ಇಂದಿನಿಂದ ಸಚಿವರು, ಶಾಸಕರ ಸಭೆ : ಡಿಕೆಶಿ ಗೈರಿನ ಬಗ್ಗೆ ಪರಮೇಶ್ವರ್ ಏನಂದ್ರು..?

1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದಿನಿಂದ ನಾಲ್ಕು ದಿನಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಜೊತೆಗೆ ಸಭರ ನಡೆಸಲಿದ್ದಾರೆ. ಮೈಸೂರಿನಿಂದಲೇ ಮೊದಲ ಸಭೆ ಆರಂಭಿಸಲಿದ್ದಾರೆ. ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿಗಳು ಕೆಲವು ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಆ ಸಂಬಂಧ ಸಚಿವರು, ಶಾಸಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ಉಸ್ತುವಾರಿ ಸಚಿವರು, ಶಾಸಕರ ಜೊತೆಗಿನ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಇರುವುದಿಲ್ಲ ಎಂಬುದು ತಿಳಿದು ಬಂದಿದೆ. ಸಭೆಗೆ ಆಹ್ವಾನ ನೀಡದೆ ಇರುವುದಕ್ಕೆ ಡಿಕೆಶಿ ಅಸಮಾಧಾನಗೊಂಡಿದ್ದಾರೆಎ ಅಂತಾನು ಮೂಲಗಳು ಹೇಳ್ತಾ ಇದೆ. ಕೆಲ ಶಾಸಕರ ಬಳಿ ಈ ಬಗ್ಗೆ ಬೇಸರವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.

ಇನ್ನು ಸಭೆಗೆ ಡಿಕೆ ಶಿವಕುಮಾರ್ ಬಾರದೆ ಇರುವುದರ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಇವತ್ತು ನಮ್ಮ ಪಕ್ಷದ ಶಾಸಕರ ಜೊತೆಗೆ ಜಿಲ್ಲಾವಾರು ಕರೆದು ಮಾತನಾಡುತ್ತಿದ್ದಾರೆ. ಉದ್ದೇಶ ಏನು ಅಂದ್ರೆ ಅವರವರ ಕ್ಷೇತ್ರದಲ್ಲಿ ಒಬ್ಬೊಬ್ಬರಿಗೆ 50 ಕೋಟಿ ಕೊಡಬೇಕೆಂದು ನಿರ್ಧಾರ ಮಾಡಿದ್ದಾರೆ. ಅದುಒಂದು ಭಾಗ. ಮತ್ತು ಬೇರೆ ಬೇರೆ ಕೆಲಸಗಳ ಬಗ್ಗೆ, ಪಕ್ಷದ ಸಂಘಟನೆ ಬಗ್ಗೆ ಅವರು ಮತ್ತು ನಮ್ಮ ಅಧ್ಯಕ್ಷರು ಮಾತನಾಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಇದು ಹೊಸದೇನು ಅಲ್ಲ. ಹಿಂದೆ ಕೂಡ 2013-15,18 ರಲ್ಲಿ ಇರುವಾಗಲೂ ಮಾಡಿದ್ದರು. ನಾನು ಅಧ್ಯಕ್ಷನಾಗಿದ್ದೆ. ಆಗ ಮುಖ್ಯಮಂತ್ರಿಗಳೇ ಕೆಪಿಸಿಸಿ ಕಚೇರಿಗೆ ಬಂದು ಅಹವಾಲನ್ನ ಕೇಳಿದ್ದರು. ಈಗ ಐದು ವರ್ಷದ ಅವಧಿಯಲ್ಲಿ ಮಧ್ಯಕ್ಕೆ ಬಂದಿದ್ದೇವೆ. ಈಗ ಇದು ಒಳ್ಳೆಯದು. ಡಿಕೆ ಶಿವಕುಮಾರ್ ಅವರು ಸಹ ಇರ್ತಾರೆ. ಅವರಿಗೇನೋ ಆರೋಗ್ಯ ಸರಿ ಇಲ್ಲ ಅಂತಿದ್ರು. ಸ್ವಲ್ಪ ದಿನ ಡೆಂಗ್ಯೂ ಆಗಿತ್ತು. ಅವ್ರು ಇರ್ತಾರೆ ಅಂದ್ಕೊಂಡಿದ್ದೀನಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks