Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾನಸಿಕ ರೋಗಿಗಳನ್ನು ನರ ರೋಗಿಗಳೆಂದು ಪರಿಗಣಿಸಬೇಕಿದೆ : ಡಾ. ಮಂಜುನಾಥ್

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಅ. 31:
ಮನೋರೋಗ ಬರುವುದು ನರಗಳ ವಿಕೇಸ್‌ನಿಂದ ಇದು ಯಾವುದೇ ದೆವ್ವ, ಭೂತದ ಕಾಟದಿಂದ ಅಲ್ಲ ಸರಿಯಾದ ರೀತಿಯಲ್ಲಿ ಸಕಾಲದಲ್ಲಿ ಚಿಕಿತ್ಸೆಯನ್ನು ಪಡೆದರೆ ಅದನ್ನು ಗುಣ ಪಡಿಸಬಹುದಾಗಿದೆ ಎಂದು ಮನೋವೈದ್ಯ ಸಲಹೆಗಾರರಾದ ಡಾ. ಮಂಜುನಾಥ್ ತಿಳಿಸಿದರು.

ರೋಟರಿ ಕ್ಲಬ್ ಚಿನ್ಮೂಲಾದ್ರಿ ಆಶ್ರಯದಲ್ಲಿ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರದ ಸಭೆಯಲ್ಲಿ ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ಎಂಬ ವಿಷಯದ ಬಗ್ಗೆ ಮಾತನಾಡಿದರು.

ದೇಶದಲ್ಲಿ ಜನತೆ ಮಾನಸಿಕ ಖಾಯಿಲೆಗಳು ಎಂದು ಗುರುತಿಸದೇ ಅದನ್ನು ದೆವ್ವ, ಭೂತಗಳ ಕಾಟ ಎಂದು ಮಂತ್ರವಾದಿ, ಮಾಂತ್ರಿಕರ ಬಳಿ ಹೋಗುತ್ತಾರೆ, ಇದು ಸರಿಯಾದ ಕ್ರಮವಲ್ಲ, ಈ ಖಾಯಿಲೆ ಬರುವುದು ಮಾನವನ ದೇಹದಲ್ಲಿ ಆಗುವ ನರಗಳ ವೀಕೇಸ್‌ನಿಂದ ಹೊರೆತು ಯಾವುದೇ ದೆವ್ವ ಭೂತದ ಕಾಟದಿಂದ ಅಲ್ಲ ಎಂದರು.

ಮಾನಸಿಕ ಖಾಯಿಲೆ ಯಾರನ್ನು ಸಹಾ ಬಿಟ್ಟಿಲ್ಲ ಎಲ್ಲರನ್ನು ಸಹಾ ಉದ್ಯಮಿಗಳು, ಚಲನಚಿತ್ರ ನಟರು, ರಾಜಕಾರಣಿಗಳು, ಸಮಾನ್ಯ ಜನರನ್ನು ಸಹಾ ಈ ರೋಗ ಕಾಡುತ್ತದೆ. ಈ ಹಿಂದೆ ಇದನ್ನು ಮಾನಸಿಕ ಖಾಯಿಲೆ ಎಂದು ಇದು ಬಂದವರಿಗೆ ದೆವ್ವ ಹಿಡಿದಿದೆ ಇವರನ್ನು ಮಂತ್ರವಾದಿಗಳು ಇಲ್ಲವೇ ಅಜ್ಜಯ್ಯನ ಹತ್ತಿರ ಕರೆದುಕೊಂಡು ಹೋಗಿ ಎನ್ನುತ್ತಿದ್ದರು ಆದರೆ ವಿಜ್ಞಾನ ಬೆಳದಂತೆ ಈ ರೋಗಕ್ಕೂ ಸಹಾ ಚಿಕಿತ್ಸೆಯನ್ನು ಕಂಡು ಹಿಡಿಯಲಾಗಿದೆ. ಈ ಖಾಯಿಲೆಯ ಬಗ್ಗೆ ಜನರಿಗೆ ತಿಳುವಳಿಕೆಯನ್ನು ನೀಡಬೇಕಾದ ಅಗತ್ಯ ಇದೆ. ಜನರ ತಪ್ಪು ತಿಳುವಳಿಕೆಯಿಂದ ಹಲವಾರು ಮಾನಸಿಕ ರೋಗಿಗಳು ತೊಂದರೆಯನ್ನು ಪಡುತ್ತಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.

ಮಾನಸಿಕ ರೋಗಿಗೆ ಚಿಕಿತ್ಸೆಯನ್ನು ನೀಡುವ ಮುಂಚೆ ಅವರ ಅನುಮತಿ ಪಡೆಯುವುದು ಅಗತ್ಯವಾಗಿದೆ ಈ ಹಿಂದೆ ಎಲ್ಲಾ ಮಾನಸಿಕ ರೋಗಿಗಳು ಎಂದರೆ ಸಾಕು ಚಿಕಿತ್ಸೆಯನ್ನು ನೀಡಲಾಗುತ್ತಿತು ಆದರೆ ಈಗ ಕಾನೂನು ಬಿಗಿಯಾಗಿದೆ, ಮಾನಸಿಕ ರೋಗಿಗಳ ಅಥವಾ ಅವರ ಸಂಬಂಧಿಗಳ ಅನುಮತಿಯನ್ನು ಪಡೆದ ನಂತರವೇ ಚಿಕಿತ್ಸೆಯನ್ನು ಪ್ರಾರಂಭ ಮಾಡಬೇಕಿದೆ. ಇಂತಹ ಕಾನೂನಿನ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದು ಅಗತ್ಯವಾಗಿದೆ. ಜನರಿಗೆ ಇದರ ಬಗ್ಗೆ ತಿಳುವಳಿಕೆ ಕಡಿಮೆಯಿದೆ ಎಂದು ನುಡಿದರು.

ಮಾನಸಿಕ ರೋಗಿಗಳು ಇಲ್ಲದಿರುವುದನ್ನು ಇದೆ ಎಂದು ತಿಳಿಸುವ ಕಾರ್ಯವನ್ನು ಮಾಡುತ್ತಾರೆ. ದೇಹದಲ್ಲಿನ ನರಗಳ ದೌರ್ಬಲ್ಯ ಅವರನ್ನು ಆ ರೀತಿ ಮಾಡಿಸುತ್ತದೆ. ಈ ಮಾನಸಿಕ ಖಾಯಿಲೆ ಯಾರನ್ನು ಸಹಾ ಬಿಟ್ಟಿಲ್ಲ ಎಲ್ಲರನ್ನು ಸಹಾ ಕಾಡುತ್ತದೆ. ಮಾನಸಿಕ ರೋಗಿಗಳನ್ನು ನರ ರೋಗಿಗಳೆಂದು ಪರಿಗಣಿಸಬೇಕಿದೆ. ಚಿಕಿತ್ಸೆಯನ್ನು ಪಡೆಯುವುದರ ಮೂಲಕ ಅವರು ಸಾಮಾನ್ಯ ಸ್ಥಿತಿಗೆ ಬರುತ್ತಾರೆ ಎಂದು ಮಂಜುನಾಥ್ ತಿಳಿಸಿದರು.

ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷರಾದ ಶಂಕರಪ್ಪ ಮಾತನಾಡಿ, ಮಾನಸಿಕ ರೋಗವನ್ನು ಚಿಕಿತ್ಸೆ ಪಡೆಯುವುದರ ಮೂಲಕ ಗುಣ ಪಡಿಸಬಹುದಾಗಿದೆ. ಇದರ ಬಗ್ಗೆ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಅಗತ್ಯ ಇದೆ. ಇದು ಯಾವುದೇ ದೆವ್ವ-ಭೂತದ ಕಾಟವಲ್ಲ ನರಗಳ ದೌರ್ಬಲ್ಯದಿಂದ ಬರುವಂತ ಖಾಯಿಲೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಕಾರ್ಯದರ್ಶಿ ಲಕ್ಷ್ಮೀಕಾಂತ, ಶ್ರೀಮತಿ ಗಾಯತ್ರಿ, ವೀಣಾ, ಶಿವರಾಂ, ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು. ವಾಲ್ಮೀಕಿ ಭಾವ ಚಿತ್ರಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲಾ ಪುಷ್ಪ ನಮನವನ್ನು ಸಲ್ಲಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಾಕಲೇಟ್ ಕೊಡಿಸಿ ಅನ್ಯಕೋಮಿನ ಯುವಕನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ: ಹಿರಿಯೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ..!

ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್

ಇತ್ತಿಚೆಗಷ್ಟೇ ಗೆಲುವಿನ ಹಾದಿಯಲ್ಲಿ ಆರ್ಸಿಬಿ : ಇಂದು ನಡೆಯಬೇಕಿದ್ದ ಮ್ಯಾಚ್ ರದ್ದಾಗುತ್ತಾ..?

ಬೆಂಗಳೂರು: ನಿನ್ನೆಯಿಂದ ರಾಜ್ಯಾದ್ಯಂತ ಮಳೆರಾಯನ ದರ್ಶನವಾಗಿದೆ. ಎಲ್ಲೆಲ್ಲೂ ಉತ್ತಮ ಮಳೆ ಬಂದಿದೆ. ಇನ್ನು ಮೂರು ದಿನಗಳ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಇದು ಕ್ರಿಕೆಟ್ ಪ್ರಿಯರಿಗೆ ಮ್ಯಾಚ್ ಬಗ್ಗೆ ಚಿಂತೆ

ಇತ್ತಿಚೆಗಷ್ಟೇ ಗೆಲುವಿನ ಹಾದಿಯಲ್ಲಿ ಆರ್ಸಿಬಿ : ಇಂದು ನಡೆಯಬೇಕಿದ್ದ ಮ್ಯಾಚ್ ರದ್ದಾಗುತ್ತಾ..?

ಬೆಂಗಳೂರು: ನಿನ್ನೆಯಿಂದ ರಾಜ್ಯಾದ್ಯಂತ ಮಳೆರಾಯನ ದರ್ಶನವಾಗಿದೆ. ಎಲ್ಲೆಲ್ಲೂ ಉತ್ತಮ ಮಳೆ ಬಂದಿದೆ. ಇನ್ನು ಮೂರು ದಿನಗಳ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಇದು ಕ್ರಿಕೆಟ್ ಪ್ರಿಯರಿಗೆ ಮ್ಯಾಚ್ ಬಗ್ಗೆ ಚಿಂತೆ

error: Content is protected !!