಿರುವುದು ತುಂಬಾ ಸಂತೋಷದ ಸಂಗತಿ.

ಈ ಸಭೆಯಲ್ಲಿ 5 ಖಾಸಗಿ ಗಣಿ ಕಂಪನಿಗಳು ಜನರಿಗೆ ಸೌಲಭ್ಯಗಳ  ಕಲ್ಪಿಸುವ ಬಗ್ಗೆ ಸಿಎಸ್ಆರ್ ಫಂಡ್ ಕುರಿತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಎಂದು ಮಾನ್ಯ ಲೋಕಸಭಾ ಸದಸ್ಯರಾದ ಗೋವಿಂದ್ ಕಾರಜೋಳ ಅವರು ಸಭೆ ಕರೆದು ಮಾತನಾಡಿದ್ದರು.
ಅವರು ಸಭೆಯಲ್ಲಿ ತಿಳಿಸಿದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಕಂಪನಿಗಳಿಂದ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯ ಮಾಡಬೇಕು ಎಂದು ತಿಳಿಸಿದರು.

ರೈತರು ಜಮೀನಿಗೆ ಹೋಗುವ ರಸ್ತೆಯಲ್ಲಿ ಗಣಿ ಲಾರಿಗಳು ಹಾದು ಹೋಗುತ್ತವೆ. ಇಲ್ಲಿ ಲಾರಿಗಳದ್ದೇ ದರ್ಬಾರ್ ಇದನ್ನು ಯಾರೂ ಕೇಳುವವರಿಲ್ಲ.
ಈ ಸುತ್ತಮುತ್ತ 5 ಗ್ರಾಮಗಳಿದ್ದು ಈ ಗ್ರಾಮಗಳಿಗೆ  ರಸ್ತೆ,  ಶೌಚಾಲಯ, ಶಾಲೆಗಳಿಗೆ ಕಂಪ್ಯೂಟರ್,  ಉಪಕರಣ, ಸಮವಸ್ತ್ರ,  ಊಟದ ವ್ಯವಸ್ಥೆ, ಹೈಟೆಕ್ ಆಸ್ಪತ್ರೆ, ಗಣಿ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ವ್ಯವಸ್ಥೆ ಮಾಡಬೇಕು. ಆದರೆ ಕಂಪನಿಗಳ ಅಸಹಾಯಕತೆಯಿಂದ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ.  ಇನ್ನು ಮುಂದಾದರು ಕಂಪನಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಂಪನಿಗಳ ವಿರುದ್ಧ ಹೋರಾಟ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *